'ಲೋಕ ಚುನಾವಣೆಗೂ ಮುನ್ನ ಮತ್ತೊಮ್ಮೆ 'ಪುಲ್ವಾಮಾ ಮಾದರಿ' ಉಗ್ರ ದಾಳಿ'
ಮುಂಬೈ, ಮಾರ್ಚ್ 10: ಲೋಕಸಭೆ ಚುನಾವಣೆಗೆ ಹತ್ತಿರ ಇರುವಾಗಲೇ ಇನ್ನೇನು ತಿಂಗಳುಗಳಲ್ಲಿ ಪುಲ್ವಾಮಾ ರೀತಿಯಲ್ಲಿ ಉಗ್ರಗಾಮಿಗಳ ದಾಳಿ ನಡೆಯಬಹುದು ಎಂದು ಮಹಾರಾಷ್ಟ್ರ ನವ್ ನಿರ್ಮಾಣ್ ಸೇನಾ ಅಧ್ಯಕ್ಷ ರಾಜ್ ಠಾಕರೆ ಶನಿವಾರ ಅಭಿಪ್ರಾಯ ಪಟ್ಟಿದ್ದಾರೆ.
ನನ್ನ ಮಾತು ಗುರುತು ಮಾಡಿಟ್ಟುಕೊಳ್ಳಿ- ಇನ್ನು ಎರಡು ತಿಂಗಳಲ್ಲಿ ಪುಲ್ವಾಮಾ ರೀತಿಯ ಮತ್ತೊಂದು ದಾಳಿ ಸಂಘಟಿಸಲಾಗುತ್ತದೆ. ಲೋಕಸಭಾ ಚುನಾವಣೆಗೂ ಮುನ್ನ ಸಮಸ್ಯೆಗಳಿಂದ ದೇಶ ಭಕ್ತಿ ಕಡೆ ಜನರ ಗಮನವನ್ನು ಸೆಳೆಯುವ ಕಾರಣಕ್ಕೆ ಹೀಗೆ ಮಾಡಲಾಗುತ್ತದೆ ಎಂದು ಮಹಾರಾಷ್ಟ್ರ ನವ್ ನಿರ್ಮಾಣ್ ಸೇನಾದ ಹದಿಮೂರನೇ ವಾರ್ಷಿಕೋತ್ಸವದಲ್ಲಿ ಮಾತನಾಡುತ್ತಾ ಈ ಅಭಿಪ್ರಾಯ ಪಟ್ಟರು.
ರಾಮ ಮಂದಿರ ವಿಚಾರವೂ ಸೇರಿದಂತೆ ಎಲ್ಲ ನೀತಿಗಳಲ್ಲೂ ಭಾರತೀಯ ಜನತಾ ಪಕ್ಷ ಹಾಗೂ ಪ್ರಧಾನಿ ನರೇಂದ್ರ ಮೋದಿ "ಹೀನಾಯವಾಗಿ ವಿಫಲವಾಗಿರುವುದು" ನಿಜ ಎಂದು ರಾಜ್ ಠಾಕ್ರೆ ಅಭಿಪ್ರಾಯ ಪಟ್ಟಿದ್ದಾರೆ.

ಫೆಬ್ರವರಿ ಹದಿನಾಲ್ಕರಂದು ಪುಲ್ವಾಮಾದಲ್ಲಿ ನಡೆದ ಉಗ್ರಗಾಮಿ ದಾಳಿ ನಂತರ ಭಾರತೀಯ ವಾಯು ಸೇನೆ ಪಾಕಿಸ್ತಾನದ ಬಾಲಕೋಟ್ ನಲ್ಲಿ ಉಗ್ರ ನೆಲೆ ಮೇಲೆ ದಾಳಿ ನಡೆಸಿತ್ತು. ಈ ದಾಳಿಯನ್ನು ಬಿಜೆಪಿ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂಬ ಆರೋಪ ಕೇಳಿಬಂದಿದೆ.












Click it and Unblock the Notifications