• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊರೊನಾ ಚಿಕಿತ್ಸೆಗಾಗಿ ಕಚೇರಿ ಬಿಟ್ಟುಕೊಟ್ಟ ಕಿಂಗ್ ಖಾನ್

|

ಮುಂಬೈ, ಏಪ್ರಿಲ್ 05: ಕಿಂಗ್ ಖಾನ್ ಶಾರುಖ್ ಅವರು ಕೊರೊನಾವೈರಸ್ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿದ್ದಾರೆ. ಕೊವಿಡ್19 ರೋಗಿಗಳ ಚಿಕಿತ್ಸೆಗಾಗಿ ತಮ್ಮ ಕಚೇರಿಯನ್ನು ಶಾರುಖ್ ಖಾನ್ ಬಿಟ್ಟುಕೊಟ್ಟಿದ್ದಾರೆ.

ಶಾರುಖ್ ಖಾನ್ ಹಾಗೂ ಪತ್ನಿ ಗೌರಿ ಖಾನ್ ಅವರ ಔದಾರ್ಯಕ್ಕೆ ನಾವು ಆಭಾರಿಗಳಾಗಿದ್ದೇವೆ ಎಂದು ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಟ್ವೀಟ್ ಮಾಡಿ ಧನ್ಯವಾದ ಅರ್ಪಿಸಿದೆ.

ಶಾರುಖ್ ಅವರ ನಾಲ್ಕು ಖಾಸಗಿ ಕಚೇರಿಗಳನ್ನು ಈಗ ಹೋಂ ಕ್ವಾರಂಟೈನ್ ತಾಣಗಳನ್ನಾಗಿ ಪರಿವರ್ತಿಸಲಾಗುತ್ತದೆ. ಮಕ್ಕಳು, ಮಹಿಳೆಯರು ಹಾಗೂ ವಯೋವೃದ್ಧರಿಗಾಗಿ ಈ ಸ್ಥಳನ್ನು ಬಳಸಲಾಗುತ್ತದೆ.

ಬಿಎಂಸಿ ಮಾಡುತ್ತಿರುವ ಕಾರ್ಯಕ್ಕೆ ನಮ್ಮ ಸಣ್ಣದೊಂದು ಕೊಡುಗೆ ಇದಾಗಿದೆ. ಮೈಬಿಎಂಸಿ ಎಂದ ಕೂಡಲೇ ಹೆಮ್ಮೆ ಎನಿಸುತ್ತದೆ. ಕೊವಿಡ್19 ವಿರುದ್ಧದ ಹೋರಾಟದಲ್ಲಿ ನಾವು ಭಾಗಿಯಾಗಿದ್ದು, ನಮ್ಮ ಕೈಲಾದ ಕೊಡುಗೆ ನೀಡುತ್ತಿದ್ದೇವೆ. ಮುಂಬೈಕರ್ ಗಳ ಆರೋಗ್ಯ ರಕ್ಷಣೆ, ಭದ್ರತೆ ಬಗ್ಗೆ ಸರ್ಕಾರ ತೆಗೆದುಕೊಳ್ಳುತ್ತಿರುವ ನಿರ್ಣಯ, ಮಾರ್ಗಸೂಚಿಯನ್ನು ನಾವೆಲ್ಲರೂ ಅನುಸರಿಸಬೇಕಾಗಿದೆ ಎಂದು ಶಾರುಖ್ ದಂಪತಿ ಹೇಳಿದ್ದಾರೆ.

ರೆಡ್ ಚಿಲ್ಲಿಸ್ ಸಂಸ್ಥೆಯಿಂದ ಪರಿಹಾರ ನಿಧಿಗೆ ದೇಣಿಗೆ

ರೆಡ್ ಚಿಲ್ಲಿಸ್ ಸಂಸ್ಥೆಯಿಂದ ಪರಿಹಾರ ನಿಧಿಗೆ ದೇಣಿಗೆ

54 ವರ್ಷ ವಯಸ್ಸಿನ ಸೂಪರ್ ಸ್ಟಾರ್ ತಮ್ಮ ರೆಡ್ ಚಿಲ್ಲಿಸ್ ಎಂಟರ್ ಟೈನ್ಮೆಂಟ್, ಮೀರ್ ಫೌಂಡೇಷನ್, ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ. ಐಪಿಎಲ್ ತಂಡ ಕೋಲ್ಕತಾ ನೈಟ್ ರೈಡರ್ಸ್ ಸಹ ಮಾಲೀಕರಾದ ಜುಹಿ ಚಾವ್ಲಾ ಹಾಗೂ ಜಾಯ್ ಮೆಹ್ತಾ ಕೂಡಾ ತಮ್ಮ ದೇಣಿಗೆ ನೀಡಿದ್ದಾರೆ.

ಮೀರ್ ಫೌಂಡೆಷನ್ ನಿಂದ ಪಿಪಿಇ ಕಿಟ್

ಮೀರ್ ಫೌಂಡೆಷನ್ ನಿಂದ ಪಿಪಿಇ ಕಿಟ್

ಮಹಾರಾಷ್ಟ್ರ ಹಾಗೂ ಪಶ್ಚಿಮ ಬಂಗಾಳದ ವೈದ್ಯಕೀಯ ಸಿಬ್ಬಂದಿಗೆ ಅಗತ್ಯವಾಗಿ ಬೇಕಾಗಿರುವ ವೈಯಕ್ತಿಕ ರಕ್ಷಣಾ ಸಾಧನ(ಪಿಪಿಇ) ಪೂರೈಕೆ ಮಾಡಲು ಶಾರುಖ್ ಅವರ ಮೀರ್ ಫೌಂಡೇಷನ್ ಮುಂದಾಗಿದೆ. ಸುಮಾರು 50, 000 ಪಿಪಿಇ ಸಿದ್ಧವಾಗಿದೆ. ಎಕ್ ಸಾಥ್ ಸಂಸ್ಥೆ ಜೊತೆ ಕೈಜೋಡಿಸಿ, 5500 ಕುಟುಂಬಕ್ಕೆ ಒಂದು ತಿಂಗಳಿಗಾಗುವಷ್ಟು ದಿನಸಿ, ಅಗತ್ಯ ಆಹಾರ ಪೂರೈಕೆಯನ್ನು ನೋಡಿಕೊಂಡಿದ್ದಾರೆ.

ರೋಟಿ ಫೌಂಡೇಷನ್ ಜೊತೆಗೂಡಿದ ಶಾರುಖ್

ರೋಟಿ ಫೌಂಡೇಷನ್ ಜೊತೆಗೂಡಿದ ಶಾರುಖ್

ರೋಟಿ ಫೌಂಡೇಷನ್ ಜೊತೆಗೂಡಿ 3 ಲಕ್ಷ ಆಹಾರ ಕಿಟ್ಸ್ ಗಳನ್ನು 10 ಸಾವಿರಕ್ಕೂ ಅಧಿಕ ಆರ್ಥಿಕವಾಗಿ ಹಿಂದುಳಿದವರು, ನಿರ್ಗತಿಕರು, ದಿನಗೂಲಿ ನೌಕರರು ವಲಸಿಗ ಕಾರ್ಮಿಕರಿಗೆ ನೀಡಲಾಗುತ್ತಿದೆ. ಇದಲ್ಲದೆ, ಉತ್ತರಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ಹಾಗೂ ಉತ್ತರಾಖಂಡ್ ರಾಜ್ಯಗಳಲ್ಲಿನ ಆಸಿಡ್ ದಾಳಿಗೆ ತುತ್ತಾದ ಮಹಿಳೆಯರಿಗೆ ಆರ್ಥಿಕ ನೆರವನ್ನು ನೀಡಲಾಗಿದೆ.

ಬಿಎಂಸಿ ಸಹಾಯವಾಣಿ

ಬೃಹನ್ ಮುಂಬೈ ಮಹಾನಗರ ಪಾಲಿಕೆ ಕೊವಿಡ್19 ವಿರುದ್ಧ ಸಮರ ಸಾರಿದ್ದು ನಾಗರಿಕರಿಗೆ ಅಗತ್ಯ ನೆರವು ನೀಡಲು ಮುಂದಾಗಿದೆ. ಕೊರೊನಾವೈರಸ್ ಸೋಂಕಿನ ಬಗ್ಗೆ ಮಾಹಿತಿ, ಸೋಂಕು ತಗುಲಿರುವ ಬಗ್ಗೆ ಪರೀಕ್ಷಾ ಕೇಂದ್ರ, ಮಾನಸಿಕ ಒತ್ತಡ ನಿವಾರಣೆ, ನಿರ್ಗತಕರಿಗೆ ಆಹಾರ ಪೂರೈಕೆ, ಹಿರಿಯ ನಾಗರಿಕರಿಗೆ ಹೇಗೆ ನೆರವಾಗಬಹುದು, ಮೆಡಿಸಿನ್ ಎಲ್ಲೆಲ್ಲಿ ಪಡೆಯಬಹುದು ಹೀಗೆ ಅಗತ್ಯ ಪೂರೈಕೆಗೆ ಪ್ರತ್ಯೇಕ ಸಹಾಯವಾಣಿಗಳನ್ನು ನೀಡಲಾಗಿದೆ.

English summary
Days after Shah Rukh Khan and his wife Gauri Khan announced several initiatives to help the central and state government in their fight against the coronavirus pandemic, the superstar has now opened his office for treating COVID-19 patients.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X