ನಟಿ ಜೂಹಿ ಚಾವ್ಲಾ ಸೋದರ ಕೊನೆಗೂ ಬದುಕಿಗೆ ವಿದಾಯ
ಮುಂಬೈ, ಮಾರ್ಚ್ 10: ಬಾಲಿವುಡ್ ನಟಿ, ಪ್ರೇಮಲೋಕ ಖ್ಯಾತಿಯ ಜೂಹಿ ಚಾವ್ಲಾ ಅವರ ಸೋದರ ಕೊನೆಗೂ ಬದುಕಿಗೆ ವಿದಾಯ ಹೇಳಿದ್ದಾರೆ. ನಟಿ ಜೂಹಿ ಅವರ ಸೋದರ ಬಾಬ್ಬಿ ಚಾವ್ಲಾ ಅವರು ಸರಿಯಾಗಿ ನಾಲ್ಕು ವರ್ಷಗಳ ಹಿಂದೆ ತೀವ್ರ ಹೃದಯಾಘಾತಕ್ಕೆ ತುತ್ತಾದ ನಂತರ ಕೋಮಾದಲ್ಲಿಯೇ ಇದ್ದರು.
ನಿನ್ನೆ ಭಾನುವಾರ ಮುಂಬೈನ Jaslok Hospital ನಲ್ಲಿ ಅವರು ಕೊನೆಯುಸಿರೆಳೆದರು. ಭಾನುವಾರವೇ ಬಾಬ್ಬಿ ಅಂತ್ಯಕ್ರಿಯೆ ನೇರವೇರಿದೆ. ಸಹೋದರನಾಗಿ ನಟಿ ಜೂಹಿ ಚಾವ್ಲಾಗೆ ಅತ್ಯಂತ ಹತ್ತಿರವಾಗಿದ್ದ ಬಾಬ್ಬಿ ನಿಧನದಿಂದ ಜೂಹಿ ಅಧೀರರಾಗಿದ್ದಾರೆ. ಸೋದರ ಕೋಮಾ ಸ್ಥಿತಿ ತಲುಪಿದ ಬಳಿಕ, ನಟಿ ಜೂಹಿ ವ್ಯಾಕುಲಗೊಂಡು ಅನೇಕ ಬಾರಿ ಆತನ ಆರೋಗ್ಯವನ್ನು ಸಾರ್ವಜನಿಕ ವೇದಿಕೆಗಳಲ್ಲಿ ಪ್ರಸ್ತಾಪಿಸಿದ್ದರು.

2010ರ ಏಪ್ರಿಲ್ ತಿಂಗಳಲ್ಲಿ ರೆಸ್ಟೋರೆಂಟ್ ಒಂದರಲ್ಲಿ ಊಟ ಮಾಡುತ್ತಿದ್ದಾಗ ಬಾಬ್ಬಿ ಚಾವ್ಲಾ ತೀವ್ರ ಹೃದಯಾಘಾತಕ್ಕೀಡಾಗಿದ್ದರು. ನಟಿ ಜೂಹಿ ಅಭಿನಯದ Gulaab Gang ಸಿನಿಮಾ ಇದೀಗ ಚಿತ್ರಮಂದಿರಗಳಲ್ಲಿ ತೆರೆ ಕಂಡಿದೆ.
ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಮಾಲೀಕತ್ವದ Red Chillies Entertainment ಕಂಪನಿಯ ಸಿಇಒ ಆಗಿದ್ದರು. ಜೂಹಿ, ಶಾರುಖ್ ಖಾನ್ ಸೇರಿದಂತೆ ಬಾಲಿವುಡ್ ನ ಅನೇಕ ನಟ/ನಟಿಯರು ಬಾಬ್ಬಿ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
ಜೂಹಿ ಚಾವ್ಲಾ ಟ್ವೀಟ್:
This is the perfect screenplay ...look at how my brother timed it ... He gave me the biggest gift of my lifetime ...saw its release ... And
— Juhi Chawla (@iam_juhi) March 9, 2014 ಶಾರುಖ್ ಖಾನ್ ಟ್ವೀಟ್:
“When someone you love becomes a memory, the memory becomes a treasure.” May Allah bless my friends soul.
— SHAH RUKH KHAN (@iamsrk) March 9, 2014 ಫರಾ ಖಾನ್ ಟ್ವೀಟ್:
Bobbychawla,u leave us for a better place..
— Farah Khan (@TheFarahKhan) March 9, 2014 











Click it and Unblock the Notifications