ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಬು ಸಲೇಂ ಮದುವೆಗೆ ಪೆರೋಲ್ ನಿರಾಕರಿಸಿದ ಬಾಂಬೆ ಹೈಕೋರ್ಟ್

|
Google Oneindia Kannada News

ಮುಂಬೈ, ಆಗಸ್ಟ್ 7: 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿದ್ದ ಅಬು ಸಲೇಂ, ತನ್ನ ಮದುವೆಗೆ ಕೋರಿ ಸಲ್ಲಿಸಿದ್ದ 45 ದಿನಗಳ ಪೆರೋಲ್ ಅರ್ಜಿಯನ್ನು ಬಾಂಬೆ ಹೈಕೋರ್ಟ್ ತಿರಸ್ಕರಿಸಿದೆ.

ತನ್ನ ಎರಡನೆಯ ಮದುವೆಗಾಗಿ ಅಬು ಸಲೇಂ 45 ದಿನಗಳ ಪೆರೋಲ್ ಮಂಜೂರು ಮಾಡುವಂತೆ ಅರ್ಜಿ ಸಲ್ಲಿಸಿದ್ದ. ಏಪ್ರಿಲ್ 21ರಂದು ಸಲ್ಲಿಸಿದ್ದ ಅರ್ಜಿಯನ್ನು ನವಿ ಮುಂಬೈ ಕಮಿಷನರ್ ತಿರಸ್ಕರಿಸಿದ್ದರು. ಬಳಿಕ ಸಲೇಂ, ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದ.

ಸಂಜು ಚಿತ್ರತಂಡಕ್ಕೆ ಲೀಗಲ್ ನೋಟಿಸ್ ನೀಡಿದ ಅಬು ಸಲೇಂಸಂಜು ಚಿತ್ರತಂಡಕ್ಕೆ ಲೀಗಲ್ ನೋಟಿಸ್ ನೀಡಿದ ಅಬು ಸಲೇಂ

247 ಮಂದಿಯ ಸಾವು ಹಾಗೂ 713 ಜನರು ಗಾಯಾಳುವಾಗಲು ಕಾರಣವಾಗಿದ್ದ 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ದಾಳಿಯಲ್ಲಿ ಅಬು ಸಲೇಂಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಇದಲ್ಲದೆ 2002ರ ಸುಲಿಗೆ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ಆತನಿಗೆ ಏಳು ವರ್ಷಗಳ ಕಠಿಣ ಶಿಕ್ಷೆ ವಿಧಿಸಿತ್ತು.

bombay high court rejects Abu Salems plea seeking parole to marry

ತಲೋಜಾ ಜೈಲ್‌ನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಸಲೇಂ, ಮುಂಬೈ ನಿವಾಸಿ ಕೌಸರ್ ಬಹಾರ್ ಜತೆ ವಿವಾಹವಾಗಲು ಬಯಸಿದ್ದಾನೆ.

ಇದಕ್ಕೂ ಮೊದಲು 2014ರಲ್ಲಿ ತನ್ನನ್ನು ಲಕ್ನೋದಲ್ಲಿ ಕೋರ್ಟ್ ವಿಚಾರಣೆಗೆ ಕರೆದೊಯ್ಯುವ ರೈಲು ಪ್ರಯಾಣದ ವೇಳೆ ಫೋನ್‌ನಲ್ಲಿಯೇ ಕೌಸರ್‌ಳನ್ನು ಮದುವೆಯಾಗಿದ್ದಾಗಿ ಸಲೇಂ ಹೇಳಿಕೊಂಡಿದ್ದ.

ಬೆದರಿಕೆ ಪ್ರಕರಣ: ಅಬು ಸಲೇಂಗೆ 7 ವರ್ಷ ಶಿಕ್ಷೆ ಪ್ರಕಟಬೆದರಿಕೆ ಪ್ರಕರಣ: ಅಬು ಸಲೇಂಗೆ 7 ವರ್ಷ ಶಿಕ್ಷೆ ಪ್ರಕಟ

ಜೈಲಿನಲ್ಲಿರುವ ಭೂಗತ ಪಾತಕಿಯನ್ನು ಮದುವೆಯಾಗಲು ಅನುಮತಿ ನೀಡದೆ ಇದ್ದರೆ ತನ್ನನ್ನು ತಾನೇ ಕೊಂದುಕೊಳ್ಳುವುದಾಗಿ ಕೌಸರ್, ಸ್ಥಳೀಯ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯಲ್ಲಿ ಬೆದರಿಕೆ ಒಡ್ಡಿದ್ದಳು. ಸಲೇಂ ಜತೆ ಮದುವೆಯಾಗಿದೆ ಎಂಬ ವರದಿಗಳು ತನ್ನ ಮಾನಹಾನಿ ಉಂಟುಮಾಡಿವೆ ಎಂದು ಆರೋಪಿಸಿದ್ದಳು.

2005ರಲ್ಲಿ ಪೋರ್ಚುಗಲ್‌ನಿಂದ ಗಡಿಪಾರಾಗಿ ಭಾರತಕ್ಕೆ ಬಂದಾಗಿನಿಂದಲೂ ಅಬು ಸಲೇಂ ಜೈಲಿನಲ್ಲಿದ್ದಾನೆ. 25 ವರ್ಷಕ್ಕಿಂತ ಹೆಚ್ಚು ಕಾಲ ಜೈಲಿನಲ್ಲಿ ಇರಿಸಬಾರದು ಎಂಬ ಒಪ್ಪಂದದೊಂದಿಗೆ ಪೋರ್ಚುಗಲ್ ಸಲೇಂನನ್ನು ಭಾರತಕ್ಕೆ ಹಸ್ತಾಂತರಿಸಿತ್ತು.

English summary
Bombay High Court on Tuesday (August 7) rejected 1993 Mumbai Serial Blast convict Abu Salem's plea for parole to get married.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X