ಮಹಾರಾಷ್ಟ್ರ; ಕಾಂಗ್ರೆಸ್ ನಾಯಕ ಸಂಜಯ್ ಝಾ ಪಕ್ಷದಿಂದ ಅಮಾನತು
ಮುಂಬೈ, ಜುಲೈ 14 : ಮಹಾರಾಷ್ಟ್ರದ ಕಾಂಗ್ರೆಸ್ ನಾಯಕ ಸಂಜಯ್ ಝಾ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪಕ್ಷದಿಂದ ಅಮಾನತು ಮಾಡಲಾಗಿದೆ. ಕಳೆದ ವಾರ ಅವರನ್ನು ಪಕ್ಷದ ವಕ್ತಾರ ಹುದ್ದೆಯಿಂದ ವಜಾಗೊಳಿಸಲಾಗಿತ್ತು.
ಮಂಗಳವಾರ ಸಂಜಯ್ ಝಾ ಅವರನ್ನು ಪಕ್ಷದಿಂದ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ಪಕ್ಷ ವಿರೋಧಿ ಚಟುವಟಿಕೆ ಆರೋಪದ ಹಿನ್ನಲೆಯಲ್ಲಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಸಂಜಯ್ ಝಾ ಅಮಾನತುಗೊಳಿಸಲಾಗಿದೆ.
ಪಕ್ಷದ ಧೋರಣೆ, ನೀತಿಯನ್ನು ಖಂಡಿಸಿ ಸಂಜಯ್ ಝಾ ಪತ್ರಿಕೆಯೊಂದಕ್ಕೆ ಲೇಖನ ಬರೆದಿದ್ದರು. ಪಕ್ಷ ತನ್ನ ಪ್ರಜಾತಂತ್ರ, ಉದಾರ ಮೌಲ್ಯ ಹಾಗೂ ಸಹಿಷ್ಣುತೆಯಿಂದ ದೂರ ಸರಿಯುತ್ತಿದೆ ಎಂದು ಲೇಖನದಲ್ಲಿ ಅವರು ಉಲ್ಲೇಖಿಸಿದ್ದರು.

ಕಳೆದ ಬುಧವಾರ ಸಂಜಯ್ ಝಾ ಲೇಖನ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದಂತೆ ಅವರನ್ನು ಪಕ್ಷದ ವಕ್ತಾರ ಹುದ್ದೆಯಿಂದ ವಜಾಗೊಳಿಸಲಾಗಿತ್ತು. ಪಕ್ಷ ವಿರೋಧಿ ಚಟುಚಟಿಕೆ ದೂರಿನ ಹಿನ್ನಲೆಯಲ್ಲಿ ಇಂದು ಪಕ್ಷದಿಂದ ಅಮಾನತು ಮಾಡಲಾಗಿದೆ.
The new Congress worries me. https://t.co/aufbADcfIw
— Sanjay Jha (@JhaSanjay) July 14, 2020
ಪಕ್ಷದ ವಕ್ತಾರ ಹುದ್ದೆಯಿಂದ ವಜಾಗೊಂಡ ಬಳಿಕ ಹೇಳಿಕೆ ನೀಡಿದ್ದ ಸಂಜಯ್ ಝಾ, "ಏನೇ ಆಗಲಿ ಇನ್ನು ಮುಂದೆಯೂ ನಾನು ಪಕ್ಷದ ಶಿಸ್ತಿನ ಸಿಪಾಯಿ. ಭಯರಹಿತ ಸಿದ್ಧಾಂತದ ಸೈನಿಕನಾಗಿ ಪಕ್ಷದಲ್ಲಿ ಇರುವೆ" ಎಂದು ಹೇಳಿಕೆ ನೀಡಿದ್ದರು.












Click it and Unblock the Notifications