ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಭಾಭಾ ಬಂಗಲೆ ಉಳಿಸಲು ಮೋದಿ ಮನಸ್ಸು ಮಾಡಲಿಲ್ಲ'

By Mahesh
|
Google Oneindia Kannada News

ಮುಂಬೈ,ಜೂನ್ 18: ದೇಶದ ಪರಮಾಣು ಪಿತಾಮಹ ಡಾ. ಹೋಮಿ ಜಹಾಂಗೀರ್ ಭಾಭಾರ ಅವರ ಮನೆಯನ್ನು ಉಳಿಸಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾತ್ರ ಸಾಧ್ಯವಿತ್ತು. ಈ ವಿಷಯ ಅರಿತ ಭಾರತರತ್ನ ಸಿಎನ್ನಾರ್ ರಾವ್ ಅವರು ಮೋದಿಗೆ ಮನವಿ ಪತ್ರ ಸಲ್ಲಿಸಿದ್ದರು. ಆದರೆ, ಮೋದಿ ಮನಸ್ಸು ಮಾಡಲಿಲ್ಲ.

ಹೋಮಿ ಜಹಾಂಗೀರ್ ಭಾಭಾ ಅವರ ಬಂಗಲೆ ರಾಷ್ಟ್ರೀಯ ಸ್ಮಾರಕವಾಗಿ ಉಳಿಸಿಕೊಳ್ಳಬೇಕಿದೆ. ಭಾರತದ ಪರಮಾಣು ಪಿತಾಮಹನಿಗೆ ನಾವು ಈ ಮೂಲಕ ಗೌರವ ಸಲ್ಲಿಸಬಹುದು. ದಯವಿಟ್ಟು ಹರಾಜು ಪ್ರಕ್ರಿಯೆ ನಿಲ್ಲಿಸಲು ಆದೇಶ ಹೊರಡಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರ್ನಾಟಕದ ಖ್ಯಾತ ವಿಜ್ಞಾನಿ, ಭಾರತ ರತ್ನ ಸಿ.ಎನ್.ಆರ್ ರಾವ್ ಅವರು ಪತ್ರ ಬರೆದಿದ್ದರು. ಆದರೆ, ಇದಕ್ಕೆ ಉತ್ತರವೂ ಸಿಕ್ಕಿಲ್ಲ, ಭಾಭಾ ಮನೆ ಉಳಿಸಲೂ ಆಗಲಿಲ್ಲ.[ಸಿ.ಎನ್.ಆರ್.ರಾವ್ ಛಾಯಾಚಿತ್ರ ಪ್ರದರ್ಶನ]

ಮನೆ ಹರಾಜು ಪ್ರಕ್ರಿಯೆ ನಡೆದಿದೆ : ಮಲಬಾರ್ ಹಿಲ್ಸ್ ಪ್ರದೇಶದಲ್ಲಿ ಬುಧವಾರ ಭಾಭಾ ಅವರ ಬಂಗಲೆ ಹರಾಜು ಪ್ರಕ್ರಿಯೆ ಆರಂಭಗೊಂಡಿದೆ. ಸುಮಾರು 257 ಕೋಟಿಗೆ ಮೂಲ ಬೆಲೆ ನಿಗದಿಮಾಡಲಾಗಿದೆ. ಖಾಸಗಿ ಸಂಸ್ಥೆ ರಾಷ್ಟ್ರೀಯ ಪ್ರದರ್ಶನ ಕಲಾ ಕೇಂದ್ರದಿಂದ ಮನೆ ಹರಾಜು ಪ್ರಕ್ರಿಯೆ ನಡೆದಿದೆ.

ದಕ್ಷಿಣ ಮುಂಬೈನಲ್ಲಿರುವ ಈ ಕಟ್ಟಡ 13,953 ಚದರ ಅಡಿ ನಿರ್ಮಿತ ವಿಸ್ತ್ರೀರ್ಣ ಹಾಗೂ 17,150 ಚದರ ಅಡಿ ಪ್ಲಾಟ್ ಹೊಂದಿದೆ. ನ್ಯಾಷನಲ್ ಸೆಂಟರ್ ಫಾರ್ ಪರ್ಫಮಿಂಗ್ ಆರ್ಟ್ಸ್(NCPA) ಅಧೀನದಲ್ಲಿದೆ. ಹರಾಜು ಪ್ರಕ್ರಿಯೆ ನಿಲ್ಲಿಸುವಂತೆ ಭಾಭಾ ಅಣು ಸಂಶೋಧನಾ ಕೇಂದ್ರ(BARC) ಉದ್ಯೋಗಿಗಳು ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ಇತ್ತೀಚೆಗೆ ತಿರಸ್ಕರಿಸಿತ್ತು.

ಜಸ್ಟೀಸ್ ಮೋಹಿತ್ ಶಾ ಹಾಗೂ ಜಸ್ಟೀಸ್ ಎಂಎಸ್ ಸೋನಕ್ ಅವರಿದ್ದ ಪೀಠ ಜೂ.23ರಂದು ವಿಚಾರಣೆ ಮುಂದೂಡಿದ್ದಾರೆ. ಆದರೆ, ಇದಕ್ಕೂ ಮುನ್ನವೇ ಹರಾಜು ಪ್ರಕ್ರಿಯೆ ಆರಂಭಗೊಂಡಿರುವುದರಿಂದ ಹರಾಜು ಪ್ರಕ್ರಿಯೆಗೆ ತಡೆ ಇಲ್ಲದ್ದಂತಾಗಿದೆ.

ಹೇಗಾದರೂ ಬಂಗಲೆ ಉಳಿಸಿಕೊಳ್ಳುವ ಯತ್ನದಲ್ಲಿ BARC ಉದ್ಯೋಗಿಗಳು ಟಾಟಾ ಸಮೂಹದ ರತನ್ ಟಾಟಾ ಅವರಿಗೆ ಮನವಿ ಸಲ್ಲಿಸಿದ್ದರು. ಇದಕ್ಕೆ ಸ್ಪಂದಿಸಿ ಉತ್ತರ ನೀಡಿದ್ದ ಟಾಟಾ, ಭಾಭಾ ಅವರ ಮೂರು ಅಂತಸ್ತಿನ ಬಂಗಲೆಯನ್ನು ರಾಷ್ಟ್ರೀಯ ವಸ್ತು ಸಂಗ್ರಹಾಲಯವಾಗಿ ಕಾಣಲು ಬಯಸುತ್ತೇನೆ. ಆದರೆ, ನಾನು ಹೇಗೆ ಸಹಾಯ ಮಾಡುವುದೋ ತಿಳಿಯುತ್ತಿಲ್ಲ ಎಂದಿದ್ದರು. ಹತ್ತು ಹಲವು ಆನ್ ಲೈನ್ ಪಿಟೀಷನ್ ಗಳು ಬಂದರೂ ಭಾಭಾ ಮನೆ ಇತಿಹಾಸ ಪುಟ ಸೇರುವುದನ್ನು ತಪ್ಪಿಸಲು ಆಗಲಿಲ್ಲ.

1966ರಲ್ಲಿ ಸ್ವಿಟ್ಜರ್ಲೆಂಡ್ ನಲ್ಲಿ ವಿಮಾನ ಅಪಘಾತದಲ್ಲಿ ದುರಂತ ಸಾವನ್ನಪ್ಪಿದ್ದ ಭಾಭಾ ಅವರು ಮುಂಬೈನ ಮನೆ ಬಗ್ಗೆ ಯಾವುದೇ ಉಯಿಲು ಪತ್ರ ಬರೆದಿರಲಿಲ್ಲ. ಮನೆ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಜೇಮ್ಶೇಡ್ ಕೈಗೆ ಮನೆ ತಲುಪಿತು. 2007ರಲ್ಲಿ ಅವರ ನಿಧನ ನಂತರ ಅವರು ಕಟ್ಟಿ ಬೆಳೆಸಿದ ಕಲಾ ಸಂಸ್ಥೆ ಎನ್ ಸಿಪಿಎ ಅಧೀನಕ್ಕೆ ಈ ಬಂಗಲೆ ಒಳಪಟ್ಟಿದೆ.

English summary
'Save Homi Bhabha’s house' campaign fails as many appeals and a petition, the auction of Dr Homi Jehangir Bhabha's sprawling bungalow at Malabar Hill began on Wednesday. Bharat Ratna CNR Rao also Write to PM Modi to Save the bungalow. But didn't get response.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X