ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಕಲಿ ಎನ್ ಕೌಂಟರ್ : ಅಮಿತ್ ಶಾಗೆ ಕೋರ್ಟಿನಿಂದ ಕ್ಲೀನ್ ಚಿಟ್

By Mahesh
|
Google Oneindia Kannada News

ನವದೆಹಲಿ, ಡಿ.30: ನಕಲಿ ಎನ್ ಕೌಂಟರ್ ಪ್ರಕರಣದಲ್ಲಿ ಸಿಲುಕಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಪ್ತ ಅಮಿತ್ ಶಾ ಅವರಿಗೆ ಸಿಬಿಐ ನ್ಯಾಯಾಲಯದಿಂದ ಮಂಗಳವಾರ ಕ್ಲೀನ್ ಚಿಟ್ ಸಿಕ್ಕಿದೆ. ತಮ್ಮ ಮೇಲಿನ ಆರೋಪಗಳನ್ನು ತಳ್ಳಿಹಾಕಿ ಕೇಸಿನಿಮ್ದ ಖುಲಾಸೆಗೊಳಿಸುವಂತೆ ಶಾ ಅವರು ಅರ್ಜಿ ಹಾಕಿದ್ದರು.

ಎರಡು ನಕಲಿ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಿತ್ ಶಾಗೆ ಸಮನ್ಸ್ ಜಾರಿಯಾಗಿತ್ತು. ಒಮ್ಮೆ ಬಂಧನಕ್ಕೂ ಒಳಪಟ್ಟಿದ್ದರು. ಅದರೆ, ಶಾ ಅರ್ಜಿ ವಿಚಾರಣೆ ನಡೆಸಿದ ಮುಂಬೈನಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯ ಸರಿಯಾದ ಸಾಕ್ಷಿ ಆಧಾರಗಳು ಲಭ್ಯವಾಗದ ಕಾರಣ ಸೊಹ್ರಾಬುದ್ದೀನ್ ಶೇಖ್, ತುಳಸಿ, ಪ್ರಜಾಪತಿ ನಕಲಿ ಎನ್ ಕೌಂಟರ್ ಪ್ರಕರಣಗಳಿಂದ ಅಮಿತ್ ಶಾ ಹೆಸರನ್ನು ಕೈಬಿಡಲಾಗಿದೆ.

ಅಮಿತ್ ಶಾ ಹಾಗೂ ಇನ್ನಿತರ ಆರೋಪಿಗಳ ವಿರುದ್ಧದ ಪ್ರಕರಣದಲ್ಲಿ ಇದೇ ವರ್ಷ ಗುಜರಾತಿನಿಂದ ಮುಂಬೈಗೆ ವರ್ಗಾಯಿಸಲಾಗಿತ್ತು. ಅಮಿತ್ ಶಾ ಸೇರಿದಂತೆ 37 ಜನರ ವಿರುದ್ಧ ಸಿಬಿಐ ತಂಡ ಚಾರ್ಜ್ ಶೀಟ್ ಸಲ್ಲಿಸಿತ್ತು. [ಅಮಿತ್ ಶಾ ಗೆ ಕ್ಲೀನ್ ಚಿಟ್ ನೀಡಿಲ್ಲ: ಸದಾಶಿವಂ]

BJP President Amit Shah discharged

2005ರಲ್ಲಿ ಅಮಿತ್ ಶಾ ಅವರು ಗುಜರಾತಿನ ಗೃಹ ಸಚಿವರಾಗಿದ್ದ ಕಾಲದಲ್ಲಿ ನಕಲಿ ಎನ್ ಕೌಂಟರ್ ನಲ್ಲಿ ಪೊಲೀಸರು ಉಗ್ರಗ್ರಾಮಿ ಎಂದು ಹೇಳಿ ಸೊಹ್ರಾಬುದ್ದೀನ್ ಅವರನ್ನು ಹತ್ಯೆ ಮಾಡಿದ್ದರು. ಈ ಪ್ರಕರಣದ ಸಾಕ್ಷಿಯಾಗಿದ್ದ ತುಳಸಿ ಪ್ರಜಾಪತಿ ಅವರು ಮರುವರ್ಷ ಹತ್ಯೆ ಮಾಡಲಾಗಿತ್ತು.

ಸೋಹ್ರಾಬುದ್ದೀನ್ ಶೇಖ್ ನಕಲಿ ಎನ್ ಕೌಂಟರ್ ಪ್ರಕರಣದಲ್ಲಿ ಆರೋಪಿಯಾದ ಮೇಲೆ ಗುಜರಾತಿನ ಗೃಹ ಸಚಿವ ಸ್ಥಾನಕ್ಕೆ ಅಮಿತ್ ಶಾ ರಾಜೀನಾಮೆ ನೀಡಿ ಸಿಬಿಐ ಮುಂದೆ ಶರಣಾಗತರಾಗಿದ್ದರು. ಅದರೆ, ಒಂದೊಂದಾಗಿ ಪ್ರಕರಣಗಳಿಂದ ಆರೋಪ ಮುಕ್ತರಾಗಿದ್ದರು.

ಈ ಎರಡೂ ಪ್ರಕರಣಗಳಲ್ಲಿ ಕೊಲೆ ಮತ್ತು ಪಿತೂರಿ ನಡೆಸಿದ ಆರೋಪವನ್ನು ಅಲ್ಲಗೆಳೆದು ಅಮಿತ್ ಪರ ವಾದಿಸಿದ್ದ ಉದಯ್ ಯು ಲಲಿತ್ ಅವರನ್ನು ಸುಪ್ರೀಂಕೋರ್ಟಿನ ನ್ಯಾಯಮೂರ್ತಿಯಾಗಿ ನೇಮಕ ಮಾಡಲು ಅಮಿತ್ ಯತ್ನಿಸಿದ ಆರೋಪವೂ ಕೇಳಿ ಬಂದಿತ್ತು. [ವಿವರ ಇಲ್ಲಿ ಓದಿ]


ಅಮಿತ್ ಶಾ ಅವರಿಗೆ ಕ್ಲೀನ್ ಚಿಟ್ ಸಿಕ್ಕಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸೊಹ್ರಾಬುದ್ದೀನ್ ಅವರ ಸೋದರ, ಕೇಂದ್ರ ಸರ್ಕಾರದ ಕೈವಾಡ ಇದರಲ್ಲಿ ಸ್ಪಷ್ಟವಾಗಿದೆ. ನಾವು ಮೇಲ್ಮನವಿ ಸಲ್ಲಿಸಿ ಕಾನೂನಿನ ಮೂಲಕ ಹೋರಾಟ ಮುಂದುವರೆಸುತ್ತೇವೆ ಎಂದಿದ್ದಾರೆ.

English summary
BJP President Amit Shah has for several years now been hounded over a series of cases filed against him alleging involvement in so called "fake encounters" carried out by the Gujarat Police during his term as Minister of State for Home in Gujarat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X