• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊರೊನಾ, ಚಪ್ಪಾಳೆ, ದೀಪ: ಪ್ರಧಾನಿಯನ್ನು ಶಿವಸೇನೆ ಅಣಕವಾಡಿದ್ದು ಹೀಗೆ

|

ಮುಂಬೈ, ಏಪ್ರಿಲ್ 7 (ಪಿಟಿಐ): ಚಪ್ಪಾಳೆ ತಟ್ಟುವ ಮೂಲಕ ಅಥವಾ ದೀಪ ಹಚ್ಚುವ ಮೂಲಕ, ಕೊರೊನಾ ವಿರುದ್ದದ ಯುದ್ದವನ್ನು ಗೆಲ್ಲಲು ಸಾಧ್ಯವಿಲ್ಲ ಎಂದು ಶಿವಸೇನೆ ಲೇವಡಿ ಮಾಡಿದೆ.

"ಪ್ರಧಾನಮಂತ್ರಿ ನರೇಂದ್ರ ಮೋದಿ ಸಾರ್ವಜನಿಕರಿಂದ ಏನನ್ನು ಬಯಸುತ್ತಿದ್ದಾರೆ ಎನ್ನುವುದನ್ನು ಮೊದಲು ಸ್ಪಷ್ಟ ಪಡಿಸಬೇಕು. ಕೇಂದ್ರ ಸರಕಾರದ ಆದೇಶವನ್ನು ಪಾಲಿಸದವರಿಗೆ ಶಿಕ್ಷೆಯಾಗಬೇಕು" ಎಂದು ಪಕ್ಷದ ಮುಖವಾಣಿ 'ಸಾಮ್ನಾ'ದಲ್ಲಿನ ಸಂಪಾದಕೀಯದಲ್ಲಿ ಬರೆಯಲಾಗಿದೆ.

ಕ್ವಾರಂಟೈನ್ ಕೊಠಡಿಯಲ್ಲೇ ತಬ್ಲಿಘಿ ಸದಸ್ಯರ ದುರ್ನಡತೆಯ ಪರಮಾವಧಿ ಕ್ವಾರಂಟೈನ್ ಕೊಠಡಿಯಲ್ಲೇ ತಬ್ಲಿಘಿ ಸದಸ್ಯರ ದುರ್ನಡತೆಯ ಪರಮಾವಧಿ

"ದೇಶವ್ಯಾಪಿ ಲಾಕ್ ಡೌನ್ ಮಧ್ಯೆ, ಕಳೆದ ಭಾನುವಾರ (ಏ 5) ರಾತ್ರಿ ಒಂಬತ್ತು ಗಂಟೆಗೆ, ಒಂಬತ್ತು ನಿಮಿಷ, ಮನೆ ಲೈಟ್ ಗಳನ್ನು ಆರಿಸಿ, ದೀಪ ಬೆಳಗಲು ಮೋದಿಯವರು ಕರೆ ನೀಡಿದರು. ಇದರಿಂದ, ಕೊರೊನಾ ವಿರುದ್ದದ ಹೋರಾಟದಲ್ಲಿ ಗೆಲ್ಲಲು ಸಾಧ್ಯವೇ" ಎಂದು ಸಂಪಾದಕೀಯದಲ್ಲಿ ಪ್ರಶ್ನಿಸಲಾಗಿದೆ.

ಕೊರೊನಾ ವಿರುದ್ದ ಹೋರಾಟಕ್ಕೆ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಢವ್ ಠಾಕ್ರೆಯಂತಹ ದಂಡನಾಯಕ ಬೇಕಾಗಿತ್ತು. ಮುಖ್ಯಮಂತ್ರಿಗಳು ತಮ್ಮ ಕೆಲಸವನ್ನು ಚೆನ್ನಾಗಿ ನಿಭಾಯಿಸುತ್ತಿದ್ದಾರೆಂದು ಸಾಮ್ನಾದಲ್ಲಿ, ಮಹಾ ಸಿಎಂ ಬೆನ್ನು ತಟ್ಟಲಾಗಿದೆ.

ಪಾಣಿಪತ್ ಯುದ್ದ ಸುಳ್ಳು ವದಂತಿಯಿಂದ ಸೋಲಬೇಕಾಯಿತು. ಕೊರೊನಾ ವಿರುದ್ದದ ಹೋರಾಟ ಹೀಗಾಗಬಾರದು. ಅತ್ಯಂತ ಯೋಜನಾಬದ್ದವಾಗಿ, ಸರಕಾರದ ಆದೇಶವನ್ನು ಪಾಲಿಸಿದರೆ, ಕೊರೊನಾ ವಿರುದ್ದದ ಯುದ್ದದಲ್ಲಿ ಗೆಲ್ಲಲು ಸಾಧ್ಯವಿದೆ ಎಂದು ಪತ್ರಿಕೆಯ ಸಂಪಾದಕೀಯದಲ್ಲಿ ಹೇಳಲಾಗಿದೆ.

'ನಾವು ಬಿಜೆಪಿ ತೊರೆದಿರಬಹುದು. ಆದರೆ, ಹಿಂದುತ್ವ ತೊರೆದಿಲ್ಲ''ನಾವು ಬಿಜೆಪಿ ತೊರೆದಿರಬಹುದು. ಆದರೆ, ಹಿಂದುತ್ವ ತೊರೆದಿಲ್ಲ'

ಕಳೆದ ಭಾನುವಾರ ದೀಪ ಹೆಚ್ಚುವ ನೆಪದಲ್ಲಿ ಸಾರ್ವಜನಿಕರು ಬೀದಿಗೆ ಬಂದು, ಡ್ಯಾನ್ಸ್ ಮಾಡುತ್ತಾ, ಪಟಾಕಿ ಹಚ್ಚಿದ್ದು ತಪ್ಪು ಎಂದು ಮರಾಠಿ ಪತ್ರಿಕೆ ಸಾಮ್ನಾದಲ್ಲಿ ಕಿಡಿಕಾರಲಾಗಿದೆ.

English summary
Coronavirus: War Against This Not Possible To Win By Clapping And Lighting Lamp, Shivasena
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X