ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋಡ್ಸೆ-ಸಾವರ್ಕರ್ ಸಲಿಂಗಿ ಎಂದ ಕಾಂಗ್ರೆಸ್ಸಿಗೆ ಶಿವಸೇನಾ ತಿರುಗೇಟು

|
Google Oneindia Kannada News

ಭೋಪಾಲ್, ಜನವರಿ 03: ಮಧ್ಯಪ್ರದೇಶದ ಕಾಂಗ್ರೆಸ್ ಸಮಿತಿ ಅಧೀನದ ಸೇವಾ ದಳ ಪ್ರಕಟಿಸಿರುವ ಕೈಪಿಡಿಯಲ್ಲಿ ವೀರ್ ಸಾವರ್ಕರ್ ಸಲಿಂಗಿ, ಸಾವರ್ಕರ್ ಮತ್ತು ಗೋಡ್ಸೆ ಮಧ್ಯೆ ದೈಹಿಕ ಸಂಬಂಧವಿತ್ತು ಎಂದು ಉಲ್ಲೇಖಿಸಲಾಗಿದೆ. ಈ ಬಗ್ಗೆ ಬಿಜೆಪಿ ಹಾಗೂ ಶಿವಸೇನೆ ಕಿಡಿಕಾರಿದೆ. ಶಿವಸೇನಾ ಸಂಸದ ಸಂಜಯ್ ರಾವತ್ ಅವರು ಪ್ರತಿಕ್ರಿಯಿಸಿದ್ದಾರೆ.

"ವೀರ್ ಸಾವರ್ಕರ್ ಅವರು ಶ್ರೇಷ್ಠ ವ್ಯಕ್ತಿ, ಹೋರಾಟಗಾರ, ಅವರು ಜನರ ಮನಸ್ಸಿನಲ್ಲಿ ಹಾಗೆ ಉಳಿಯುತ್ತಾರೆ. ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಯತ್ನಿಸುವವರ ಮನಸ್ಸು ಕೊಳಕಿನಿಂದ ಕೂಡಿರುತ್ತದೆ" ಎಂದಿದ್ದಾರೆ.

ರಾಹುಲ್ ಗಾಂಧಿ ಒಬ್ಬ ಸಲಿಂಗಕಾಮಿ ಎಂದು ಕೇಳಿದ್ದೇವೆ: ಸ್ವಾಮಿ ಚಕ್ರಪಾಣಿರಾಹುಲ್ ಗಾಂಧಿ ಒಬ್ಬ ಸಲಿಂಗಕಾಮಿ ಎಂದು ಕೇಳಿದ್ದೇವೆ: ಸ್ವಾಮಿ ಚಕ್ರಪಾಣಿ

ಭೋಪಾಲ್‌ನ ಕಾಂಗ್ರೆಸ್ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಅಖಿಲ ಭಾರತ ಕಾಂಗ್ರೆಸ್ ಸೇವಾದಳ ತರಬೇತಿ ಶಿಬಿರದಲ್ಲಿ 'ಹೌ ಬ್ರೇವ್ ವಾಸ್ ವೀರ್ ಸಾವರ್ಕರ್' ಅಥವಾ ವೀರ್ ಸಾವರ್ಕರ್ ಕಿತ್ನೆ ವೀರ್ ಎಂಬ ಶೀರ್ಷಿಕೆಯ ಪುಸ್ತಕವನ್ನು ಹಂಚಲಾಗಿದೆ. ಈ ಪುಸ್ತಕದಲ್ಲಿ ಆರೆಸ್ಸೆಸ್, ಸಾವರ್ಕರ್, ನಾಥೂರಾಮ್ ಗೋಡ್ಸೆ ಬಗ್ಗೆ ಉಲ್ಲೇಖವಿದೆ.

Dirt in their mind: Shiv Sena on Cong booklet targeting Veer Savarkar

ಹಿಂದು ಮಹಾಸಭೆ ಸಹಸಂಸ್ಥಾಪಕ ಸಾವರ್ಕರ್ ಹಾಗೂ ನಾಥೂರಾಮ್ ಗೋಡ್ಸೆ ನಡುವೆ ದೈಹಿಕ ಸಂಬಂಧವಿತ್ತು, ಅಂಡಮಾನ್ ಸೆಲ್ಯುಲರ್ ಜೈಲಿನಿಂದ ಬಿಡುಗಡೆಯಾದ ಬಳಿಕ ಬ್ರಿಟಿಷರಿಂದ ಸಾವರ್ಕರ್ ಹಣ ಪಡೆದಿದ್ದರು ಎಂದು ತಿಳಿಸಲಾಗಿದೆ.

'ಫ್ರೀಡಂ ಅಟ್ ಮಿಡ್‌ನೈಟ್' ಪುಸ್ತಕದಲ್ಲಿ ತಿಳಿಸಿರುವ ಘಟನೆಯೊಂದನ್ನು ಉಲ್ಲೇಖಿಸಿ, '' ಗೋಡ್ಸೆ ಹಾಗೂ ಅವರ ರಾಜಕೀಯ ಗುರು ಸಾವರ್ಕರ್ ನಡುವಿನ ದೈಹಿಕ ಸಂಬಂಧದ ಬಗ್ಗೆ ವಿವರಗಳಿವೆ. ಒಟ್ಟಾರೆ ಕಾಂಗ್ರೆಸ್ ಕೈಪಿಡಿ ವಿವಾದಕ್ಕೆ ಕಾರಣವಾಗಿದೆ.

ವೀರ ಸಾವರ್ಕರ್ ಬಗ್ಗೆ ವಿವಾದದ ಕಿಡಿ ಹೊತ್ತಿಸಿದ ಕಾಂಗ್ರೆಸ್ ಬುಕ್ ಲೆಟ್? ವೀರ ಸಾವರ್ಕರ್ ಬಗ್ಗೆ ವಿವಾದದ ಕಿಡಿ ಹೊತ್ತಿಸಿದ ಕಾಂಗ್ರೆಸ್ ಬುಕ್ ಲೆಟ್?

ಸಾವರ್ಕರ್ 12 ವರ್ಷದವರಿದ್ದಾಗ ಮಸೀದಿಯೊಂದಕ್ಕೆ ಕಲ್ಲೆಸೆದಿದ್ದರು. ಹಿಟ್ಲರ್ ನಿಂದ ಪ್ರೇರಣೆ ಪಡೆದಿದ್ದರು ಎಂದೆಲ್ಲ ಪ್ರಶ್ನೋತ್ತರ ಕೈಪಿಡಿಯಲ್ಲಿ ಬರೆಯಲಾಗಿದೆ.

ಕಾಂಗ್ರೆಸ್ ಕೈಪಿಡಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಮಧ್ಯಪ್ರದೇಶ ಬಿಜೆಪಿ ಮುಖ್ಯಸ್ಥ ರಾಕೇಶ್ ಸಿಂಗ್, ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಕೆಟ್ಟದಾಗಿ ಪ್ರಚಾರ ಮಾಡುವುದೇ ಕಾಂಗ್ರೆಸ್ಸಿನ ಕಾಯಕ ಎಂದಿದ್ದಾರೆ. ಮಹಾರಾಷ್ಟ್ರದಲ್ಲಿ ಶಿವಸೇನೆ ಜೊತೆ ಕಾಂಗ್ರೆಸ್ ಕೈಜೋಡಿಸಿ ಸರ್ಕಾರ ರಚಿಸಿದೆ. ಆದರೆ, ಸಾವರ್ಕರ್ ಗೆ ಅಪಮಾನ ಮಾಡುವಂಥ ಇಂಥ ಕೃತ್ಯದ ಬಗ್ಗೆ ಶಿವಸೇನಾ ನಾಯಕರು ಕಿಡಿಕಾರಿದ್ದಾರೆ.

English summary
Shiv Sena MP Sanjay Raut on Friday targeted Congress over a Seva Dal booklet questioning Hindutva ideologue Vinayak Damodar Savarkar's credentials as a patriot and his reputation for valour.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X