'ಬಂದ್ ಯಶಸ್ವಿಯಾಗೋಕೆ ಕಾಂಗ್ರೆಸ್ ಗೆ ಶಿವಸೇನೆ ಬೆಂಬಲ ಬೇಕಿತ್ತು'
ಮುಂಬೈ, ಸೆಪ್ಟೆಂಬರ್ 12: 'ಪೆಟ್ರೋಲ್, ಡಿಸೆಲ್ ದರ ಏರಿಕೆ ವಿರೋಧಿಸಿ ಸೆ.10 ರಂದು ಕರೆಯಲಾಗಿದ್ದ ಭಾರತ್ ಬಂದ್ ಮಹಾರಾಷ್ಟ್ರದಲ್ಲಿ ಯಶಸ್ವಿಯಾಗೋಕೆ ಕಾಂಗ್ರೆಸ್ ಗೆ ನಮ್ಮ ಬೆಂಬಲದ ಅಗತ್ಯವಿತ್ತು' ಎಂದು ಶಿವಸೇನೆ ಲೇವಡಿ ಮಾಡಿದೆ.
ತನ್ನ ಮುಖವಾಣಿ ಸಾಮ್ನಾದಲ್ಲಿ ಈ ಬಗ್ಗೆ ಬರೆದುಕೊಂಡಿರುವ ಶಿವಸೇನೆ, 'ಮಹಾರಾಷ್ಟ್ರದಲ್ಲಿ ಭಾರತ್ ಬಂದ್ ಯಶಸ್ವಿಯಾಗಿಲ್ಲ. ಅದಕ್ಕೆ ಕಾರಣ ಶಿವಸೇನೆ ಬೆಮಬಲ ನೀಡಿಲ್ಲ. ಅಕಸ್ಮಾತ್ ಕಾಂಗ್ರೆಸ್ ನಮ್ಮ ಬೆಂಬಲ ಪಡೆದಿದ್ದರೆ ಮಹಾರಾಷ್ಟ್ರದಲ್ಲಿ ಬಂದ್ ಯಶಸ್ವಿಯಾಗುತ್ತಿತ್ತು' ಎಂದು ಹೇಳಿಕೊಂಡಿದೆ.
ಆದರೆ ಪಲ್ಘರ್ ಚುನಾವಣೆಯಲ್ಲಿ ಕಾಂಗ್ರೆಸ್ ನಮಗೆ ಬೆಂಬಲ ನೀಡದ ಕಾರಣ ನಾವು ಬಂದ್ ಸಂದರ್ಭದಲ್ಲಿ ಬೆಮಬಲ ನೀಡಿಲ್ಲ' ಎಂದು ಹೇಳಿದೆ.

ಶಿವಸೇನೆಯದು 'ಡಬಲ್ ಸ್ಟಾಂಡರ್ಡ್'. ಇಂಥ ನಿಲುವು ತಪ್ಪು ಎಂದು ಶಿವಸೇನೆಯ ಹೇಳಿಕೆಯನ್ನು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕ್ ಚೌಹಾಣ್ ಟೀಕಿಸಿದ್ದಾರೆ.











Click it and Unblock the Notifications