ಮುಂಬೈ ಚುನಾವಣೆ: ಸೋತಿದ್ದ ಅತುಲ್ ಶಾ ಅದೃಷ್ಟ ಲಾಟರಿಯಲ್ಲಿ ಗೆದ್ದಾಗ..

ಏನನ್ನಿಸಿತೋ ಏನೋ ಅತುಲ್ ಶಾ ಫಲಿತಾಂಶ ಪ್ರಶ್ನಿಸಿ ಮರು ಮತ ಎಣಿಕೆಗೆ ಅರ್ಜಿ ಹಾಕಿದರು. ಒಂದಲ್ಲ ಎರಡಲ್ಲ ಮೂರು ಬಾರಿ ಮತ ಎಣಿಕೆ ಮಾಡಿದಾಗಲೂ ಅತುಲ್ ಶಾ ಮತ್ತು ಬಗಾಲ್ಕರ್ ಮಧ್ಯೆ ಓಟುಗಳು ಸಮ ಸಮ ಆದವು.

ಮುಂಬೈ, ಫೆಬ್ರವರಿ 24: ಬಿಜೆಪಿ ವಕ್ತಾರ ಅತುಲ್ ಶಾ ಪಾಲಿಗೆ ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯ ಮತಣಿಕೆ ಉಳಿದವರಿಗಿಂತ ಭಿನ್ನವಾಗಿತ್ತು.

ಬಿಎಂಸಿಯ 220ನೇ ವಾರ್ಡ್ ನಲ್ಲಿ ಮಾಜಿ ಶಾಸಕ ಅತುಲ್ ಶಾ ಮತ್ತು ಶಿವಸೇನೆಯ ಸುರೇಂದ್ರ ಬಗಾಲ್ಕರ್ ಮಧ್ಯೆ ನೇರ ಹಣಾಹಣಿ ಏರ್ಪಟ್ಟಿತ್ತು. ಮೊದಲ ಸುತ್ತಿನ ಮರು ಮತ ಎಣಿಕೆ ನಂತರ ಅತುಲ್ ಶಾ ಸೋತಿದ್ದಾರೆ, ಬಗಾಲ್ಕರ್ ಗೆದ್ದಿದ್ದಾರೆ ಎಂದು ಘೋಷಿಸಲಾಯಿತು.[ಬಿಎಂಸಿಯಲ್ಲಿ ದೋಸ್ತಿಗಳ ತಿಕ್ಕಾಟ, ಪುಣೆ ಬಿಜೆಪಿ ವಶಕ್ಕೆ]

BMC election 2017: Atul Shah’s interesting lottery win

ಏನನ್ನಿಸಿತೋ ಏನೋ ಅತುಲ್ ಶಾ ಫಲಿತಾಂಸ ಪ್ರಶ್ನಿಸಿ ಮರು ಮತ ಎಣಿಕೆಗೆ ಅರ್ಜಿ ಹಾಕಿದರು. ಒಂದಲ್ಲ ಎರಡಲ್ಲ ಮೂರು ಬಾರಿ ಮತ ಎಣಿಕೆ ಮಾಡಿದಾಗಲೂ ಅತುಲ್ ಶಾ ಮತ್ತು ಬಗಾಲ್ಕರ್ ಮಧ್ಯೆ ಓಟುಗಳು ಸಮ ಸಮ ಆದವು.[ಮುಂಬೈ ಮೇಯರ್ ಗಾದಿಗೆ ಬಿಜೆಪಿ-ಶಿವಸೇನೆ ಮಧ್ಯೆ ಬಿಗ್ ಫೈಟ್]

ಕೊನೆಗೆ ಲಾಟರಿ ಎತ್ತಲಾಯಿತು. ಲಾಟರಿಯಲ್ಲಿ ಅತುಲ್ ಶಾ ಅದೃಷ್ಟ ನೆಟ್ಟಗಿತ್ತು. ಶಾ ಗೆದ್ದುಕೊಂಡರು. ಈ ಮೂಲಕ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಬುಟ್ಟಿಗೆ ಮತ್ತೊಂದು ಹೆಚ್ಚುವರಿ ಸ್ಥಾನ ಬಂದು ಬಿತ್ತು. ಇದರಿಂದ ಬಿಜೆಪಿ ಸ್ಥಾನ 81ರಿಂದ 82ಕ್ಕೆ ಏರಿಕೆಯಾಯಿತು. ಒಂದೊಮ್ಮೆ ಈ ಸ್ಥಾನವನ್ನು ಬಿಜೆಪಿ ಕಳೆದುಕೊಂಡಿದ್ದರೆ ಶಿವಸೇನೆ ಸಂಖ್ಯಾಬಲ 85ಕ್ಕೇ ಏರಿಕೆಯಾಗುತ್ತಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+