ಮುಂಬೈ ಮಳೆಗೆ ನಲುಗಿದ ಜನತೆ, ಈ ಚಿತ್ರಗಳೇ ಎಲ್ಲ ಹೇಳುತ್ತೆ

ಮುಂಬೈ, ಜು.2: ಮುಂಬೈ ಜನತೆ ಮಹಾ ಮಳೆಗೆ ಅಕ್ಷರಶಃ ನಲುಗಿ ಹೋಗಿದೆ. ಎಲ್ಲೂ ಕಾಲಿಡುವಂತಿಲ್ಲ, ಆರೋಗ್ಯ ಸರಿ ಇಲ್ಲ ವೆಂದರೂ ಆಸ್ಪತ್ರೆ ಹೋಗುವುದು ಕೂಡ ಕಷ್ಟ.

ಇನ್ನು ಮಕ್ಕಳನ್ನು ಶಾಲೆಗೆ ಕಳುಹಿಸುವ ಮಾತೇ ಇಲ್ಲ. ಒಂದೊಮ್ಮೆ ರಜೆ ಘೋಷಿಸದಿದ್ದರೂ ಕೂಡ ಯಾರೂ ಮನೆಯಿಂದ ಹೊರಗೆ ಹೋಗುವ ಪರಿಸ್ಥಿತಿ ಅಲ್ಲಿಲ್ಲ.

ರಸ್ತೆಗಳೆಲ್ಲವೂ ನದಿಯಂತೆ ಗೋಚರಿಸುತ್ತಿವೆ. ರೈಲು ಸಂಚಾರ, ವಿಮಾನ ಹಾರಾಟ, ಬಸ್‌ಗಳ ಓಡಾಟ ಎಲ್ಲವೂ ಸ್ಥಗಿತಗೊಂಡಿದೆ. ಕೇವಲ ಮಳೆಯ ನೀರೊಂದೇ ಹರಿಯುತ್ತಿದೆ.

ಆಟೋಗಳು, ದ್ವಿಚಕ್ರ ಸವಾರರ ಪರಿಸ್ಥಿತಿ ಹೇಳತೀರದು. ಹಲವು ಮನೆಗಳು ಕುಸಿಯುವ ಹಂತದಲ್ಲಿದೆ. ಮನೆಗಳಿಗೆ ನೀರು ನುಗ್ಗಿದೆ. ಕೆಲವು ಅರ್ಧ ಮನೆಗಳು ಮುಳುಗಿಯೇ ಹೋಗಿವೆ.

ಇನ್ನೂ ಕೆಲವರನ್ನು ಸುರಕ್ಷಿತ ಪ್ರದೇಶಗಳಿಗೆ ಕಳುಹಿಸಿಕೊಡಲಾಗಿದೆ. ಇಲ್ಲಿ ನೀಡಿರುವ ಚಿತ್ರಗಳೇ ಎಲ್ಲವನ್ನೂ ನಿಮಗೆ ವಿವರಿಸುತ್ತದೆ.

ಮುಂಬೈನಲ್ಲಿ ಕಳೆದ ಒಂದು ವಾರದಿಂದೀಚೆಗೆ ಭಾರಿ ಮಳೆಯಾಗುತ್ತಿದೆ. ಮಳೆಗೆ ಕಳೆದ 24 ಗಂಟೆಗಳಲ್ಲಿ 20 ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ.

ಸರ್ಕಾರಿ, ಖಾಸಗಿ ಕಚೇರಿಗಳು, ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮಲಾಡ್ ಪ್ರದೇಶದಲ್ಲಿ ಕಾಂಪೌಂಡ್ ಕುಸಿದು 18 ಮಂದಿ ಮೃತಪಟ್ಟಿದ್ದು, 13ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಇನ್ನು ಕರ್ನಾಟಕ, ಚೆನ್ನೈ ಸೇರಿದಂತೆ ಹಲವೆಡೆ ಮುಂಗಾರು ಚುರುಕುಗೊಂಡಿದೆ ಕಳೆದ ಎರಡು ದಿನಗಳಿಂದ ಸಾಕಷ್ಟು ಮಳೆಯಾಗಿದೆ. ಚೆನ್ನೈನಲ್ಲಿ ಮಳೆಯ ನೀರಿನಲ್ಲಿ ಮುಳುಗಿ ಮೂವರು ಮೃತಪಟ್ಟಿರುವ ಘಟನೆ ವರದಿಯಾಗಿದೆ.

 ಹಲವು ಮುಂಬೈ ವಿಮಾನಗಳು ಬೆಂಗಳೂರಿಗೆ ಡೈವರ್ಟ್

ಹಲವು ಮುಂಬೈ ವಿಮಾನಗಳು ಬೆಂಗಳೂರಿಗೆ ಡೈವರ್ಟ್

ಮುಂಬೈನಲ್ಲಿ ಭಾರಿ ಮಳೆಗೆ ಹಲವು ವಿಮಾನಗಳು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಮಾರ್ಗ ಬದಲಾಯಿಸಲಾಗಿದೆ ಎಂದು ಕೆಐಎ ಮೂಲಗಳು ತಿಳಿಸಿವೆ. ಸದ್ಯಕ್ಕೆ ಮುಂಬೈ ಏರ್‌ಪೋರ್ಟ್ ಬಂದ್ ಮಾಡಲಾಗಿದ್ದು, ಟಿಕೆಟ್ ಕೌಂಟರ್ ಕೂಡ ಬಂದ್ ಮಾಡಲಾಗಿದೆ. ಬೆಂಗಳೂರು ಸೇರಿದಂತೆ ಬೇರೆ ಬೇರೆ ಕಡೆ ವಿಮಾನಗಳನ್ನು ಡೈವರ್ಟ್ ಮಾಡಲಾಗಿದೆ.

ಮುಂಬೈನಲ್ಲಿ ಅತಿ ಹೆಚ್ಚು ಮಳೆಯಾಗುತ್ತಿರುವುದರಿಂದ 55 ವಿಮಾನಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಹಾಗೆಯೇ 52 ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಮುಂಬೈ ಏರ್‌ಪೋರ್ಟ್‌ನಲ್ಲಿ ಟಿಕೆಟ್ ಬುಕಿಂಗ್ ಕೂಡ ಸ್ಥಗಿತಗೊಳಿಸಲಾಗಿದೆ.

 ಮುಂಬೈನಲ್ಲಿ ಒಂದೇ ದಿನದಲ್ಲಿ 944 ಮಿ.ಮೀ ಮಳೆ

ಮುಂಬೈನಲ್ಲಿ ಒಂದೇ ದಿನದಲ್ಲಿ 944 ಮಿ.ಮೀ ಮಳೆ

ಮುಂಬೈನಲ್ಲಿ ಒಂದೇ ದಿನದಲ್ಲಿ 944 ಮಿ.ಮೀನಷ್ಟು ಮಳೆಯಾಗಿದೆ.ಸೋಮವಾರ ರಾತ್ರಿ ಹಾಗೂ ಮಂಗಳವಾರ ಬೆಳಗ್ಗೆವರೆಗೆ 944 ಮಿ.ಮೀ ಮಳೆ ಸುರಿದಿದೆ.44 ವರ್ಷಗಳ ಹಿಂದೆ 1975ರ ಜುಲೈ ತಿಂಗಳಲ್ಲಿ 375.2 ಮಿ.ಮೀನಷ್ಟು ಮಳೆಯಾಗಿತ್ತು. ಇದರ ಪರಿಣಾಮ ಬೆಂಗಳೂರಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ.

 ಮುಂಬೈ ಹಾಗೂ ಪುಣೆಯಲ್ಲಿ ಪ್ರತ್ಯೇಕ ಘಟನೆ 23 ಮಂದಿ ಸಾವು

ಮುಂಬೈ ಹಾಗೂ ಪುಣೆಯಲ್ಲಿ ಪ್ರತ್ಯೇಕ ಘಟನೆ 23 ಮಂದಿ ಸಾವು

ಮೂಮಬೈನ ಮಲಾಡ್ ಪ್ರದೇಶದಲ್ಲಿ ಕಾಂಪೌಂಡ್ ಕುಸಿದು 18 ಮಂದಿ ಕಾರ್ಮಿಕರು ಮೃತಪಟ್ಟಿದ್ದು, ಎನ್‌ಡಿಆರ್‌ಎಫ್‌ ಇಂದ ಇನ್ನೂ ಶೋಧ ಕಾರ್ಯ ಮುಂದುವರೆದಿದೆ. ಸಿನ್‌ಘಡ ಕಾಲೇಜು ಕಾಂಪೌಂಡ್ ಕುಸಿದು ಐವರು ಮೃತಪಟ್ಟಿದ್ದು, ನಾಲ್ಕು ಮಂದಿ ಗಾಯಗೊಂಡಿರುವ ಘಟನೆ ಪುಣೆಯಲ್ಲಿ ಇಂದು ಬೆಳಗಿನ ಜಾವ ನಡೆದಿದೆ.

 ತಗ್ಗು ಪ್ರದೇಶದಲ್ಲಿದ್ದವರ ಸ್ಥಳಾಂತರ

ತಗ್ಗು ಪ್ರದೇಶದಲ್ಲಿದ್ದವರ ಸ್ಥಳಾಂತರ

ತಗ್ಗು ಪ್ರದೇಶದಲ್ಲಿದ್ದ ಸಾವಿರಕ್ಕೂ ಹೆಚ್ಚು ಮಂದಿಯನ್ನು ಸ್ಥಳಾಂತರಿಸಲಾಗಿದೆ. ಮುಂದಿನ ಕೆಲವು ಗಂಟೆಗಳಲ್ಲಿ ಭಾರಿ ಮಳಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದ್ದು, ಎಚ್ಚರಿಕೆಯಂತೆ ಪುಣೆ ಮಾಲಿಕೆಯು ನಾಗರಿಕರಲ್ಲಿ ಮನವಿ ಮಾಡಿದೆ. ಎನ್‌ಡಿಆರ್‌ಎಫ್ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಸಿದ್ಧಗೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+