ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್ ಸಂಸ್ಥಾಪಕ ಜಿನ್ನಾ ಅವರ ಮುಂಬೈ ಬಂಗಲೆ ನೆಲಸಮಕ್ಕೆ ಒತ್ತಾಯ

ಮುಂಬೈ ಸಾಗರ ತೀರದಲ್ಲಿರುವ ಈ ಕಟ್ಟಡವನ್ನು 1930ರಲ್ಲಿ ನಿರ್ಮಿಸಲಾಗಿತ್ತು. ಯೂರೋಪಿಯನ್ ಶೈಲಿಯಲ್ಲಿ ಆಗಿನ ಕಾಲಕ್ಕೇ ಇಟಾಲಿಯನ್ ಮಾರ್ಬಲ್ ನೆಲಹಾಸು ಹಾಕಿ ಈ ಬಂಗಲೆಯನ್ನು ಕಟ್ಟಲಾಗಿದೆ.

|
Google Oneindia Kannada News

ಮುಂಬೈ, ಮಾರ್ಚ್ 27: ಪಾಕಿಸ್ತಾನದ ಜನಕ ಜಿನ್ನಾ ಅವರಿಗೆ ಸೇರಿದ, ದಕ್ಷಿಣ ಮುಂಬೈನಲ್ಲಿರುವ ಜಿನ್ನಾ ಹೌಸ್ ತೀವ್ರ ಶಿಥಿಲಗೊಂಡಿದ್ದು ಆದಷ್ಟು ಬೇಗನೇ ಅದನ್ನು ನೆಲಸಮಗೊಳಿಸಬೇಕೆಂದು ನಗರದಲ್ಲಿನ ಅಗ್ರ ಬಿಲ್ಡರ್ ಗಳು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಮುಂಬೈನಲ್ಲಿಅತಿ ದೊಡ್ಡ ಬಿಲ್ಡರ್ ಎನಿಸಿರುವ ಮಂಗಲ್ ಪ್ರಭಾತ್ ಅವರು ಈ ಬಗ್ಗೆ ಮಾತನಾಡಿದ್ದು, ''ಜಿನ್ನಾ ಅವರ ಬಂಗಲೆಯು ಐತಿಹಾಸಿಕ. ಇದೇ ಮನೆಯಲ್ಲೇ ಕುಳಿತುಕೊಂಡು ಅವರು ಭಾರತ-ಪಾಕಿಸ್ತಾನದ ವಿಭಜನೆಯಂಥ ಚರಿತ್ರಾರ್ಹ ಬೇಡಿಕೆಗೆ ಚಾಲನೆ ನೀಡಿದ್ದರು. ಈಗ ಈ ಬಂಗಲೆಯು ಶಿಥಿಲಗೊಂಡಿದ್ದು, ಇದನ್ನು ಬೇಗನೇ ಉರುಳಿಸುವ ಕಾರ್ಯ ಆಗಬೇಕಿದೆ. ಈ ಕಟ್ಟಡವನ್ನು ಉರುಳಿಸಿ ಅಲ್ಲಿ ಸ್ಮಾರಕವೊಂದನ್ನು ನಿರ್ಮಿಸಬೇಕು'' ಎಂದರು.[ಜಿನ್ನಾ ಕುರಿತ ಪ್ರತಾಪ್ ಸಿಂಹ, ಜಿಬಿ ಹರೀಶ್ ಪುಸ್ತಕ]

Demolish Sprawling 2.5 Acre Jinnah House In Mumbai, Says BJP Legislator

ಮುಂಬೈ ಸಾಗರ ತೀರದಲ್ಲಿ ಸುಮಾರು 2.5 ಎಕರೆ ವಿಸ್ತೀರ್ಣದಲ್ಲಿ ಕಟ್ಟಲಾಗಿರುವ ಈ ಬಂಗಲೆಯನ್ನು 1930ರಲ್ಲಿ ನಿರ್ಮಿಸಲಾಗಿತ್ತು. ಯೂರೋಪಿಯನ್ ಶೈಲಿಯಲ್ಲಿ ಆಗಿನ ಕಾಲಕ್ಕೇ ಇಟಾಲಿಯನ್ ಮಾರ್ಬಲ್ ನೆಲಹಾಸು ಹಾಕಿ ಕಟ್ಟಲಾಗಿರುವ ಈ ಬಂಗಲೆಯಲ್ಲೇ ಜಿನ್ನಾ ಅವರು ಮೊದಲ ಬಾರಿಗೆ ಭಾರತ- ಪಾಕಿಸ್ತಾನ ವಿಭಜನೆಯ ಚರ್ಚೆಗೆ ಚಾಲನೆ ನೀಡಿದ್ದರೆಂದು ಎನ್ ಡಿ ಟಿವಿ ವರದಿ ಮಾಡಿದೆ.

ಪಾಕ್ ಸರ್ಕಾರದ ಮನವಿ
ಈ ಬಂಗಲೆಯ ಬಗ್ಗೆ ತಿಳಿದಿರುವ ಪಾಕಿಸ್ತಾನ ಸರ್ಕಾರವು, ಈ ಬಂಗಲೆಯನ್ನು ತನಗೆ ಮಾರಾಟ ಮಾಡಬೇಕು ಅಥವಾ ಭೋಗ್ಯಕ್ಕೆ ನೀಡಬೇಕೆಂದು ಕೋರಿತ್ತು. ಆದರೆ, ಭಾರತ ಸರ್ಕಾರ ಈ ಬಗ್ಗೆ ಯಾವುದೇ ಉತ್ತರ ನೀಡಿಲ್ಲ.[ಜಿನ್ನಾ ಪುಸ್ತಕ : ಜಸ್ವಂತ್ ವಿರುದ್ಧ ಬಿಜೆಪಿ ಕೆಂಡ]

ಜಿನ್ನಾ ಮೊಮ್ಮಗಳ ದಾವೆ
ನ್ಯೂಯಾರ್ಕ್ ನಲ್ಲಿರುವ ಜಿನ್ನಾ ಅವರ ಮೊಮ್ಮಗಳಾದ ದೀನಾ ವಾಡಿಯಾ ಕೂಡ ಮುಂಬೈ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿ, ಮುಂಬೈನಲ್ಲಿರುವ ಜಿನ್ನಾ ಬಂಗಲೆಯ ಉತ್ತರಾಧಿತ್ವವನ್ನು ತಮಗೇ ಕೊಡಬೇಕೆಂದು ಕೇಳಿದ್ದರು. ಮತ್ತೊಂದು ಆಸಕ್ತಿದಾಯಕ ವಿಚಾರವೆಂದರೆ, ದೀನಾ ವಾಡಿಯಾ ಅವರ ಪುತ್ರರೊಬ್ಬರು ಮುಂಬೈನಲ್ಲಿ ಬಟ್ಟೆ ತಯಾರಿಕಾ ಕಂಪನಿಯೊಂದನ್ನು ನಡೆಸುತ್ತಿದ್ದಾರೆ.

English summary
The sprawling mansion in Mumbai built by Pakistan's founder Mohammad Ali Jinnah should be demolished, one of the city's top builders has told the government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X