ಮುಂಬೈ: ಎಲಿಫೆಂಟಾ ಗುಹೆಗಳಿಗೆ ಕೊನೆಗೂ ಬಂತು ವಿದ್ಯುತ್ ಸಂಪರ್ಕ!

ಮುಂಬೈ, ಫೆಬ್ರವರಿ 23: ಭಾರತೀಯ ವಾಸ್ತುಶಿಲ್ಪ ಸಿರಿವಂತಿಕೆಯ ಪ್ರತೀಕ ಎನ್ನಿಸಿರುವ ಎಲಿಫೆಂಟಾ ಗುಹೆಗಳಿಗೆ ಕೊನೆಗೂ ವಿದ್ಯುತ್ ಸಂಪರ್ಕ ದೊರೆತಿದೆ! ಸ್ವಾತಂತ್ರ್ಯ ಸಿಕ್ಕು 70 ವರ್ಷ ಕಳೆದಿದ್ದರೂ ಯುನೆಸ್ಕೋ ಪಾರಂಪರಿಕ ತಾಣವಾದ ಎಲಿಫೆಂಟಾಕ್ಕೆ ವಿದ್ಯುತ್ ಸಂಪರ್ಕ ದೊರೆತಿರಲಿಲ್ಲ.

7.5 ಕಿ.ಮೀ.ದೂರ ಅರಬ್ಬಿ ಸಮುದ್ರ ನೀರಿನ ಆಳದಿಂದಲೇ ವಿದ್ಯುತ್ ತಂತಿಯನ್ನು ಹಾಯಿಸಿ, ಇಲ್ಲಿಗೆ ವಿದ್ಯುತ್ ಸಂಪರ್ಕ ನೀಡಿರುವುದು ಮತ್ತಷ್ಟು ಸೋಜಿಗದ ವಿಷಯ.

ಮಹಾರಾಷ್ಟ್ರದ ಮುಂಬೈ ಬಳಿಯಿರುವ ಎಲಿಫೆಂಟಾ ಗುಹೆಯಲ್ಲಿ ಶಿವನನ್ನು ಆರಾಧಿಸಲಾಗುತ್ತದೆ. ಈ ಗುಹೆ ಪುಟ್ಟ ದ್ವೀಪದಲ್ಲಿದ್ದು, ಇದನ್ನು ಕ್ರಿ.ಶ.5 ರಿಂದ 8 ನೇ ಶತಮಾನದದಲ್ಲಿ ನಿರ್ಮಿಸಲಾಗಿದೆ ಎನ್ನಲಾಗುತ್ತದೆ.

After 70 years of Independence electricity reaches Elephanta Caves

ಕೆಲವೆಡೆ ಗುಪ್ತರು ಈ ಎಲಿಫೆಂಟಾ ಗುಹೆ ಕಟ್ಟಿದರು ಎಂದು ಉಲ್ಲೇಖವಾಗಿದ್ದರೆ, ಕೆಲವು ಇತಿಹಾಸ ದಾಖಲೆಗಳು ಗುಹೆ ನಿರ್ಮಾಣದ ಕೀರ್ತಿಯನ್ನು ರಾಷ್ಟ್ರಕೂಟ ವಂಶಕ್ಕೆ ನೀಡಿವೆ. ಶತ ಶತಮಾನಗಳ ಇತಿಹಾಸವಿರುವ ಈ ಗುಹೆಗೆ ಆಧುನಿಕ ಸಮಾಜ ಇಷ್ಟೆಲ್ಲ ಬೆಳೆದ ಮೇಲೂ ವಿದ್ಯುತ್ ಸಂಪರ್ಕ ದೊರೆತಿರಲಿಲ್ಲ ಎಂಬುದು ಅಚ್ಚರಿಯ ಸಂಗತಿ.

ಎಲಿಫೆಂಟಾ ಗುಹೆಗಳು ಭಾರತದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಅತ್ಯಂತ ಮಹತ್ವದ ಸ್ಥಾನ ಪಡೆದಿದ್ದು, ಈಗ ವಿದ್ಯುತ್ ಸಂಪರ್ಕ ದೊರಕಿರುವುದರಿಂದ ಪ್ರವಾಸೋದ್ಯಮ ಕ್ಷೇತ್ರ ಮತ್ತಷ್ಟು ಅಭಿವೃದ್ಧಿ ಹೊಂದುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+