• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಟ ಸುಶಾಂತ್ ಸಿಂಗ್ ಸಾವಿನ ಕೇಸಿಗೆ ತಿರುವು ನೀಡಿದ ವರದಿ!

|
Google Oneindia Kannada News

ಮುಂಬೈ, ಜುಲೈ 01: ಹಿಂದಿ ಚಿತ್ರರಂಗದ ಜನಪ್ರಿಯ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಮುಂಬೈ ಪೊಲೀಸರು ಮುಂದುವರೆಸಿದ್ದಾರೆ. ಮಂಗಳವಾರ ಸಂಜೆ ವೇಳೆಗೆ ಜೆಜೆ ಆಸ್ಪತ್ರೆ ನೀಡಿರುವ ವರದಿ ಈ ಪ್ರಕರಣದ ತನಿಖೆಗೆ ಬೇರೆಯದ್ದೇ ತಿರುವು ನೀಡುವ ಸಾಧ್ಯತೆಯಿದೆ.

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವು ಆತ್ಮಹತ್ಯೆಯೇ ಅಥವಾ ಕೊಲೆಯೇ ಎಂಬ ಚರ್ಚೆ ಎಲ್ಲೆಡೆ ನಡೆಯುತ್ತಿದೆ. ಸುಶಾಂತ್ ಸಾವು ಕುರಿತು ಬಾಲಿವುಡ್ ಇಬ್ಭಾಗವಾಗಿದೆ. ಅನೇಕ ಸ್ಟಾರ್ ನಟ ನಟಿಯರನ್ನು ಗುಮಾನಿಯಿಂದ ನೋಡುವಂತಾಗಿದೆ. ಜೊತೆಗೆ ಸುಶಾಂತ್ ಕುಟುಂಬಸ್ಥರು ಸಿಬಿಐಗೆ ತನಿಖೆ ವಹಿಸುವಂತೆ ಆಗ್ರಹಿಸಿದ್ದಾರೆ.

ಚಂದ್ರನಲ್ಲಿ ಫ್ಲಾಟ್ ಖರೀದಿಸಿದ್ದ ಸುಶಾಂತ್, ಸಾವಿಗೆ ಆರ್ಥಿಕ ಬಿಕ್ಕಟ್ಟು ಕಾರಣವೆ?ಚಂದ್ರನಲ್ಲಿ ಫ್ಲಾಟ್ ಖರೀದಿಸಿದ್ದ ಸುಶಾಂತ್, ಸಾವಿಗೆ ಆರ್ಥಿಕ ಬಿಕ್ಕಟ್ಟು ಕಾರಣವೆ?

ಸುಶಾಂತ್ ಸಿಂಗ್ ನಿಧನದ ಮರುದಿನ ಪೊಲೀಸರ ಕೈ ಸೇರಿದ್ದ ಮರಣೋತ್ತರ ಪರೀಕ್ಷೆಯ ವರದಿಯ ಪ್ರಕಾರ ಸುಶಾಂತ್ ಅವರು ಉಸಿರುಗಟ್ಟಿ ಸತ್ತಿದ್ದಾರೆ. ಇಲ್ಲಿ ಬೇರೆ ಯಾವುದೇ ರೀತಿಯ ಕೃತ್ಯಗಳು ಕಾಣಿಸುವುದಿಲ್ಲ. ಡಾ. ಆರ್ ಎನ್ ಕೂಪರ್ ಮುನಿಸಿಪಲ್ ಜನರಲ್ ಆಸ್ಪತ್ರೆಯ ವೈದ್ಯರು ಪರೀಕ್ಷೆ ನಡೆಸಿ, ನೀಡಿದ ವರದಿಯಲ್ಲಿ ನೇಣು ಬಿಗಿದಿದ್ದರಿಂದ 'ಆಸ್ಫಿಕ್ಸಿಯೇಷನ್' (ಉಸಿರುಗಟ್ಟುವಿಕೆ) ಮೂಲಕ ಆದ ಸಾವು ಎಂದು ತಿಳಿಸಿತ್ತು.
ಹೀಗಾಗಿ ಇದು ಆತ್ಮಹತ್ಯೆಯೇ ಎಂದು ವರದಿಯಲ್ಲಿ ಹೇಳಲಾಗಿತ್ತು. ಇದಕ್ಕೆ ಪೂರಕವಾಗಿ ಮುಂಬೈನ ಜೆ. ಜೆ ಆಸ್ಪತ್ರೆ ನೀಡಿರುವ ವಿಸೇರಾ ವರದಿ ಈಗ ಪೊಲೀಸರ ಕೈ ಸೇರಿದೆ.

ಸುಶಾಂತ್ ವಿಸೇರಾ ವರದಿ

ಸುಶಾಂತ್ ವಿಸೇರಾ ವರದಿ

ವಿಸೇರಾ ವರದಿ ಪ್ರಕಾರ, ಸುಶಾಂತ್ ಸಿಂಗ್ ದೇಹದಲ್ಲಿ ಯಾವುದೇ ರಾಸಾಯನಿಕ, ವಿಷ ಇರಲಿಲ್ಲ. ಮರಣೋತ್ತರ ಪರೀಕ್ಷೆಗೆ ಬಂದಾಗ ಶವದ ಮೇಲೆ ಹಗ್ಗದ ಬಿಗಿದ ಗುರುತುಗಳು ಬಿಟ್ಟರೆ, ಬೇರೆ ಗಾಯ, ದೇಹದ ಬಣ್ಣ ಬದಲಾವಣೆ, ಉಗುರುಗಳ ಬಣ್ಣ ಬದಲಾವಣೆ ಯಾವುದರಲ್ಲೂ ವ್ಯತ್ಯಾಸ ಕಂಡು ಬಂದಿರಲಿಲ್ಲ. ಒಟ್ಟಾರೆ, ಸುಶಾಂತ್ ಸ್ವ ಇಚ್ಛೆಯಿಂದ ನೇಣು ಬಿಗಿದುಕೊಂಡಿರಬಹುದು. ದೇಹದಲ್ಲಿ ಕೆಮಿಕಲ್ ಅಂಶದಲ್ಲಿ ಯಾವುದೇ ರೀತಿ ಬಲವಂತವಾಗಿ ವಿಷಪೂರಿತ ಆಹಾರ ಸೇರಿದ ಲಕ್ಷಣವಿಲ್ಲ ಎಂದು ಜೆಜೆ ಆಸ್ಪತ್ರೆ ವೈದ್ಯರು ವರದಿ ನೀಡಿದ್ದಾರೆ.

ಮರಣೋತ್ತರ ಪರೀಕ್ಷೆಯಲ್ಲಿ ಏನಿದೆ?

ಮರಣೋತ್ತರ ಪರೀಕ್ಷೆಯಲ್ಲಿ ಏನಿದೆ?

ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ಕಗ್ಗಂಟಾಗಿರುವ ಸಂದರ್ಭದಲ್ಲಿ ಮರಣೋತ್ತರ ಪರೀಕ್ಷೆ ವರದಿ ಮಹತ್ವ ಪಡೆದುಕೊಂಡಿತ್ತು. ಅಂತಿಮ ಮರಣೋತ್ತರ ಪರೀಕ್ಷೆಯ ವರದಿಯನ್ನು ಮುಂಬೈ ಪೊಲೀಸರಿಗೆ ಸಲ್ಲಿಸಿ ವೈದ್ಯರು, ಇದು 'ನೇಣು ಹಾಕಿಕೊಂಡ ಕಾರಣದಿಂದ ಉಸಿರುಗಟ್ಟಿ ಸಂಭವಿಸಿದ ಸಾವು' ಎಂದೇ ಹೇಳಿದ್ದಾರೆ.

ಸುಶಾಂತ್ ಸಿಂಗ್ ರಜಪೂತ್ ಅವರ ದೇಹದಲ್ಲಿ ಯಾವುದೇ ಒದ್ದಾಟದ ಕುರುಹು ಅಥವಾ ಹೊರ ಭಾಗದ ಗಾಯಗಳಿಲ್ಲ. ಅವರ ಉಗುರುಗಳು ಸಹ ಸ್ವಚ್ಛವಾಗಿವೆ. ಇದು ಸ್ಪಷ್ಟವಾಗಿ ಆತ್ಮಹತ್ಯೆಯ ಪ್ರಕರಣ. ಇದರಲ್ಲಿ ಯಾವುದೇ ಬೇರೆ ಕೈವಾಡಗಳು ಇಲ್ಲ ಎಂದು ಐವರು ತಜ್ಞ ವೈದ್ಯರು ತಮ್ಮ ವರದಿಯಲ್ಲಿ ಹೇಳಿದ್ದಾರೆ.

ಸುಶಾಂತ್ ಸಿಂಗ್ ಸಾವಿನ ಕೇಸ್ ತನಿಖೆ ಎತ್ತ ಸಾಗಿದೆ?

ಸುಶಾಂತ್ ಸಿಂಗ್ ಸಾವಿನ ಕೇಸ್ ತನಿಖೆ ಎತ್ತ ಸಾಗಿದೆ?

ಸುಶಾಂತ್ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ತಂದೆ ಮತ್ತು ಮೂವರು ಸಹೋದರಿಯರು, ಸುಶಾಂತ್ ಅವರ ಲೆಕ್ಕ ಪರಿಶೋಧಕ ಸಂಜಯ್ ಶ್ರೀಧರ್, ಸುಶಾಂತ್ ಸ್ನೇಹಿತರಾದ ಸಿದ್ಧಾರ್ಥ್ ಪಿಠಾಣಿ, ರಿಯಾ ಚಕ್ರಬೊರ್ತಿ, ರೋಹಿಣಿ ಅಯ್ಯರ್, ಸುಶಾಂತ್ ಸಿಂಗ್ ಬಿಜಿನೆಸ್ ಮ್ಯಾನೇಜರ್ ಉದಯ್ ಸಿಂಗ್ ಗೌರಿ, ಅವರ ಮನೆಯ ಕೆಲಸದವರು ಸರಿದಂತೆ ಸುಮಾರು 28 ಮಂದಿಯಿಂದ ಹೇಳಿಕೆ ಪಡೆದುಕೊಂಡಿದ್ದಾರೆ.

ಜೂನ್ 14ರಂದು 34 ವರ್ಷ ವಯಸ್ಸಿನ ಬಿಹಾರ ಮೂಲದ ನಟ ಸುಶಾಂತ್ ಸಿಂಗ್ ಅವರ ದೇಹವು ಬಾಂದ್ರಾದ ಅವರ ನಿವಾಸದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ತನಿಖೆಯನ್ನು ಸಿಬಿಐಗೆ ಒಪ್ಪಿಸಲು ಆಗ್ರಹ

ತನಿಖೆಯನ್ನು ಸಿಬಿಐಗೆ ಒಪ್ಪಿಸಲು ಆಗ್ರಹ

ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿಲ್ಲ, ಪೂರ್ವನಿಯೋಜಿತ ಸಂಚು. ಇದರ ಸುತ್ತಲೂ ಅನೇಕರು ಭಾಗಿಯಾಗಿರುವ ಅನುಮಾನವಿದೆ. ನಮಗೆ ನ್ಯಾಯ ಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಚಳವಳಿ ಶುರುವಾಗಿದೆ. ಕುಟುಂಬಸ್ಥರು ಕೂಡಾ ಸಿಬಿಐ ತನಿಖೆಗೆ ಆಗ್ರಹಿಸಿದ್ದಾರೆ.ಸುಶಾಂತ್ ಸಾವಿನ ಪ್ರಕರಣದಲ್ಲಿ ಹೋರಾಟ ನಡೆಸಲು ಜಸ್ಟೀಸ್ ಫಾರ್ ಸುಶಾಂತ್ ಫೋರಂ ಕೂಡ ಸೃಷ್ಟಿಯಾಗಿದೆ.

ನಿರ್ದೇಶಕ ಮಹೇಶ್ ಭಟ್ ಮತ್ತು ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ ಮೇಲೆ ಅನೇಕರು ಅನುಮಾನ ವ್ಯಕ್ತಪಡಿಸಿದ್ದರು. ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಲಾಗುತ್ತಿದೆ. ಸದ್ಯ ಸುಶಾಂತ್ ಸ್ನೇಹಿತ ಎಂದು ಹೇಳಿಕೊಂಡಿರುವ ನಿರ್ಮಾಪಕ ಸಂದೀಪ್ ಸಿಂಗ್ ವಿರುದ್ಧ ಅನುಮಾನ ತಿರುಗಿದೆ.

ವಿಸೇರಾ ವರದಿ ಮಹತ್ವವೇನು? ಸಿಬಿಐ ತನಿಖೆ ಸಾಧ್ಯವೆ?

ವಿಸೇರಾ ವರದಿ ಮಹತ್ವವೇನು? ಸಿಬಿಐ ತನಿಖೆ ಸಾಧ್ಯವೆ?

ಸುಶಾಂತ್ ಸಿಂಗ್ ಪ್ರಕರಣದ ಮರಣೋತ್ತರ ಪರೀಕ್ಷೆ, ವಿಸೇರಾದಲ್ಲಿ ಯಾವುದೇ ವಿಷವಿಲ್ಲ ಎಂಬ ವರದಿ ಮಹತ್ವವಾಗಿದ್ದು, ಸದ್ಯಕ್ಕೆ ಸುಶಾಂತ್ ಆತ್ಮಹತ್ಯೆಯಲ್ಲಿ ಯಾರೊಬ್ಬರ ಕೈವಾಡವಿಲ್ಲ ಎಂದು ತೋರುತ್ತದೆ. ಆದರೆ, ಸುಶಾಂತ್ ಗೆ ಮಾನಸಿಕವಾಗಿ ಹಿಂಸೆ ನೀಡಿದ್ದು, ಆತ್ಮಹತ್ಯೆಗೆ ಪ್ರಚೋದನೆ ಆರೋಪದ ಮೇಲೆ ಯಾರನ್ನಾದರೂ ಬಂಧಿಸಿ ವಿಚಾರಣೆಗೊಳಪಡಿಸಲು ಬಲವಾದ ಸಾಕ್ಷಿ ಬೇಕಾಗುತ್ತದೆ. ಸದ್ಯಕ್ಕೆ ಈ ಪ್ರಕರಣದಲ್ಲಿ ಅಂಥ ಸಾಕ್ಷಿ ಸಿಕ್ಕಿಲ್ಲ. ಬಾಲಿವುಡ್ ಖ್ಯಾತನಾಮರನ್ನು ಪ್ರಶ್ನಿಸಿ, ವರದಿ ಪಡೆದ ಬಳಿಕ ಪೊಲೀಸರು ಅಂತಿಮ ವರದಿ ನೀಡಲಿದ್ದಾರೆ. ಇದಾದ ಬಳಿಕ ರಾಜ್ಯ ಸರ್ಕಾರ ಕೇಂದ್ರಕ್ಕೆ ಸಿಬಿಐ ತನಿಖೆಗಾಗಿ ಮನವಿ ಮಾಡಬಹುದು. ಆದರೆ, ಪ್ರಕರಣ ಕೈಗೆತ್ತಿಕೊಳ್ಳುವುದು ಬಿಡುವುದು ಸಿಬಿಐ ಸಂಸ್ಥೆ ನಿರ್ಧಾರಕ್ಕೆ ಬಿಟ್ಟಿದ್ದು.

English summary
Sushant Singh Rajput's viscera report on Tuesday was found negative for any kind of suspicious chemicals or poison. Following the post-mortem, the viscera was sent for analysis to JJ Hospital in Mumbai. The reports came on Tuesday evening.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X