ಹೋಟೆಲ್ ರೂಮ್ ಕ್ಯಾನ್ಸಲ್ ಆದ್ಮೇಲೆ 'ಐ ಲವ್ ಮುಂಬೈ' ಎಂದ ಡಿಕೆಶಿ

Recommended Video

      ಡಿ.ಕೆ.ಶಿವಕುಮಾರ್‍ಗೆ ಮುಂಬೈನಲ್ಲಿ ತೊಂದರೆ | Oneindia Kannada

      ಮುಂಬೈ, ಜುಲೈ 10: ಅತೃಪ್ತ ಶಾಸಕರನ್ನು ಮನ ಓಲೈಕೆಗೆ ಮುಂಬೈಗೆ ತೆರಳಿದ ಕರ್ನಾಟಕದ ಜಲ ಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರು ರಿನೈಸಾನ್ಸ್ ಹೋಟೆಲ್ ಮುಂದೆ ಹೈಡ್ರಾಮಾಕ್ಕೆ ಸಾಕ್ಷಿಯಾದರು, ಡ್ರಾಮಾದಲ್ಲಿ ಮುಖ್ಯ ಪಾತ್ರವಹಿಸಿದರು. ಒಟ್ಟಾರೆ, ಈ ರಾಜೀನಾಮೆ ಪ್ರಹಸನದಿಂದ ರಾಷ್ಟ್ರಮಟ್ಟದಲ್ಲಿ ಡಿಕೆಶಿ ಮಿಂಚಿದ್ದು ಸುಳ್ಳಲ್ಲ.

      ಅತೃಪ್ತರನ್ನು ಭೇಟಿ ಮಾಡದಂತೆ ಡಿಕೆಶಿ, ಜಿಟಿ ದೇವೇಗೌಡ, ಶಿವಲಿಂಗೇಗೌಡ ಹಾಗೂ ಬಾಲಕೃಷ್ಣ ಅವರನ್ನು ಮುಂಬೈ ಪೊಲೀಸರು ತಡೆಯೊಡ್ಡಿದ್ದಾರೆ.

      ಡಿಕೆ ಶಿವಕುಮಾರ್ ಅವರಿಂದ ನಮಗೆ ಬೆದರಿಕೆಯಿದೆ ಎಂದು ಕಾಂಗ್ರೆಸ್ ಶಾಸಕರು, ಮುಂಬೈ ಪೊಲೀಸರಿಗೆ ದೂರು ನೀಡಿ, ರಕ್ಷಣೆ ಕೋರಿದ್ದರು.

      ಆದರೆ, ನಾನು ಇದೇ ಹೋಟೆಲ್ ನಲ್ಲಿ ರೂಮ್ ಬುಕ್ ಮಾಡಿದ್ದೇನೆ, ಬೆಳಗ್ಗೆ 5 ಗಂಟೆಗೆ ಎದ್ದು ಇಲ್ಲಿಗೆ ಬಂದಿದ್ದೇನೆ, ಆತಿಥ್ಯಕ್ಕೆ ಹೆಸರಾದ ಮುಂಬೈನಲ್ಲಿ ಹೋಟೆಲ್ ಒಳಗೆ ಹೋಗಲು ಬಿಡುತ್ತಿಲ್ಲವಲ್ಲ, ನಾನು ಇನ್ನು ಸ್ನಾನ ಮಾಡಿಲ್ಲ. ಒಳಗೆ ಹೋಗಿ ಕಾಫಿ ಕುಡಿಯುವ ಅವಕಾಶ ಕೊಡಿ ಎಂದು ಕೇಳಿಕೊಂಡರು.

      ಆದರೆ, ಡಿಕೆ ಶಿವಕುಮಾರ್ ಅವರ ಹೆಸರಿನಲ್ಲಿ ಬುಕ್ ಆಗಿದ್ದ ಎರಡು ರೂಮ್ ಗಳನ್ನು ಕ್ಯಾನ್ಸಲ್ ಮಾಡಲಾಗಿದೆ ಎಂದು ಹೋಟೆಲ್ ಮ್ಯಾನೇಜ್ಮೆಂಟ್ ನಂತರ ತಿಳಿಸಿದೆ.

      ನೂರಾರು ಜನರು ಮುಂಬೈಗೆ ಪ್ರತಿದಿನ ಬರುತ್ತಾರೆ, ನಾನು ಹಾಗೆ ಬಂದಿದ್ದೇನೆ, ಆತಿಥ್ಯಕ್ಕೆ ಹೆಸರಾದ ಊರಿದು ಎಂದಿದ್ದಾರೆ. ನಾನು ನನ್ನ ಸ್ನೇಹಿತರ ಜೊತೆ ಮಾತನಾಡದೆ ಇಲ್ಲಿಂದ ಕದಲುವುದಿಲ್ಲ ಎಂದರು.

      ರೂಮ್ ಕ್ಯಾನ್ಸಲ್ ಆದಮೇಲೆ ಏನಾಯ್ತು

      ರೂಮ್ ಕ್ಯಾನ್ಸಲ್ ಆದಮೇಲೆ ಏನಾಯ್ತು

      ರೈನಾಸಾನ್ಸ್ ಹೋಟೆಲ್ ನಲ್ಲಿ ಡಿಕೆ ಶಿವಕುಮಾರ್ ಹೆಸರಿನಲ್ಲಿ ಎರಡು ರೂಮುಗಳು ಬುಕ್ ಆಗಿತ್ತು. ಆದರೆ, ಎರಡು ರೂಮ್ ಗಳನ್ನು ಇಂದು ಬೆಳಗ್ಗೆ ಕ್ಯಾನ್ಸಲ್ ಮಾಡಲಾಗಿದೆ ಎಂದು ಮ್ಯಾನೇಜ್ಮೆಂಟ್ ತಿಳಿಸಿದೆ. ಈ ಬಗ್ಗೆ ಡಿಕೆ ಶಿವಕುಮಾರ್ವಿಧಿಯಿಲ್ಲದೆ, ಹೋಟೆಲ್ ಹೊರಗಡೆ ನಿಂತು ಡಿಕೆ ಶಿವಕುಮಾರ್ ಕಾಫಿ ಕುಡಿದರು, ಹೋಟೆಲ್ ರೂಮ್ ಕ್ಯಾನ್ಸಲ್ ಆಗಿದ್ದರ ಬಗ್ಗೆ ಪ್ರತಿಕ್ರಿಯಿಸಿ, ನನ್ನಂತ ಗ್ರಾಹಕರನ್ನು ಹೊಂದಲು ಹೆಮ್ಮೆ ಪಡಬೇಕು, ಐ ಲವ್ ಮುಂಬೈ, ಐ ಲವ್ ಹೋಟೆಲ್, ನನಗೆ ಬೇರೆ ಹೋಟೆಲ್ ಗಳಿವೆ ಎಂದಿದ್ದಾರೆ.

      ಎಷ್ಟು ಕಾಲ ಈ ರೀತಿ ಹೋಟೆಲ್ ಹೊರಗಡೆ?

      ಎಷ್ಟು ಕಾಲ ಈ ರೀತಿ ಹೋಟೆಲ್ ಹೊರಗಡೆ?

      ನಂತರ ಎಷ್ಟು ಕಾಲ ಈ ರೀತಿ ಹೋಟೆಲ್ ಹೊರಗಡೆ ಇರುತ್ತೀರಿ ಎಂದು ಕನ್ನಡ ಖಾಸಗಿ ಮಾಧ್ಯಮದ ಪ್ರತಿನಿಧಿಯೊಬ್ಬರುಪ್ರಶ್ನೆಗೆ ಉತ್ತರಿಸಿ, ನನ್ನ ಸ್ನೇಹಿತರು ಒಳಗಡೆ ಇದ್ದಾರೆ ಅವರನ್ನು ಮಾತನಾಡಿಸದೆ ಹೋಗುವುದಿಲ್ಲ, ಮಳೆ ಬರಲಿ, ಏನೇ ಆಗಲಿ, ನನಗೇನಾದರೂ ಆಗಿ ನಾನು ಕುಸಿದು ಬಿದ್ದರೆ ನೀವು ಮಾತ್ರೆ ಕೊಡುವುದಿಲ್ಲವೇ ಎಂದು ಮಾಧ್ಯಮ ಪ್ರತಿನಿಧಿಗಳತ್ತ ಪ್ರಶ್ನೆ ಎಸೆದು ನಗೆ ಚೆಲ್ಲಿದರು.

      ರಮೇಶ್ ಕುಮಾರ್ ವಿರುದ್ಧ ಸುಪ್ರೀಂಕೋರ್ಟಿಗೆ ಮೊರೆ

      ರಮೇಶ್ ಕುಮಾರ್ ವಿರುದ್ಧ ಸುಪ್ರೀಂಕೋರ್ಟಿಗೆ ಮೊರೆ

      ಈ ನಡುವೆ ಹೋಟೆಲ್ ನಲ್ಲಿರುವ ಅತೃಪ್ತ ಶಾಸಕರು ವಿಧಾನಸಭಾ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಸುಪ್ರೀಂಕೋರ್ಟಿಗೆ ಮೊರೆ ಹೋಗಿದ್ದಾರೆ. ರಾಜೀನಾಮೆಗಳನ್ನು ತಿರಸ್ಕರಿಸಲು ಸೂಕ್ತ ಕಾರಣ ಕೂಡಾ ನೀಡದೆ ವಿಳಂಬ ನೀತಿ ಅನುಸರಿಸುತ್ತಿರುವುದು ಸರಿಯಲ್ಲ ನಮಗೆ ನ್ಯಾಯಬೇಕಿದೆ ಎಂದು ಕೋರಿದ್ದಾರೆ. ಅತೃಪ್ತರ ಪರ ಹಿರಿಯ ನ್ಯಾಯವಾದಿ ಮುಕುಲ್ ರೋಹ್ಟಗಿ ಅವರು ವಾದಿಸಲಿದ್ದು, ಸಿಜೆಐ ರಂಜನ್ ಗೊಗಾಯ್ ಅವರಿರುವ ನ್ಯಾಯಪೀಠದ ಮುಂದೆ ಅರ್ಜಿ ವಿಚಾರಣೆಗೆ ಜುಲೈ 11ರಂದು ಬರುವ ನಿರೀಕ್ಷೆಯಿದೆ.

      ಜುಲೈ 10 ರಂದು ವಿಧಾನಸಭೆಯಲ್ಲಿ ಪಕ್ಷಗಳ ಬಲಾಬಲ

      ಜುಲೈ 10 ರಂದು ವಿಧಾನಸಭೆಯಲ್ಲಿ ಪಕ್ಷಗಳ ಬಲಾಬಲ

      ಜುಲೈ 10 ರಂದು ವಿಧಾನಸಭೆಯಲ್ಲಿ ಪಕ್ಷಗಳ ಬಲಾಬಲ
      ಒಟ್ಟು ಸದಸ್ಯ ಬಲ : 211
      ಕಾಂಗ್ರೆಸ್ + ಜೆಡಿಎಸ್ : 104
      ಮ್ಯಾಜಿಕ್ ನಂಬರ್ : 105
      ಬಿಜೆಪಿ : 105+1(ಪಕ್ಷೇತರ ಎಚ್ ನಾಗೇಶ್)
      ಬಿಎಸ್ ಪಿ: 1
      ಕಾಂಗ್ರೆಸ್ : 68 (ರೋಷನ್ ಬೇಗ್ ರಾಜೀನಾಮೆ ನಂತರ)
      ಜೆಡಿಎಸ್ : 34
      ಪಕ್ಷೇತರ : 1 (ಕಾಂಗ್ರೆಸ್ ಸೇರಿರುವ ಶಂಕರ್)

      13 ಶಾಸಕರ ರಾಜೀನಾಮೆಯನ್ನು ಪರಿಶೀಲಿಸಿದ್ದು, ಈ ಪೈಕಿ 8 ಶಾಸಕರದ ರಾಜೀನಾಮೆ ಪತ್ರ ಕ್ರಮಬದ್ಧವಾಗಿಲ್ಲ ಎಂದು ವಿಧಾನಸಭಾ ಸ್ಪೀಕರ್ ರಮೇಶ್ ಕುಮಾರ್ ಅವರು ಹೇಳಿರುವುದರಿಂದ ರಾಜೀನಾಮೆ ಅಂಗೀಕಾರವಾಗದಿರುವ ಶಾಸಕರು ಮತ್ತೊಮ್ಮೆ ಸ್ಪೀಕರ್ ಮುಂದೆ ಖುದ್ದು ಹಾಜರಾಗಿ ರಾಜೀನಾಮೆ ಸಲ್ಲಿಸಬೇಕಿದೆ. ಅಂಗೀಕಾರವಾದವರ ವಿಚಾರಣೆ ಜುಲೈ 12ರಿಂದ ನಡೆಸಲಾಗುತ್ತದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+