ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಡ್‌ಗಾಗಿ ಸಂಸ್ಥೆಗಳು ಸರತಿ ಸಾಲಿನಲ್ಲಿ- ಯಾವುದೇ ಏಜೆಂಟ್‌ಗಳು ಇಲ್ಲ ಎಂದ ಲಸಿಕೆ ತಯಾರಕರು

|
Google Oneindia Kannada News

ಮುಂಬೈ, ಮೇ 28: ರೊಮೇನಿಯನ್ ಸಂಸ್ಥೆಯು ಮುಂಬೈಗೆ ಫಿಜರ್ ಕೋವಿಡ್ ಲಸಿಕೆಗಳನ್ನು ನೀಡುವುದಾಗಿ ಹೇಳಿತ್ತು. ಆದರೆ ಫಿಜರ್ ತನ್ನಲ್ಲಿ ಅಧಿಕೃತ ಏಜೆಂಟರು ಇಲ್ಲ ಎಂದು ಹೇಳಿದ ನಂತರ ರೊಮೇನಿಯನ್‌ ಸಂಸ್ಥೆ ತನ್ನ ಬಿಡ್ ಅನ್ನು ಹಿಂತೆಗೆದುಕೊಂಡಿದೆ.

ಲಸಿಕೆಗಳ ಬದಲಾಗಿ ಆಹಾರ ಉತ್ಪನ್ನಗಳು, ಉಡುಪು, ಸಲಹಾ ಸಂಸ್ಥೆಗಳೊಂದಿಗೆ ಸಂಬಂಧ ಹೊಂದಿರುವ ಸಂಸ್ಥೆಗಳು, ಮಾಧ್ಯಮ ಮತ್ತು ಚಲನಚಿತ್ರ ತಯಾರಿಕೆಗೆ ಸಂಬಂಧಿಸಿರುವ ಸಂಸ್ಥೆಗಳು ಮಹಾರಾಷ್ಟ್ರ ಮತ್ತು ಬೃಹನ್‌ ಮುಂಬೈ ಕಾರ್ಪೊರೇಷನ್‌ಗೆ ಕ್ರಮವಾಗಿ 5 ಕೋಟಿ ಮತ್ತು 1 ಕೋಟಿ ಲಸಿಕೆಗಳ ಒದಗಿಸುವ ಬಗ್ಗೆ ಪ್ರತಿಕ್ರಿಯಿಸಿತ್ತು.

ಅಪೋಲೋ ಆಸ್ಪತ್ರೆಯಲ್ಲಿ ಪಡೆಯುವ ಸ್ಪುಟ್ನಿಕ್-ವಿ ಲಸಿಕೆಗೆ ಎಷ್ಟು ಬೆಲೆ?ಅಪೋಲೋ ಆಸ್ಪತ್ರೆಯಲ್ಲಿ ಪಡೆಯುವ ಸ್ಪುಟ್ನಿಕ್-ವಿ ಲಸಿಕೆಗೆ ಎಷ್ಟು ಬೆಲೆ?

ಲಸಿಕೆ ವಿಚಾರದಲ್ಲಿ ಹಲವಾರು ರಾಜ್ಯಗಳು ಜಾಗತಿಕ ಟೆಂಡರ್‌ಗಳನ್ನು ಪತ್ರಿನಿಧಿಸುತ್ತಿದೆ, ಅದೇ ಸಮಯದಲ್ಲಿ, ಕೇಂದ್ರವು ಲಸಿಕೆಗಳನ್ನು ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧಿಸಬೇಕು ಎಂಬ ಒತ್ತಾಯವು ಕೇಳಿ ಬಂದಿದೆ, ಈ ನಡುವೆ ಈ ಬೆಳವಣಿಗೆ ಸಂಭವಿಸಿದೆ.

ಲಸಿಕೆ ಒದಗಿಸುವ ಭರವಸೆ ನೀಡಿದ ಸಂಸ್ಥೆಗಳು

ಲಸಿಕೆ ಒದಗಿಸುವ ಭರವಸೆ ನೀಡಿದ ಸಂಸ್ಥೆಗಳು

ಸಲಹಾ ಸಂಸ್ಥೆಗಳು, ರಫ್ತು/ಆಮದು ಅಥವಾ ಕಮಿಷನ್ ಆಧಾರದ ಮೇಲೆ ಕೆಲಸ ಮಾಡುವ ಸಂಸ್ಥೆಗಳು, ಮಹಾರಾಷ್ಟ್ರದ ಕರೆಗೆ ಸ್ಪಂದಿಸಿದ ಎಂಟು ಸಂಸ್ಥೆಗಳು, ಮೂರು ಆರೋಗ್ಯ ಕ್ಷೇತ್ರದ ಸಂಸ್ಥೆಗಳು ಮಹಾರಾಷ್ಟ್ರಕ್ಕೆ ಲಸಿಕೆ ನೀಡುವ ಭರವಸೆ ನೀಡಿದೆ. ಅಷ್ಟೇ ಅಲ್ಲದೇ ಡೋಸ್‌ಗೆ 10-38 ಡಾಲರ್‌ಗಳಂತೆ ಅಂದರೆ ಭಾರತದ ರೂ. 728-ರೂ. 2767 ರೂಪಾಯಿಯಲ್ಲಿ ಲಸಿಕೆ ಖರೀದಿಗೆ ಸಂಸ್ಥೆಗಳು ಮುಂದಾಗಿತ್ತು. ಈ ನಡುವೆ "ಮುಂಗಡ ಆದೇಶವನ್ನು ನೀಡಿದ ಮೂರು ವಾರಗಳಲ್ಲಿ ಸರಬರಾಜು ಮಾಡುವುದಾಗಿಯೂ ಕೆಲವರು ಭರವಸೆ ನೀಡಿದ್ದಾರೆ" ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಮೂರು ಭಾರತೀಯ ಸಂಸ್ಥೆಗಳಿಂದ ಪ್ರತಿಕ್ರಿಯೆ

ಮೂರು ಭಾರತೀಯ ಸಂಸ್ಥೆಗಳಿಂದ ಪ್ರತಿಕ್ರಿಯೆ

ಮಹಾರಾಷ್ಟ್ರಕ್ಕೆ ಮೂರು ಭಾರತೀಯ ಕಂಪನಿಗಳಿಂದ ಪ್ರತಿಕ್ರಿಯೆ ಲಭಿಸಿದೆ. ಗೇಮ್‌ಚಾಂಜರ್ಜ್, ತಪಾಡಿಯಾ ಇಂಟರ್‌ನ್ಯಾಷನಲ್‌ ಇಂಟರ್ವೆನ್ಷನಲ್ ಟೆಕ್ನಾಲಜಿ ಅಂಡ್ ಹೆಲ್ತ್‌ಕೇರ್‌ ಲಿಮಿಟೆಡ್‌, ಮತ್ತು ಗೆಟ್‌ಇಟ್ ಇನ್ನೋವೇಶನ್ಸ್ ಪ್ರೈವೇಟ್ ಲಿಮಿಟೆಡ್ ಈ ಮೂರು ಕಂಪನಿಗಳು. ಇದನ್ನು ಹೊರತುಪಡಿಸಿ, ವಿದೇಶಿ ಕಂಪನಿಗಳಾದ ಪ್ರೊಕ್ಯೂರ್ ನೆಟ್, ಕಿನ್‌ಫೋಕ್ ಟ್ರೇಡಿಂಗ್ ಎಫ್‌ಝಡ್‌ಸಿ, ಗ್ರೂಪೋ ಫೆರ್ಮೆಕ್ಸಾರ್, ಮೆಡಿಕಲ್ ಸಪ್ಲೈ ಕಂಪನಿ ಆಫ್ ಸ್ವಿಟ್ಜರ್ಲೆಂಡ್ (ಎಂಎಸ್‌ಸಿಎಸ್) ಮತ್ತು ಹ್ಯಾಡ್ಲಿ ಡೆವಲಪ್‌ಮೆಂಟ್ ಎಲ್ಎ‌‌ಲ್‌ಸಿ ಸಂಸ್ಥೆಗೆ ಲಸಿಕೆ ಒದಗಿಸುವ ಬಗ್ಗೆ ಮಹಾರಾಷ್ಟ್ರ ಸರ್ಕಾರ ಇಮೇಲ್‌ ಮಾಡಿದೆ.

ಕೋವಿಡ್‌ ಲಸಿಕೆ ವ್ಯರ್ಥ: ಕೇಂದ್ರ,ರಾಜ್ಯಗಳ ನಡುವೆ ವಾಕ್ಸಮರಕೋವಿಡ್‌ ಲಸಿಕೆ ವ್ಯರ್ಥ: ಕೇಂದ್ರ,ರಾಜ್ಯಗಳ ನಡುವೆ ವಾಕ್ಸಮರ

ರಷ್ಯಾದ ಸ್ಪುಟ್ನಿಕ್ ವಿ ಪೂರೈಕೆಗೆ ಗೇಮ್‌ಚೇಂಜರ್ಜ್ ಸಂಸ್ಥೆ ಭರವಸೆ

ರಷ್ಯಾದ ಸ್ಪುಟ್ನಿಕ್ ವಿ ಪೂರೈಕೆಗೆ ಗೇಮ್‌ಚೇಂಜರ್ಜ್ ಸಂಸ್ಥೆ ಭರವಸೆ

ಎಲ್ಲಾ ಮೂರು ಭಾರತೀಯ ಕಂಪನಿಗಳು ರಷ್ಯಾದ ಲಸಿಕೆ ಸ್ಪುಟ್ನಿಕ್ ವಿ ಅನ್ನು ಪೂರೈಸಬಹುದು ಎಂದು ಹೇಳಿಕೊಂಡಿದೆ. ಆದರೆ ರಷ್ಯಾದ ಆರ್‌ಡಿಐಎಫ್ ವಕ್ತಾರರು, ಡಾ. ರೆಡ್ಡಿ ಪ್ರಯೋಗಾಲಯಗಳನ್ನು ಹೊರತುಪಡಿಸಿ ಭಾರತದೊಂದಿಗೆ ಯಾವುದೇ ಔಪಚಾರಿಕ ಸಂಬಂಧಗಳಿಲ್ಲ ಎಂದು ಹೇಳಿದ್ದಾರೆ. ಈ ನಡುವೆ ಆಟೋಮೊಬೈಲ್, ಫ್ಯಾಷನ್, ಆಹಾರ ಮತ್ತು ಟೆಲಿಕಾಂ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವ ನಿರ್ವಹಣಾ ಸಲಹಾ ಸಂಸ್ಥೆಯಾಗಿರುವ ಗೇಮ್‌ಚೇಂಜರ್ಜ್ ಸಂಸ್ಥಾಪಕ ಜಗತ್ ಜಿತ್ ಸಿಂಗ್, "ನಾವು ಸ್ಪುಟ್ನಿಕ್ ವಿ ಲಸಿಕೆ ಆಮದು ಮಾಡಿಕೊಳ್ಳಬಹುದು. ಗೇಮ್‌ಚೇಂಜರ್ಜ್ ಆರ್‌ಡಿಐಎಫ್‌ನ ವಿತರಕರಾದ ಸಿಡಿಪಿ ಸ್ವಿಸ್ ಪ್ರತಿನಿಧಿಸುತ್ತದೆ ಎಂದು ಹೇಳಿದ್ದಾರೆ.

ಮೂರು ಭಾರತೀಯ ಸಂಸ್ಥೆಗಳ ಪೈಕಿ ನಷ್ಟದಲ್ಲಿದೆ ಒಂದು ಸಂಸ್ಥೆ

ಮೂರು ಭಾರತೀಯ ಸಂಸ್ಥೆಗಳ ಪೈಕಿ ನಷ್ಟದಲ್ಲಿದೆ ಒಂದು ಸಂಸ್ಥೆ

ಲಸಿಕೆ ವಿಚಾರದಲ್ಲಿ ಮಹಾರಾಷ್ಟ್ರಕ್ಕೆ ಪ್ರತಿಕ್ರಿಯೆ ನೀಡಿರುವ ಪುಣೆ ಮೂಲದ ತಪಾಡಿಯಾ ಇಂಟರ್‌ನ್ಯಾಷನಲ್ ಸಂಸ್ಥೆಯು ನಾಲ್ಕು ವರ್ಷದಿಂದ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆಯಾಗಿದೆ. ಈ ಸಂಸ್ಥೆಯು ಸಗಟು ಮತ್ತು ಆಯೋಗ ಆಧಾರಿತ ವ್ಯಾಪಾರ, ಔಷಧ ಮತ್ತು ವೈದ್ಯಕೀಯ ಉಪಕರಣಗಳ ವ್ಯವಹಾರಗಳನ್ನು ನಡೆಸುತ್ತದೆ. 6.19 ಕೋಟಿ ರೂ. ಆದಾಯ ಹೊಂದಿದ್ದ ಈ ಸಂಸ್ಥೆಯ ಆದಾಯವು 2020 ರಲ್ಲಿ 1.99 ಕೋಟಿ ರೂ. ನಷ್ಟದಲ್ಲಿದೆ ಎಂದು ದಾಖಲೆಗಳು ಹೇಳುತ್ತದೆ ಎಂದು ವರದಿಯಾಗಿದೆ.

ಕೊರೊನಾ ಲಸಿಕೆಗಳ ಕೊರತೆಗೆ ರಾಜ್ಯಗಳೇ ಹೊಣೆ: ಡಾ. ವಿಕೆ ಪೌಲ್ಕೊರೊನಾ ಲಸಿಕೆಗಳ ಕೊರತೆಗೆ ರಾಜ್ಯಗಳೇ ಹೊಣೆ: ಡಾ. ವಿಕೆ ಪೌಲ್

2017 ರಿಂದ ಆದಾಯ ಗಳಿಸದ ಗೆಟ್‌ಇಟ್ ಇನ್ನೋವೇಶನ್ಸ್

2017 ರಿಂದ ಆದಾಯ ಗಳಿಸದ ಗೆಟ್‌ಇಟ್ ಇನ್ನೋವೇಶನ್ಸ್

ಇನ್ನು ಲಸಿಕೆಗೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಇನ್ನೊಂದು ಭಾರತೀಯ ಸಂಸ್ಥೆ ಗೆಟ್‌ಇಟ್ ಇನ್ನೋವೇಶನ್ಸ್ ದೆಹಲಿ ಮೂಲದ ಸಂಸ್ಥೆಯಾಗಿದ್ದು, ದಾಖಲೆಗಳ ಪ್ರಕಾರ ಮಾಧ್ಯಮ, ಚಲನಚಿತ್ರ ತಯಾರಿಕೆಯ ಸಂಸ್ಥೆ ಇದಾಗಿದೆ. ಇದರ ಮುಖ್ಯಸ್ಥರು ಸಂಜೀವ್ ನರುಲಾ ಹಾಗೂ ರಚನಾ ನರುಲಾ. ವರದಿಗಳ ಪ್ರಕಾರ 2017 ರಿಂದ ಕಾರ್ಯಾಚರಣೆ ಮಾಡದ ಈ ಸಂಸ್ಥೆಯು ಯಾವುದೇ ಆದಾಯವನ್ನು ಗಳಿಸಿಲ್ಲ. 2019 ರಲ್ಲಿ 4.12 ಲಕ್ಷ ರೂ. ವ್ಯವಹಾರ ನಡೆಸಿದೆ.

ಫಿಜರ್ ಕೋವಿಡ್‌ ಲಸಿಕೆ ಮಾರಾಟಕ್ಕೆ ಯಾರಿಗೂ ಅಧಿಕಾರವಿಲ್ಲ ಎಂದ ಫಿಜರ್ ವಕ್ತಾರ

ಫಿಜರ್ ಕೋವಿಡ್‌ ಲಸಿಕೆ ಮಾರಾಟಕ್ಕೆ ಯಾರಿಗೂ ಅಧಿಕಾರವಿಲ್ಲ ಎಂದ ಫಿಜರ್ ವಕ್ತಾರ

ಮೆಕ್ಸಿಕನ್ ಕಂಪನಿಯಾದ ಗ್ರೂಪೋ ಫೆರ್ಮೆಕ್ಸಾರ್, ಸ್ಪುಟ್ನಿಕ್ ವಿ, ಜಾನ್ಸನ್ ಆಂಡ್‌ ಜಾನ್ಸನ್, ಫಿಜರ್-ಬಯೋಟೆಕ್ ಮತ್ತು ಅಸ್ಟ್ರಾ ಜೆನೆಕಾ ಲಸಿಕೆಗಳನ್ನು ಒದಗಿಸಬಹುದೆಂದು ಹೇಳಿದೆ. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಫಿಜರ್ ವಕ್ತಾರ, ಫಿಜರ್ ಇಂಕ್ ಅಥವಾ ಭಾರತ ಸೇರಿದಂತೆ ಜಾಗತಿಕವಾಗಿ ಯಾವುದೇ ಅಂಗಸಂಸ್ಥೆಗಳಿಗೆ ಫಿಜರ್-ಬಯೋನೆಟೆಕ್ ಕೋವಿಡ್ 19 ಲಸಿಕೆಯನ್ನು ಆಮದು / ಮಾರುಕಟ್ಟೆ / ವಿತರಣೆ ನಡೆಸಲು ಅಧಿಕಾರ ನೀಡಿಲ್ಲ. ನಮ್ಮ ಲಸಿಕೆ ರಾಷ್ಟ್ರೀಯವಾಗಿ ಬಳಕೆಗೆ ಲಭ್ಯವಾಗುವ ಬಗ್ಗೆ ನಾವು ಭಾರತ ಸರ್ಕಾರದೊಂದಿಗೆ ನಿರಂತರ ಚರ್ಚೆಗಳನ್ನು ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ. "ಈ ಸಮಯದಲ್ಲಿ, ಲಸಿಕೆ ಸಂಗ್ರಹಣೆ ಅಥವಾ ಖರೀದಿಗಾಗಿ ಕಂಪನಿಯು ಕೇಂದ್ರ ಮಟ್ಟದಲ್ಲಿ ಸರ್ಕಾರಿ ಸಂಸ್ಥೆಗಳು ಮತ್ತು ಅಧೀನ ಸಂಸ್ಥೆಗಳೊಂದಿಗೆ ಮಾತ್ರ ಮಾತುಕತೆ ನಡೆಸುತ್ತಿದೆ. ಪ್ರಸ್ತುತ ತುರ್ತು ಸಾಂಕ್ರಾಮಿಕ ಅವಧಿಯಲ್ಲಿ ಲಸಿಕೆ ವಿಚಾರದಲ್ಲಿ ನಾವು ಮೂರನೇ ವ್ಯಕ್ತಿಗಳೊಂದಿಗೆ ಕಾರ್ಯನಿರ್ವಹಿಸುತ್ತಿಲ್ಲ ಎಂದು ಜೆ & ಜೆ ವಕ್ತಾರರು ತಿಳಿಸಿದ್ದಾರೆ.

ವಿದೇಶಗಳಿಂದ ಭಾರತ ಸ್ವೀಕರಿಸಿದ ವೈದ್ಯಕೀಯ ನೆರವು ಎಷ್ಟು? ಮಾಹಿತಿ ಹಂಚಿಕೊಂಡ ಸರ್ಕಾರವಿದೇಶಗಳಿಂದ ಭಾರತ ಸ್ವೀಕರಿಸಿದ ವೈದ್ಯಕೀಯ ನೆರವು ಎಷ್ಟು? ಮಾಹಿತಿ ಹಂಚಿಕೊಂಡ ಸರ್ಕಾರ

ಇ ಮೇಲ್‌ಗೆ ಪ್ರತಿಕ್ರಿಯಿಸದ ಮಾಡರ್ನಾ ಮತ್ತು ಅಸ್ಟ್ರಾಜೆನೆಕಾ

ಇ ಮೇಲ್‌ಗೆ ಪ್ರತಿಕ್ರಿಯಿಸದ ಮಾಡರ್ನಾ ಮತ್ತು ಅಸ್ಟ್ರಾಜೆನೆಕಾ

ಮಾಡರ್ನಾ ಮತ್ತು ಅಸ್ಟ್ರಾಜೆನೆಕಾ ಸಂಸ್ಥೆಗಳು ಮಹಾರಾಷ್ಟ್ರ ಸರ್ಕಾರದ ಇ ಮೇಲ್‌ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ವರದಿಯಾಗಿದೆ. ಗ್ರೂಪೊ ಫೆರ್ಮೆಕ್ಸರ್‌ಗೆ ಇಮೇಲ್ ಸಹ ಕಳುಹಿಸಲಾಗಿದೆ, ಆದರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ರಷ್ಯಾದ ಘಟಕವು ತನ್ನ ಏಜೆಂಟರ ಬಗ್ಗೆ ಯಾವುದೇ ವಿವರಗಳನ್ನು ನೀಡಿಲ್ಲವಾದರೂ ಇತರ ಎಲ್ಲ ಕಂಪನಿಗಳು ತಾವು ಸ್ಪುಟ್ನಿಕ್ ಪೂರೈಸಬಹುದೆಂದು ಹೇಳಿಕೊಂಡಿವೆ.

ವೀಡಿಯೊ ಕಾನ್ಫರೆನ್ಸ್ ನಡೆಸಲು ಸಿದ್ದವಾದ ಮಹಾರಾಷ್ಟ್ರ ಸರ್ಕಾರ

ವೀಡಿಯೊ ಕಾನ್ಫರೆನ್ಸ್ ನಡೆಸಲು ಸಿದ್ದವಾದ ಮಹಾರಾಷ್ಟ್ರ ಸರ್ಕಾರ

ಲಸಿಕೆ ವಿಚಾರದಲ್ಲಿ ಈ ಎಲ್ಲಾ ಗೊಂದಲಗಳ ಬೆನ್ನಲ್ಲೇ ಕಂಪೆನಿಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಲು ಹಾಗೂ ಲಸಿಕೆ ತಯಾರಕರೊಂದಿಗೆ ಷೇರುಗಳನ್ನು ಖರೀದಿಸಲು ಈ ಕಂಪನಿಗಳು ಒಪ್ಪಂದವನ್ನು ಮಾಡಿಕೊಂಡಿದೆಯೇ ಎಂದು ತಿಳಿಯಲು ಮಹಾರಾಷ್ಟ್ರ ಸರ್ಕಾರ ಈ ವಾರ ವೀಡಿಯೊ ಕಾನ್ಫರೆನ್ಸ್ ನಡೆಸಲು ಯೋಜಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಮೂಲಕ ಕೇಂದ್ರ ಸರ್ಕಾರದ ಗಮನ ಸೆಳೆಯಲೂ ಕೂಡಾ ಸರ್ಕಾರ ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ.

ಎರಡು ಪ್ರತ್ಯೇಕ ಕೋವಿಡ್ ಲಸಿಕೆ ಡೋಸ್‌ ಪಡೆಯುವುದರಿಂದ ಏನಾಗುತ್ತೆ: ಕೇಂದ್ರ ಹೇಳಿದ್ದೇನು?ಎರಡು ಪ್ರತ್ಯೇಕ ಕೋವಿಡ್ ಲಸಿಕೆ ಡೋಸ್‌ ಪಡೆಯುವುದರಿಂದ ಏನಾಗುತ್ತೆ: ಕೇಂದ್ರ ಹೇಳಿದ್ದೇನು?

ಫಿಜರ್ ಮತ್ತು ಅಸ್ಟ್ರಾಜೆನೆಕಾ ಲಸಿಕೆ ಒದಗಿಸುತ್ತೇವೆ ಎಂದ ಸಂಸ್ಥೆ

ಫಿಜರ್ ಮತ್ತು ಅಸ್ಟ್ರಾಜೆನೆಕಾ ಲಸಿಕೆ ಒದಗಿಸುತ್ತೇವೆ ಎಂದ ಸಂಸ್ಥೆ

ಈ ನಡುವೆ ರೊಮೇನಿಯಾ ಮೂಲದ ಒ2 ಬ್ಲೂ ಎನರ್ಜಿ ಎಸ್‌ಆರ್‌ಎಲ್ ಸಂಸ್ಥೆಯು ಮಂಗಳವಾರ ಬಿಎಂಸಿಗೆ ಪ್ರತಿಕ್ರಿಯೆ ನೀಡಿದೆ. ಫಿಜರ್-ಬಯೋನೆಟೆಕ್ ಮತ್ತು ಅಸ್ಟ್ರಾಜೆನೆಕಾ ಲಸಿಕೆಗಳನ್ನು ಪೂರೈಸಲು ಸಹಾಯ ಮಾಡುತ್ತೇವೆ ಎಂದು ಹೇಳಿದೆ. ಮಂಗಳವಾರವೇ ಫಿಜರ್-ಬಯೋಟೆಕ್ ತನ್ನ ಲಸಿಕೆಗಳನ್ನು ಆಮದು ಮಾಡಿಕೊಳ್ಳಲು, ಮಾರಾಟ ಮಾಡಲು ಮತ್ತು ವಿತರಿಸಲು ಯಾರಿಗೂ ಅಧಿಕಾರ ನೀಡಿಲ್ಲ ಎಂದು ಹೇಳಿದೆ.

ಬಿಡ್‌ ವಾಪಾಸ್‌ ಪಡೆದ ಸಂಸ್ಥೆಗಳು

ಬಿಡ್‌ ವಾಪಾಸ್‌ ಪಡೆದ ಸಂಸ್ಥೆಗಳು

ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಗುರುವಾರ, ಸಂಸ್ಥೆಯು ತಮ್ಮ ಬಿಡ್‌ಗಳನ್ನು ಹಿಂತೆಗೆದುಕೊಳ್ಳುತ್ತಿದೆ ಎಂದು ತಿಳಿಸುವ ಇಮೇಲ್ ಕಳುಹಿಸಿದೆ. ಆದರೆ ಇದಕ್ಕೆ ಯಾವುದೇ ಕಾರಣಗಳನ್ನು ನೀಡಿಲ್ಲ ಎಂದು ಬಿಎಂಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಎಲ್ಲಾ ಸಂಸ್ಥೆಗಳು ರಷ್ಯಾದ ಸ್ಪುಟ್ನಿಕ್ ವಿ ಮತ್ತು ಸ್ಪುಟ್ನಿಕ್ ವಿ ಲೈಟ್ ಲಸಿಕೆ ಸರಬರಾಜು ಮಾಡುವ ಭರವಸೆ ನೀಡಿದ್ದವು. ಆದರೆ ಈಗ ಹಲವು ಗೊಂದಲಗಳ ನಡುವೆ ಬಿಡ್‌ ವಾಪಾಸ್‌ ಪಡೆದಿದೆ.

ಏತನ್ಮಧ್ಯೆ ಲಸಿಕೆಗಳನ್ನು ನೇರವಾಗಿ ಖರೀದಿಸಲು ಬಿಎಂಸಿ ಮತ್ತು ಮಹಾರಾಷ್ಟ್ರ ಸರ್ಕಾರ ಆರ್‌ಡಿಐಎಫ್‌ಗೆ ಪತ್ರ ಬರೆದಿದೆ. ಆದರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎನ್ನಲಾಗಿದೆ. ಪುಣೆಯ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ (ಎಸ್‌ಐಐ) ಪ್ರತಿಕ್ರಿಯೆಗಾಗಿಯೂ ಬಿಎಮ್‌ಸಿ ಕಾಯುತ್ತಿದೆ. ಇಲ್ಲಿಯವರೆಗೆ ಈ ಸಂಸ್ಥೆಯಿಂದಲೂ ಯಾವುದೇ ಉತ್ತರವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಿಡ್‌ ಸಲ್ಲಿಕೆಗೆ ಕೊನೆಯ ದಿನಾಂಕವನ್ನು ಜೂನ್ 1 ರವರೆಗೆ ವಿಸ್ತರಿಸಲಾಗಿರುವುದರಿಂದ ಹೆಚ್ಚಿನ ಬಿಡ್‌ಗಳನ್ನು ಪಡೆಯುವ ಭರವಸೆ ಇದೆ ಎಂದು ಕೂಡಾ ಅಧಿಕಾರಿಗಳು ಹೇಳಿದ್ದಾರೆ.

(ಒನ್ಇಂಡಿಯಾ ಸುದ್ದಿ)

English summary
BIG MESS- Firms line up to bid but vaccine makers say have no agents; Nation awaits. read more...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X