• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಷಾರು... ಹೃದ್ರೋಗಕ್ಕೆ ಲಿಂಗ, ವಯಸ್ಸಿನ ಹಂಗಿಲ್ಲ!

|
Google Oneindia Kannada News

ಶ್ರೀಮಂತ ಕಾಯಿಲೆ ಎಂದೇ ಕರೆಯಿಸಿಕೊಳ್ಳುವ ಹೃದ್ರೋಗ ಇಂದು ಹಲವರನ್ನು ಕಾಡುತ್ತಿದೆ. ವಯಸ್ಸು, ಲಿಂಗ, ಸಮಯದ ಭೇದವಿಲ್ಲದೆ ಯಾರನ್ನಾದರೂ, ಯಾವ ವಯಸ್ಸಿನಲ್ಲಾದರೂ, ಯಾವ ಸಮಯದಲ್ಲಾದರೂ ಕಾಡಬಹುದಾದ ಹೃದಯಾಘಾತದ ಸಮಸ್ಯೆ ಕುರಿತು ಇತ್ತೀಚೆಗೆ ಐಸಿಐಸಿಐ ಲೊಂಬಾರ್ಡ್ ಸಮೀಕ್ಷೆಯೊಂದನ್ನು ನಡೆಸಿದೆ.

ಹೃದಯಾಘಾತದಿಂದ ಖ್ಯಾತ ಹಿಂದಿ ನಟಿ ಶ್ರೀದೇವಿ ನಿಧನಹೃದಯಾಘಾತದಿಂದ ಖ್ಯಾತ ಹಿಂದಿ ನಟಿ ಶ್ರೀದೇವಿ ನಿಧನ

ಈ ಸಮೀಕ್ಷೆಯಲ್ಲಿ ಸುಮಾರು 50 ಹೃದ್ರೋಗ ತಜ್ಞರ ಮೌಖಿಕ ಸಂದರ್ಶನ ನಡೆಸಿ, ಅವರ ಹತ್ತು ವರ್ಷಕ್ಕೂ ಹೆಚ್ಚಿನ ಅನುಭವವನ್ನು ಕಲೆಹಾಕಲಾಗಿದೆ. ಅವರ ಅನುಭವಗಳಿಂದ ತಯಾರಿಸಿದ ವರದಿಯಲ್ಲಿ ಹೃದ್ರೋಗದ ಬಹುಮುಖ್ಯ ಕಾರಣಗಳ ಕುರಿತು ಉಲ್ಲೇಖಿಸಲಾಗಿದೆ.

200 ಬಡ ಹೃದ್ರೋಗಿಗಳಿಗೆ ಜಯದೇವ ಆಸ್ಪತ್ರೆಯಿಂದ ಉಚಿತ ಸ್ಟೆಂಟ್200 ಬಡ ಹೃದ್ರೋಗಿಗಳಿಗೆ ಜಯದೇವ ಆಸ್ಪತ್ರೆಯಿಂದ ಉಚಿತ ಸ್ಟೆಂಟ್

ಶೇ.64 ರಷ್ಟು ಜನರು ತಿಳಿದಿರುವಂತೆ, ಹೃದ್ರೋಗಕ್ಕೆ ಅಧಿಕ ಒತ್ತಡವೇ ಕಾರಣ ಎಂಬ ನಂಬಿಕೆ ಪೂರ್ತಿ ಸತ್ಯವಲ್ಲ. ಹೃದ್ರೋಗಕ್ಕೆ ಒತ್ತಡದಷ್ಟೇ ಕೊಡುಗೆ ನೀಡುವಂಥವು ಕ್ರಮಬದ್ಧವಲ್ಲದ ಆಹಾರ ಪದ್ಧತಿ ಮತ್ತು ವ್ಯಾಯಾಮದ ಕೊರತೆ. ಪುರುಷರಲ್ಲಿ ಅತಿಯಾದ ಸುಸ್ತು, ಆಯಾಸ ಮತ್ತು ಮಹಿಳೆಯರಲ್ಲಿ ಅತಿಯಾದ ಎದೆನೋವು ಹೃದಯಾಘಾತದ ಸಂಭಾವ್ಯ ಕಾರಣಗಳು ಎನ್ನುತ್ತಾರೆ ವೈದ್ಯರು. ಸಮೀಕ್ಷಾ ವರದಿಯಲ್ಲಿದ್ದ ಪ್ರಮುಖ ಅಂಶಗಳು ಇಲ್ಲಿವೆ.

ಹೃದಯಾಘಾತಕ್ಕೆ ವಯಸ್ಸಿನ ಭೇದವಿಲ್ಲ!

ಹೃದಯಾಘಾತಕ್ಕೆ ವಯಸ್ಸಿನ ಭೇದವಿಲ್ಲ!

ಬಹುಪಾಲು ಜನರ ನಂಬಿಕೆಯ ಪ್ರಕಾರ 40 ವರ್ಷದಾಚೆಗೆ ಅದರಲ್ಲೂ, 50- 60 ವರ್ಷದಲ್ಲಿ ಹೃದಯಾಘಾತವಾಗುತ್ತದೆ. ಆದರೆ ತಜ್ಞರು ಹೇಳುವ ಪ್ರಕಾರ ಹೃದಯಾಘಾತ ಯಾವ ವಯಸ್ಸಿನಲ್ಲಿಯಾದರೂ ಆಗಬಹುದು. ಸರಿಯಾದ ಆಹಾರ ಕ್ರಮ, ವ್ಯಾಯಾಮವಿಲ್ಲದಿದ್ದರೆ ಹೃದಯಾಘಾದ ಸಮಸ್ಯೆ ಯಾರನ್ನಾದರೂ ಕಾಡಬಹುದು.

ಬೊಜ್ಜಿನ ಸಮಸ್ಯೆ ಇರುವವರನ್ನಷ್ಟೇ ಕಾಡುತ್ತದೆಂಬುದೂ ತಪ್ಪು!

ಬೊಜ್ಜಿನ ಸಮಸ್ಯೆ ಇರುವವರನ್ನಷ್ಟೇ ಕಾಡುತ್ತದೆಂಬುದೂ ತಪ್ಪು!

ಹೃದ್ರೋಗ ಬೊಜ್ಜಿನ ಸಮಸ್ಯೆ ಇರುವವರಲ್ಲಿ ಮಾತ್ರ ಕಾಡುತ್ತದೆ ಎಂಬುದೂ ಅರ್ಥವಿಲ್ಲದ ಮಾತು. ಎಣ್ಣೆಪದಾರ್ಥದಿಂದ ಹೃದಯ ಸಂಬಂಧಿ ಕಾಯಿಲೆ ಬಂದೀತು ಎಂಬ ಭಾವನೆ ಹಲವರಲ್ಲಿದೆ, ಆದರೆ ಅದಕ್ಕಿಂತ ಹೆಚ್ಚಾಗಿ ಹೃದ್ರೋಗ ಕಾಡುವುದಕ್ಕೆ ಕಾರಣ ಕೊಲೆಸ್ಟರಾಲ್. ತೆಳ್ಳಗಿರುವವರನ್ನೂ ಹೃದ್ರೋಗದ ಸಮಸ್ಯೆ ಕಾಡಬಹುದು. ಹೃದ್ರೋಗಕ್ಕೂ ದೇಹದ ಆಕೃತಿಗೂ ಸಂಬಂಧವಿಲ್ಲ ಎನ್ನುತ್ತಾರೆ ಶೇ. 74 ರಷ್ಟು ವೈದ್ಯರು.

ಮುಂಬೈ ಮತ್ತು ದೆಹಲಿಯಲ್ಲಿ ಹೃದ್ರೋಗದ ಪ್ರಕರಣ ಹೆಚ್ಚು

ಮುಂಬೈ ಮತ್ತು ದೆಹಲಿಯಲ್ಲಿ ಹೃದ್ರೋಗದ ಪ್ರಕರಣ ಹೆಚ್ಚು

ಹೃದ್ರೋಗದ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿವೆ. ಇಲ್ಲಿನ ಒತ್ತಡದ ಜೀವನವೇ ಇದಕ್ಕೆ ಬಹುಮುಖ್ಯ ಕಾರಣ ಎಂಬುದು ವೈದ್ಯರ ಅಭಿಪ್ರಾಯ.

ಆರೋಗ್ಯ ವಿಮೆ ಅತ್ಯಗತ್ಯ

ಆರೋಗ್ಯ ವಿಮೆ ಅತ್ಯಗತ್ಯ

ಶೇ.62 ರಷ್ಟು ವೈದ್ಯರು ಹೇಳುವ ಪ್ರಕಾರ ಪ್ರತಿ ವ್ಯಕ್ತಿಯೂ ತನ್ನ 20-25 ವರ್ಷ ವಯಸ್ಸಿನೊಳಗೆ ಆರೋಗ್ಯ ವಿಮೆ ಮಾಡಿಸಿಕೊಳ್ಳಬೇಕು.

English summary
ICICI Lombard conducted a survey of cardiologists to burst myths associated with heart-related ailments and highlight the facts about cardiovascular disease. The survey involved face-to-face interviews with 50 cardiologists, each with more than 10 years of experience.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X