• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಾಗಿನ್ ಖ್ಯಾತಿಯ ನಟನ ವಿರುದ್ಧ ರೇಪ್ ಕೇಸ್, ಎಫ್ಐಆರ್

|

ಮುಂಬೈ, ಫೆಬ್ರವರಿ 12: ಖ್ಯಾತ ಶಾಸ್ತ್ರೀಯ ಗಾಯಕ, ಪದ್ಮಭೂಷಣ ಉಸ್ತಾದ್ ಅಮೀರ್ ಖಾನ್ ಅವರ ಪುತ್ರ, ಜನಪ್ರಿಯ ನಟ ಶಹಬಾಜ್ ಖಾನ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಬಂದಿದೆ. ಮುಂಬೈನ ಓಶಿವಾರ ಪೊಲೀಸ್ ಠಾಣೆಯಲ್ಲಿ ಶಹಬಾಜ್ ವಿರುದ್ಧ ದೂರು ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಎಫ್ಐಆರ್ ಹಾಕಿದ್ದಾರೆ.

ಯುಗ್, ಚಂದ್ರಕಾಂತಾ, ದಿ ಗ್ರೇಟ್ ಮರಾಠಾ, ದಿ ಸ್ವಾರ್ಡ್ ಆಫ್ ಟಿಪ್ಪು ಸುಲ್ತಾನ್, ತೆನಾಲಿ ರಾಮ ಹಾಗೂ ನಾಗಿನ್ ಮುಂತಾದ ಧಾರಾವಾಹಿ ಸೇರಿದಂತೆ ಹಲವು ಭಾಷೆಗಳ ಚಿತ್ರಗಳಲ್ಲಿ ನಟಿಸಿರುವ ಶಹಬಾಜ್ ಖಾನ್ ವಿರುದ್ಧ ಯುವತಿಯೊಬ್ಬಳು ದೂರು ನೀಡಿದ್ದಾಳೆ. ಹಲವು ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ವಿಲನ್ ಪಾತ್ರದಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ.

53 ವರ್ಷದ ಶಹಬಾಜ್ ಖಾನ್ ನಿಜನಾಮ ಹೈದರ್ ಖಾನ್ ವಿರುದ್ಧ ಯುವತಿಯೊಬ್ಬಳು ನೀಡಿದ ದೂರಿನ ಅನ್ವಯ ಓಶಿವಾರ ಠಾಣೆಯ ಪೊಲೀಸರು ಐಪಿಸಿ ಸೆಕ್ಷನ್ 354, 509 ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದಾರೆ.

1990ರ ದಶಕದಿಂದ ಸಿನಿಮಾರಂಗದಲ್ಲಿರುವ ಶಹಬಾಜ್, ಮಸ್ತಿ, ಜಿದ್ದಿ, ಬಾದಲ್, ಚಲ್ ಮೇರೆ ಭಾಯ್, ರಾಜು ಚಾಚಾ ಮುಂತಾದ ಚಿತ್ರಗಳಲ್ಲಿ ನಡೆಸಿದ್ದಾರೆ.

English summary
A case has been filed against actor Shahbaz Khan for allegedly molesting a girl in Mumbai, police said on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X