ಪವಾರ್ ಮಹಾರಾಷ್ಟ್ರದ ಕೊರೊನಾ ವೈರಸ್; ಬಿಜೆಪಿ ನಾಯಕ

ಮುಂಬೈ, ಜೂನ್ 24 : ಮಹಾರಾಷ್ಟ್ರದ ಬಿಜೆಪಿ ನಾಯಕ, ವಿಧಾನ ಪರಿಷತ್ ಸದಸ್ಯ ಗೋಪಿಚಂದ್‌ ಪಡಾಲ್ಕರ್ ವಿವಾದ ಎಬ್ಬಿಸಿದ್ದಾರೆ. ಎನ್‌ಸಿಪಿಯ ಕಾರ್ಯಕರ್ತರು ಅವರ ವಿರುದ್ದ ಪ್ರತಿಭಟನೆ ನಡೆಸಿದ್ದಾರೆ.

ಬುಧವಾರ ಗೋಪಿಚಂದ್‌ ಪಡಾಲ್ಕರ್ ಕಾರ್ಯಕ್ರಮವೊಂದರಲ್ಲಿ, "ಎನ್‌ಸಿಪಿ ನಾಯಕ ಶರದ್ ಪವಾರ್ ಮಹಾರಾಷ್ಟ್ರದ ಕೊರೊನಾ ವೈರಸ್ ಸೋಂಕು" ಎಂದು ಹೇಳಿಕೆ ನೀಡಿದ್ದು ವಿವಾದಕ್ಕೆ ಕಾರಣವಾಗಿದೆ.

Sharad Pawar Coronavirus For Maharastra Says BJP MLC

ಪಂಡಾರಾಪುರದಲ್ಲಿ ಕಾರ್ಯಕ್ರಮದಲ್ಲಿವೊಂದರಲ್ಲಿ ಪಾಲ್ಗೊಂಡಿದ್ದ ಗೋಪಿಚಂದ್‌ ಪಡಾಲ್ಕರ್ ಎನ್‌ಸಿಪಿ ನಾಯಕನ ವಿರುದ್ಧ ನೀಡಿದ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಗೋವಿಚಂದ್ ವಿರುದ್ಧ ಪ್ರತಿಭಟನೆ ನಡೆದಿದೆ.

ಗೋಪಿಚಂದ್‌ ಪಡಾಲ್ಕರ್ ಹೇಳಿಕೆಗೆ ಶಿವಸೇನೆ ನಾಯಕಿ ಮನೀಷಾ ಕಯಾಂಡೆ ವಿಡಿಯೋ ಸಂದೇಶದ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. "ಗೋಪಿಚಂದ್‌ ಪಡಾಲ್ಕರ್ ಕೆಲವು ದಿನಗಳ ಹಿಂದೆ ಎಂಎಲ್‌ಸಿ ಆಗಿ ಆಯ್ಕೆಯಾಗಿದ್ದಾರೆ. ಪ್ರಚಾರಕ್ಕಾಗಿ ಮುಖ್ಯಮಂತ್ರಿ ಮತ್ತು ಶರದ್ ಪವಾರ್ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ" ಎಂದು ಆರೋಪಿಸಿದ್ದಾರೆ.

"ಗೋಪಿಚಂದ್‌ ಪಡಾಲ್ಕರ್ ಹೇಳಿಕೆಗಳ ಮೂಲಕ ಪ್ರಸಿದ್ಧಿ ಪಡೆಯುವುದನ್ನು ಬಿಟ್ಟು. ವಿಧಾನ ಪರಿಷತ್ ಸದಸ್ಯರಾದವರ ಕಾರ್ಯಗಳ ಬಗ್ಗೆ ಗಮನ ಕೊಡಲಿ" ಎಂದು ಮನೀಷಾ ಕಯಾಂಡೆ ತಿರುಗೇಟು ಕೊಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+