Bullet Train : 2027ರಲ್ಲಿ ಓಡಲಿದೆ ದೇಶದ ಮೊದಲ ಹೈಸ್ಪೀಡ್ ಬುಲೆಟ್ ರೈಲು

ಮುಂಬೈ, ಏಪ್ರಿಲ್ 12; ಮುಂಬೈ-ಅಹಮದಾಬಾದ್ ಬುಲೆಟ್ ರೈಲು 2027ರಲ್ಲಿ ಸಂಚಾರ ನಡೆಸಲಿದೆ. ಭಾರತ ಮತ್ತು ಜಪಾನ್ ಸಹಯೋಗದಲ್ಲಿ ಜಾರಿಗೊಳಿಸುತ್ತಿರುವ ದೇಶದ ಮೊದಲ ಬುಲೆಟ್ ರೈಲು ಯೋಜನೆ ಇದಾಗಿದೆ.

ರಾಷ್ಟ್ರೀಯ ಹೈಸ್ಪೀಡ್‌ ರೈಲು ಪ್ರಾಧಿಕಾರ ಮಂಗಳವಾರ ಈ ಕುರಿತು ಮಾಹಿತಿ ನೀಡಿದೆ. ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆಯ ಗುಜರಾತ್ ಭಾಗದ ಪ್ರಾಯೋಗಿಕ ಸಂಚಾರ 2026ರಲ್ಲಿ ಆರಂಭವಾಗಲಿದೆ ಎಂದು ಹೇಳಿದೆ.

ಎನ್‌ಎಚ್‌ಎಸ್‌ಆರ್‌ಸಿಎಲ್ ಎಂಡಿ ಎಸ್. ಸಿ. ಅಗ್ನಿಹೋತ್ರಿ ದೇಶದ ಮೊದಲ ಬುಲೆಟ್ ರೈಲು ಯೋಜನೆಯ ಸ್ಥಿತಿಗತಿ ಕುರಿತು ಮಾಹಿತಿ ನೀಡಿದ್ದಾರೆ. ಯೋಜನೆಯ ವೆಚ್ಚ ಹೆಚ್ಚಾಗಿದೆ, ಯೋಜನೆ ನಿಗದಿತ ಗಡುವಿನಲ್ಲಿ ಪೂರ್ಣಗೊಂಡಿಲ್ಲ ಎಂದು ಹೇಳಿದ್ದಾರೆ.

Ahmedabad Mumbai High Speed Train Corridor To Open In 2027

ಭೂ ಸ್ವಾಧೀನ ವಿಳಂಬ, ಕೋವಿಡ್ ಪರಿಸ್ಥಿತಿ ಸೇರಿದಂತೆ ವಿವಿಧ ವಿಚಾರಗಳಿಂದಾಗಿ ಯೋಜನೆ ವಿಳಂಬವಾಗಿದೆ. ಈ ಕುರಿತು ಜಪಾನ್ ಜೊತೆ ಸಹ ಮಾತುಕತೆ ನಡೆಸಲಾಗಿದೆ ಎಂದು ಎಸ್. ಸಿ. ಅಗ್ನಿಹೋತ್ರಿ ತಿಳಿಸಿದ್ದಾರೆ.

ಗುಜರಾತ್ ಮತ್ತು ದಾದ್ರಾ & ನಗರ್ ಹಾವೇಲಿಯಲ್ಲಿ ಶೇ 100ರಷ್ಟು ಸಿವಿಲ್ ಕಾಮಗಾರಿಗಳ ಗುತ್ತಿಗೆಯನ್ನು ಭಾರತೀಯ ಗುತ್ತಿಗೆದಾರರಿಗೆ ನೀಡಲಾಗಿದೆ. ಇಲ್ಲಿ ಒಟ್ಟು 352 ಕಿ. ಮೀ. ಮಾರ್ಗವಿದೆ ಎಂದು ವಿವರಣೆ ನೀಡಿದ್ದಾರೆ.

ಯೋಜನೆ ವ್ಯಾಪ್ತಿಯಲ್ಲಿ ಗುಜರಾತ್ ರಾಜ್ಯದಲ್ಲಿ 8 ನಿಲ್ದಾಣಗಳು ಬರುತ್ತವೆ. ವಾಪಿ, ಸೂರತ್, ವಡೋದರಾ, ಅಹಮದಾಬಾದ್, ಸಬರಮತಿ ಸೇರಿದಂತೆ ಕೆಲವು ನಿಲ್ದಾಣಗಳು ಬರುತ್ತವೆ.

ಹೈಸ್ಪೀಡ್ ರೈಲು ಯೋಜನೆ ವ್ಯಾಪ್ತಿಯಲ್ಲಿ ಸೂರತ್ ಅತಿ ದೊಡ್ಡ ನಿಲ್ದಾಣವಾಗಲಿದೆ. ಈ ನಿಲ್ದಾಣವನ್ನು 48,234 ಚದರ ಮೀಟರ್ ವ್ಯಾಪ್ತಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಎಸ್. ಸಿ. ಅಗ್ನಿಹೋತ್ರಿ ವಿವರಣೆ ಕೊಟ್ಟರು.

ಸೂರತ್ ವಜ್ರದ ಉದ್ಯಮಕ್ಕೆ ಪ್ರಸಿದ್ಧಿಯಾಗಿದೆ. ವಜ್ರಕ್ಕೆ ಸಂಬಂಧಿಸಿದ ಮಾಹಿತಿಗಳು ಇರುವಂತೆ ನಿಲ್ದಾಣವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. 2023ರ ಅಂತ್ಯದಲ್ಲಿ ನಿಲ್ದಾಣ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲಾಗುತ್ತದೆ.

ಈ ಯೋಜನೆ 1.20 ಲಕ್ಷ ನೇರ ಮತ್ತು ಪರೋಕ್ಷ ಉದ್ಯೋಗವನ್ನು ಸೃಷ್ಟಿ ಮಾಡಿದೆ. 20 ಸಾವಿರ ಜನರಿಗೆ ಯೋಜನೆ ನೇರವಾಗಿ ಉದ್ಯೋಗ ಒದಗಿಸಿದೆ. ವಿವಿಧ ರಾಜ್ಯಗಳಲ್ಲಿ 1 ಲಕ್ಷ ಜನರಿಗೆ ಪರೋಕ್ಷ ಉದ್ಯೋಗವನ್ನು ನೀಡಿದೆ.

ಸಚಿವರು ಮಾಹಿತಿ ನೀಡಿದ್ದರು; 4 ದಿನದ ಹಿಂದೆ ಲೋಕಸಭೆಯಲ್ಲಿ ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನ್ ವೈಷ್ಣವ್ ಹೈಸ್ಪೀಡ್ ರೈಲು ಯೋಜನೆ ಕುರಿತು ಮಾಹಿತಿ ನೀಡಿದ್ದರು. 2015ರಂತೆ ಯೋಜನೆಯ ವೆಚ್ಚ 1,08,000 ಕೋಟಿಯಾಗಿದೆ. ಮಹಾರಾಷ್ಟ್ರ ರಾಜ್ಯದಲ್ಲಿನ ಭೂ ಸ್ವಾಧೀನ ವಿಳಂಬವಾಗುತ್ತಿದೆ ಎಂದು ಹೇಳಿದ್ದರು.

ಕೇಂದ್ರ ಸರ್ಕಾರ ಈಗಾಗಲೇ ಈ ಯೋಜನೆಗೆ ಅಗತ್ಯವಿರುವ ಅರಣ್ಯ, ವನ್ಯಜೀವಿ ಸೇರಿದಂತೆ ವಿವಿಧ ಇಲಾಖೆಗಳ ಒಪ್ಪಿಗೆ ನೀಡಿದೆ. 2015ರಲ್ಲಿ ಕೇಂದ್ರ ಸರ್ಕಾರ ಭಾರತದ ಮೊದಲ ಹೈಸ್ಪೀಡ್ ರೈಲು ಯೋಜನೆ ಘೋಷಣೆ ಮಾಡಿತ್ತು. ಈ ಯೋಜನೆಗೆ ಜಪಾನ್ ಆರ್ಥಿಕ, ತಾಂತ್ರಿಕ ನೆರವನ್ನು ನೀಡುತ್ತಿದೆ.

ಭೂ ಸ್ವಾಧೀನ ವಿಳಂಬದ ಕಾರಣಕ್ಕಾಗಿಯೇ ಈ ಹಿಂದೆ ಸಿವಿಲ್ ಕಾಮಗಾರಿಗಳಿಗೆ ನೀಡಿದ್ದ ಟೆಂಡರ್ ರದ್ದುಗೊಳಿಸಲಾಗಿತ್ತು. ಯೋಜನೆಗೆ ಮಹಾರಾಷ್ಟ್ರದಲ್ಲಿ ಅಗ್ಯವಿರುವ 297.81 ಹೆಕ್ಟೇರ್ ಎಕರೆ ಭೂಮಿಯಲ್ಲಿ ಶೇ 68.65ರಷ್ಟು ಭೂಮಿ ಸ್ವಾಧೀನ ಮಾಡಿಕೊಳ್ಳಲಾಗಿದೆ.

ಈ ಯೋಜನೆ ಪೂರ್ಣಗೊಂಡರೆ 320 ಕಿ. ಮೀ. ವೇಗದಲ್ಲಿ ರೈಲು ಸಂಚಾರ ನಡೆಸಲಿದೆ. ಯೋಜನೆ ಪೂರ್ಣಗೊಂಡರೆ 508 ಕಿ. ಮೀ. ಸಂಚಾರ ನಡೆಸಲು 2 ಗಂಟೆಗಳ ಕಾಲಾವಕಾಶ ಬೇಕಾಗಿದೆ ಎಂದು ಅಂದಾಜಿಸಲಾಗಿದೆ. ಈಗ ಘೋಷಣೆ ಮಾಡಿರುವ ಯೋಜನೆ ಪೂರ್ಣಗೊಳ್ಳುವ ಮೊದಲೇ ಬೇರೆ-ಬೇರೆ ಮಾರ್ಗಗಳ ಬುಲೆಟ್ ರೈಲು ಯೋಜನೆ ಸಮೀಕ್ಷೆ ನಡೆಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+