Get Updates
Get notified of breaking news, exclusive insights, and must-see stories!

ಬಾಲಿವುಡ್ ನಟ ಅನುಪಮ್ ಖೇರ್ ತಾಯಿ ಸೇರಿದಂತೆ ಕುಟುಂಬದ ಸದಸ್ಯರಿಗೆ ಕೋವಿಡ್-19 ಪಾಸಿಟಿವ್

ಮುಂಬೈ, ಜುಲೈ 11: ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಬ್ ಬಚ್ಚನ್ , ಮಗ ಅಭಿಷೇಕ್ ಬಚ್ಚನ್ ಕೋವಿಡ್-19 ಪಾಸಿಟಿವ್ ದೃಢವಾದ ಬಳಿಕ ಮತ್ತೊಬ್ಬ ಬಾಲಿವುಡ್‌ನ ಹಿರಿಯ ನಟ ಅನುಪಮ್ ಖೇರ್ ಅವರ ತಾಯಿ ದುಲಾರಿ ಸೇರಿದಂತೆ ಕುಟುಂಬದ ಇತರ ಸದಸ್ಯರಿಗೆ ಕೊರೊನಾವೈರಸ್ ಪಾಸಿಟಿವ್ ಆಗಿದೆ.

ಅನುಪಮ್ ಖೇರ್ ಈ ಕುರಿತು ಟ್ವಿಟರ್‌ನಲ್ಲಿ ವೀಡಿಯೋ ಮೂಲಕ ಬಹಿರಂಗಪಡಿಸಿದ್ದು, ನಟನ ತಾಯಿಯನ್ನು ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಖೇರ್ ಅವರ ಸಹೋದರ, ರಾಜು ಖೇರ್, ಅವರ ಅತ್ತಿಗೆ ಮತ್ತು ಸೋದರ ಸೊಸೆ ಸಹ ಕೊರೊನಾವೈರಸ್ ಸೋಂಕಿಗೆ ತುತ್ತಾಗಿದ್ದಾರೆ. ಆದಾಗ್ಯೂ, ಅನುಪಮ್ ಖೇರ್ ಪರೀಕ್ಷೆಯು ನೆಗೆಟಿವ್ ಎಂದು ತಿಳಿದುಬಂದಿದೆ.

Anupam Khers Mother Tests Positive For Covid-19

ಸೋಶಿಯಲ್ ಮೀಡಿಯಾದಲ್ಲಿ ಇದನ್ನು ಹಂಚಿಕೊಂಡ ಖೇರ್, "ಇದು ನನ್ನ ತಾಯಿ ದುಲಾರಿ ಕೋವಿಡ್ ಪಾಸಿಟಿವ್ ದೊರೆತಿದೆ ಎಂದು ತಿಳಿಸುತ್ತಿದ್ದೇನೆ. ನಾವು ಅವಳನ್ನು ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಿಸಿದ್ದೇವೆ. ನನ್ನ ಸಹೋದರ, ಅತ್ತಿಗೆ ಮತ್ತು ಸೋದರ ಸೊಸೆ ಎಚ್ಚರಿಕೆಯಿಂದ ಕೂಡ ಸ್ವಲ್ಪ ಪರೀಕ್ಷಿಸಿದ್ದಾರೆ ಅವರದ್ದು ಪಾಸಿಟಿವ್ ಆಗಿದೆ. ನಾನು ನನ್ನನ್ನೂ ಪರೀಕ್ಷಿಸಿಕೊಂಡಿದ್ದೇನೆ ಮತ್ತು ನಾನು ನೆಗೆಟಿವ್ ಆಗಿದ್ದೇನೆ. ಇದನ್ನು ಮುಂಬೈ ಮಹಾನಗರ ಪಾಲಿಕೆಗೆ ತಿಳಿಸಲಾಗಿದೆ'' ಎಂದಿದ್ದಾರೆ.

ಏತನ್ಮಧ್ಯೆ, ಶನಿವಾರ, ಅಮಿತಾಬ್ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಅವರು ಕೊರೊನಾವೈರಸ್ ಪಾಸಿಟಿವ್ ಆಗಿರುವ ಕುರಿತು ಮಾಹಿತಿ ಬಹಿರಂಗಪಡಿಸಿದರು. ತಂದೆ ಮತ್ತು ಮಗ ಇಬ್ಬರನ್ನು ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+