ಕ್ರೂಸ್ ಶಿಪ್ ಡ್ರಗ್ಸ್ ಕೇಸ್: ಬಾಲಿವುಡ್ ನಿರ್ಮಾಪಕರ ಮನೆ ಮೇಲೆ ಎನ್‌ಸಿಬಿ ದಾಳಿ
ಮುಂಬೈ, ಅಕ್ಟೋಬರ್ 09: ಕ್ರೂಸ್ ಶಿಪ್ ನಲ್ಲಿ ನಡೆಯುತ್ತಿದ್ದ ಡ್ರಗ್ಸ್ ಪಾರ್ಟಿ ಮೇಲೆ ನಡೆದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಿರ್ಮಾಪಕ್ ಮನೆ ಮೇಲೆ ಎನ್‌ಸಿಬಿ ದಾಳಿ ನಡೆಸಿದೆ.
ಮುಂಬೈನ ಪ್ರತಿಷ್ಠಿತ ಬಾಂದ್ರಾ ಪ್ರದೇಶದಲ್ಲಿರುವ ನಿರ್ಮಾಪಕ ಇಮ್ತಿಯಾಜ್ ಖಾತ್ರಿ ಅವರ ನಿವಾಸದ ಮೇಲೆ ಎನ್ ಸಿಬಿ ಅಧಿಕಾರಿಗಳು ದಾಳಿ ಮಾಡಿದ್ದು ಶೋಧ ಕಾರ್ಯಾಚರಣೆ ನಡೆಸಿದ್ದಾರೆ.
ಈ ಹಿಂದೆ ಇದೇ ಪ್ರಕರಣದಲ್ಲಿ ಎನ್ ಸಿಬಿಯಿಂದ ಬಂಧನಕ್ಕೀಡಾಗಿರುವ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಮತ್ತು ಅರ್ಬಾಜ್ ಮರ್ಚೆಂಟ್ ಮತ್ತು ಮುನ್ಮುನ್ ಧಮೇಚಾ ಅವರನ್ನು ಅಕ್ಟೋಬರ್ 7ರ ವರೆಗೆ ಎನ್ ಸಿಬಿ ವಶಕ್ಕೆ ನೀಡಲಾಗಿದೆ.

ಅಕ್ಬೋಬರ್ 2ರಂದು ರಾತ್ರಿ ಮುಂಬೈನ ಸಮುದ್ರ ತೀರದ ಐಷಾರಾಮಿ ಹಡಗಿನಲ್ಲಿ ರೇವ್ ಪಾರ್ಟಿ ಆಯೋಜಿಸಲಾಗಿತ್ತು. ಪಾರ್ಟಿಯಲ್ಲಿ ಭಾಗವಹಿಸಿದ್ದ ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಸೇರಿದಂತೆ ಎಂಟು ಮಂದಿಯನ್ನು ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.
ಅಲ್ಲದೆ ಎನ್‌ಸಿಬಿ ಮೂಲಗಳ ಮುಂಬೈ ಮೂಲದ ಬಿಲ್ಡರ್ ಮಗನಾಗಿರುವ ಖಾತ್ರಿ ಕೂಡ ಈ ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಸಂಸ್ಥೆ ಆರೋಪಿಸಿದೆ. ಖಾತ್ರಿ ಬಾಲಿವುಡ್‌ನ ಅನೇಕ ದೊಡ್ಡ ತಾರೆಯರೊಂದಿಗೆ ಆಳವಾದ ಸಂಪರ್ಕವನ್ನು ಹೊಂದಿದ್ದು, ಈ ಹಿಂದೆ ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ಮಾದಕ ದ್ರವ್ಯಗಳನ್ನು ಪೂರೈಸಿದ್ದಾರೆ ಎಂದು ಆರೋಪಿಸಲಾಗಿತ್ತು ಎನ್ನಲಾಗಿದೆ.
ಹಡಗಿನಲ್ಲಿ ಡ್ರಗ್ಸ್ ವಶಕ್ಕೆ ಪಡೆದ ಪ್ರಕರಣದಲ್ಲಿ ಬಾಲಿವುಡ್ ನಟ ಶಾರೂಖ್ ಖಾನ್ ಅವರ ಪುತ್ರ ಆರ್ಯನ್ ಖಾನ್, ಮರ್ಚೆಂಟ್ ಮತ್ತಿತರ ಆರು ಮಂದಿಯನ್ನು ಮುಂಬೈಯ ಸ್ಥಳೀಯ ಕೋರ್ಟ್ ವೊಂದು ಗುರುವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿರುವ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್‌ಗೆ ಮುಂಬೈ ಜಿಲ್ಲಾ ಸೆಷನ್ ಕೋರ್ಟ್ ಜಾಮೀನು ನಿರಾಕರಿಸಿದೆ. ಹೀಗಾಗಿ ಆರ್ಯನ್ ಖಾನ್ ಮುಂಬೈನ ಆರ್ಥರ್ ಜೈಲಿನಲ್ಲಿ ಉಳಿಯಬೇಕಿದೆ. ಆರ್ಯನ್ ಖಾನ್‌ಗೆ ಇಂದು ಜಾಮೀನು ಸಿಗುವ ಸಾಧ್ಯತೆ ಎಂದೇ ಶಾರುಖ್ ಕುಟುಂಬ ಭಾವಿಸಿತ್ತು. ಆದರೆ ಪ್ರಕರಣದ ಗಂಭೀರತೆಯನ್ನು ಅರಿತ ಕೋರ್ಟ್ ಜಾಮೀನು ನಿರಾಕರಿಸಿದೆ.
ಜಾಮೀನು ನಿರಾಕರಿಸಿದ ಪರಿಣಾಮ, ಶಾರುಖ್ ಪತ್ನಿ ಗೌರಿ ಖಾನ್ ಹುಟ್ಟು ಹಬ್ಬ ಆಚರಣೆ ರದ್ದಾಗಿದೆ. ಇಂದು ಗೌರಿ ಖಾನ್ 51ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಪುತ್ರ ಆರ್ಯನ್ ಖಾನ್‌ಗೆ ಜಾಮೀನು ಸಿಗುವ ಸಾಧ್ಯತೆ ಕುರಿತು ವಕೀಲರು ಸೂಚಿಸಿದ್ದರು. ಹೀಗಾಗಿ ಆರ್ಯನ್ ಬಿಡುಗಡೆ ಬಳಿಕ ಸರಳವಾಗಿ ಹುಟ್ಟು ಹಬ್ಬ ಆಚರಿಸಲು ಖಾನ್ ಕುಟುಂಬ ಪ್ಲಾನ್ ಮಾಡಿಕೊಂಡಿತ್ತು. ಆದರೆ ಜಾಮೀನು ನಿರಾಕರಣೆಯೊಂದಿಗೆ ಎಲ್ಲಾ ಕಾರ್ಯಕ್ರಮಗಳು ರದ್ದಾಗಿದೆ.
ಅಕ್ಟೋಬರ್ 7 ರಂದು ಆರ್ಯನ್ ಖಾನ್ ಸೇರಿ ಡ್ರಗ್ಸ್ ಪ್ರಕರಣದ 7 ಮಂದಿಗೆ ಮುಂಬೈ ಸ್ಥಳೀಯ ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಇತ್ತ ನ್ಯಾಯಾಲದಲ್ಲಿ ಜಾಮೀನಿಗಾಗಿ ಆರ್ಯನ್ ಖಾನ್ ಪರ ವಕೀಲರು ಮನವಿ ಮಾಡಿದ್ದರು. ಈ ಅರ್ಜಿ ಇಂದು ವಿಚಾರಣೆ ನಡೆಸಿದ ಮುಂಬೈ ಕೋರ್ಟ್, ಜಾಮೀನು ನಿರಾಕರಿಸಿದೆ.
ಮುಂಬೈ ಕರಾವಳಿಯಿಂದ ಹೊರಟ ಕ್ರ್ಯೂಸ್ ಹಡಗಿನಲ್ಲಿ ರೇವ್ ಪಾರ್ಟಿ ಆಯೋಜಿಸಲಾಗಿತ್ತು. ಈ ಪಾರ್ಟಿಯಲ್ಲಿ ಶಾರುಖ್ ಫುತ್ರ ಆರ್ಯನ್ ಖಾನ್ ಸೇರಿದಂತೆ ಹಲವು ಸೆಲೆಬ್ರೆಟಿಗಳು ಪಾಲ್ಗೊಂಡಿದ್ದರು. ರೇವ್ ಪಾರ್ಟಿಯಲ್ಲಿ ಡ್ರಗ್ಸ್ ಪೂರೈಕೆ ಕುರಿತು ಮಾಹಿತಿ ಪಡೆದಿದ್ದ NCB ಅಧಿಕಾರಿಗಳು ಮಫ್ತಿಯಲ್ಲಿ ಹಡುಗ ಸೇರಿಕೊಂಡಿದ್ದರು.
ರೇವ್ ಪಾರ್ಟಿ ಮೇಲೆ ದಾಳಿ ಮಾಡಿದ ಅಧಿಕಾರಿಗಳು, ರೆಡ್ ಹ್ಯಾಂಡ್ ಆಗಿ ಆರ್ಯನ್ ಖಾನ್, ಅರ್ಬಾಜ್ ಮರ್ಚೆಂಟ್ ಸೇರಿದಂತೆ 7 ಮಂದಿಯನ್ನು ವಶಕ್ಕೆ ಪಡೆಯಲಾಗಿತ್ತು.












Click it and Unblock the Notifications