ವಿಜಯ ಮಲ್ಯ ಬಿಜೆಪಿಯ ಬ್ರಾಂಡ್ ಅಂಬಾಸೆಡರ್ ಆಗಲಿ: ಶಿವಸೇನಾ
ಮುಂಬೈ, ಜುಲೈ 16: ಬಿಜೆಪಿಯು ಮದ್ಯದ ದೊರೆ ವಿಜಯ ಮಲ್ಯ ಅವರನ್ನು ತನ್ನ ಬ್ರಾಂಡ್ ಅಂಬಾಸೆಡರ್ ಅನ್ನಾಗಿ ಮಾಡಿಕೊಕೊಳ್ಳಬೇಕು ಎಂದು ಶಿವಸಸೇನೆ ಹೇಳಿದೆ.
ಶಿವಸೇನಾ ಮುಖವಾಣಿ 'ಸಾಮ್ನಾ'ದಲ್ಲಿ ಕುರಿತು ಬರೆಯಲಾಗಿದ್ದು, 'ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಭಾಷಣಗಳಲ್ಲಿ ಯಾವಾಗಲೂ ಭ್ರಷ್ಟಾಚಾರ ನಿರ್ಮೂಲನೆಯ ಬಗ್ಗೆ ಮಾತನಾಡುತ್ತಾರೆ. ಆದರೆ ಅವರದೇ ಪಕ್ಷದ ಕೆಲವು ನಾಯಕರು, ವಂಚನೆ ಪ್ರಕರಣದ ಆರೋಪಿಗಳನ್ನು ತಮ್ಮ ಆದರ್ಶ' ಎನ್ನುತ್ತಾರೆ ಎಂದು ಶಿವಸೇನೆ ಹೇಳಿದೆ.
ಇತ್ತೀಚೆಗಷ್ಟೇ ಬಿಜೆಪಿ ನಾಯಕ ಜುವಾಲ್ ಓರಮ್ ಅವರು, 'ವಿಜಯ ಮಲ್ಯ ಅವರನ್ನು ಸ್ಮಾರ್ಟ್(ಚಾಣಾಕ್ಷ) ಎಂದು ಕರೆದಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ 'ಸಾಮ್ನಾ', 'ದೇಶದ್ರೋಹಿಗಳನ್ನು ಸ್ಮಾರ್ಟ್ ಎಂದು ಕರೆಯುವ ನೀವು ಅವರನ್ನೇ ನಿಮ್ಮ ಮೇಕ್ ಇನ್ ಇಂಡಿಯಾ ಮತ್ತು ಸ್ಟಾರ್ಟ್ ಅಪ್ ಇಂಡಿಯಾದ ಬ್ರಾಂಡ್ ಅಂಬಾಸೆಡರ್ ಅನ್ನಾಗಿ ಮಾಡಿಕೊಳ್ಳಿ' ಎಂದು ಬರೆದಿದೆ.

'ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಪಕ್ಷದ ಜನರಿಗೆ ನಾಲಿಗೆಯ ಮೇಲೆ ಹಿಡಿತ ಇಟ್ಟುಕೊಳ್ಳಿ ಎಂದಿದ್ದಾರೆ. ಆದರೆ ಕೆಲವರು ಸಾರ್ವಜನಿಕ ಸಭೆಗಳಲ್ಲೂ ಬಾಯಿಗೆ ಬಂದಂತೆ ಮಾತನಾಡುತ್ತಾರೆ' ಎಂದು ಸಾಮ್ನಾದಲ್ಲಿ ಬರೆಯಲಾಗಿದೆ.












Click it and Unblock the Notifications