ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಟ್ ಕಾಯಿನ್ ಹಗರಣ : ರಾಜ್ ಕುಂದ್ರಾಗೆ ಕ್ಲೀನ್ ಚಿಟ್?

By Mahesh
|
Google Oneindia Kannada News

ಮುಂಬೈ, ಜೂನ್ 12: ಕ್ರಿಪ್ಟೋ ಕರೆನ್ಸಿ ಬಿಟ್ ಕಾಯಿನ್ ವಂಚನೆ ಪ್ರಕರಣದಲ್ಲಿ ವಿಚಾರಣೆಗೊಳಪಟ್ಟಿರುವ ಉದ್ಯಮಿ ರಾಜ್‌ ಕುಂದ್ರಾ ಅವರಿಗೆ ಈ ಕೇಸಿನಲ್ಲಿ ಕ್ಲೀನ್ ಚಿಟ್ ಸಿಗುವ ಎಲ್ಲಾ ಸಾಧ್ಯತೆಗಳು ಕಂಡು ಬಂದಿದೆ.

ಪುಣೆಯ ಸೈಬರ್ ಪೊಲೀಸರಿಗೆ ರಾಜ್ ಕುಂದ್ರಾ ವಿರುದ್ಧ ಯಾವುದೇ ದಾಖಲೆಗಳು ದೊರೆತಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ. ವಿಚಾರಣಾಧಿಕಾರಿ ಹಾಗೂ ಸೈಬರ್ ಸೆಲ್‌ ಇನ್ಸ್‌ಪೆಕ್ಟರ್‌ ಮನಿಷಾ ಜೆಂಡೇ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ.

Bitcoin Scam : Businessman Raj Kundra may get Clean Chit

ಜೂನ್‌ 5 ರಂದು ಇಡಿ ಅಧಿಕಾರಿಗಳು ಕುಂದ್ರಾ ಅವರನ್ನು ವಿಚಾರಣೆಗೊಳಪಡಿಸಿದ್ದರು. ಬಿಟ್‌ಕಾಯಿನ್‌ ಹಗರಣದಲ್ಲಿ ಭಾಗಿಯಾಗಿರುವ ಅಮಿತ್‌‌ ಭಾರದ್ವಾಜ್‌ ಜೊತೆ ಕುಂದ್ರಾ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು .
ದೇಶದಲ್ಲಿ ಮೊದಲು ಆನ್‌ಲೈನ್‌ ಕರೆನ್ಸಿ ಮಾರುಕಟ್ಟೆ ಆರಂಭಿಸಿದ ಅಮಿತ್ ಭಾರದ್ವಾಜ್ ಅವರಿಗೆ ರಾಜ್ ಕುಂದ್ರಾ ನೆರವಾಗಿದ್ದರು.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಭ್ರಷ್ಟಾಚಾರದ ಆರೋಪ ಹೊತ್ತು ಎರಡು ವರ್ಷಗಳ ಕಾಲ ನಿಷೇಧಕ್ಕೊಳಗಾಗಿದ್ದ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯ ಮಾಲೀಕರಾದ ರಾಜ್ ಕುಂದ್ರಾ ಅವರನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಪ್ರಶ್ನಿಸಲು ಮುಂದಾಗಿದ್ದಾರೆ.

English summary
Bitcoin Scam : Businessman Raj Kundra may get Clean Chit in Amit Bhardwah scam. Cyber cell officials of the Pune police are not finding any concrete evidence against him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X