ಯೆರವಾಡ ಜೈಲಿನಿಂದ ಸಂಜಯ್ ದತ್ ಬಿಡುಗಡೆ

ಪುಣೆ, ಫೆಬ್ರವರಿ 25 : 1993ರ ಮುಂಬೈ ಸರಣಿ ಬಾಂಬ್ ಸ್ಫೋಟದ ಆರೋಪ ಸಾಬೀತಾಗಿ ಜೈಲು ಸೇರಿದ್ದ ಬಾಲಿವುಡ್ ನಟ ಸಂಜಯ್ ದತ್ ಅವರು ಗುರುವಾರ ಬಿಡುಗಡೆಗೊಂಡರು. ನೂರಾರು ಅಭಿಮಾನಿಗಳು, ಆಪ್ತರು ಸಂಜಯ್ ದತ್ ಅವರನ್ನು ಬರಮಾಡಿಕೊಂಡರು.

ಪುಣೆಯ ಯೆರವಾಡ ಜೈಲಿನಿಂದ ಗುರುವಾರ ಬೆಳಗ್ಗೆ 8.30ರ ಸುಮಾರಿಗೆ ಹೊರಬಂದ ಸಂಜಯ್ ದತ್ ಅವರನ್ನು ಪತ್ನಿ ಮಾನ್ಯತಾ ಬರಮಾಡಿಕೊಂಡರು. 1993ರ ಮಾರ್ಚ್ 12ರಂದು ಮುಂಬೈನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಅಪರಾಧಿಯಾಗಿದ್ದ 56 ವರ್ಷ ವಯಸ್ಸಿನ ಸಂಜಯ್ ದತ್ ಅವರು 42 ತಿಂಗಳು ಶಿಕ್ಷೆ ಅನುಭವಿಸಿದ್ದಾರೆ. [ಸಂಜಯ್ ದತ್ ಗೆ ಕ್ಷಮಾದಾನ ಏಕೆ ಸಿಗಲಿಲ್ಲ?]

sanjay dutt

ವಿಚಾರಣಾಧೀನ ಕೈದಿಯಾಗಿ ಸಂಜಯ್ ದತ್ ಅವರು 18 ತಿಂಗಳು ಕಾಲ ಜೈಲುವಾಸ ಅನುಭವಿಸಿದ್ದರು. ನಂತರ 2013ರಲ್ಲಿ ಸುಪ್ರೀಂಕೋಟ್ ಆದೇಶದಂತೆ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು. ನಂತರ ಪುಣೆಯ ಯೆರವಾಡ ಜೈಲಿನಲ್ಲಿ 42 ತಿಂಗಳುಗಳ ಕಾಲ ಶಿಕ್ಷೆ ಅನುಭವಿಸಿದ್ದಾರೆ. [ಸಂಜಯ್ ದತ್ ಕೈಗೆ ಬಾಂಬ್ ನೀಡಿರಲಿಲ್ಲ: ಅಬು ಸಲೇಂ]

ಜೈಲಿಗೆ ಸೆಲ್ಯೂಟ್ : ಜೈಲಿನಿಂದ ಹೊರಬಂದ ಸಂಜಯ್ ದತ್ ತಲೆಬಾಗಿ ಜೈಲಿಗೆ ನಮಸ್ಕರಿಸಿ ಸೆಲ್ಯೂಟ್ ಹೊಡೆದರು. ಯೆರವಾಡ ಜೈಲಿನಿಂದ ಪತ್ನಿ ಮಾನ್ಯತಾ ಜೊತೆ ಪುಣೆ ವಿಮಾನ ನಿಲ್ದಾಣಕ್ಕೆ ತೆರಳಿದ ಸಂಜಯ್ ದತ್, ಅಲ್ಲಿಂದ ಮುಂಬೈಗೆ ತೆರಳಿದ್ದಾರೆ. ಮುಂಬೈನಲ್ಲಿ ತಾಯಿ ಸಮಾಧಿ ಸ್ಥಳಕ್ಕೆ ಭೇಟಿ ನೀಡಲಿರುವ ದತ್, ನಂತರ ದೇವರ ದರ್ಶನ ಪಡೆಯಲಿದ್ದಾರೆ.

ಅವಧಿಗೆ ಮುನ್ನವೇ ಬಿಡುಗಡೆ : ಸಂಜಯ್ ದತ್‌ ಅವರ ಶಿಕ್ಷೆಯ ಅವಧಿ ಪೂರ್ಣಗೊಳ್ಳುವ ಮೊದಲೇ ಸನ್ನಡತೆ ಆಧಾರದ ಮೇಲೆ ಅವರನ್ನು ಬಿಡುಗಡೆ ಮಾಡಲಾಗಿದೆ. ಮಹಾರಾಷ್ಟ್ರ ಸರ್ಕಾರ ದತ್ ಬಿಡುಗಡೆಗೊಳಿಸುವ ನಿರ್ಧಾರವನ್ನು ಕೈಗೊಂಡಿರುವುದನ್ನು ವಿರೋಧಿಸಿ ಸಾಮಾಜಿಕ ಕಾರ್ಯಕರ್ತ ಪ್ರದೀಪ್‌ ಭಾಲೇಕರ್‌ ಎಂಬುವವರು ಬಾಂಬೆ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ಸಂಜಯ್ ದತ್ ಶಿಕ್ಷೆಯನ್ನು ಕಡಿಮೆ ಮಾಡಬಾರದು, ಅವರನ್ನು ವಶಕ್ಕೆ ಪಡೆದು 5ವರ್ಷಗಳ ಶಿಕ್ಷೆ ಅವಧಿ ಪೂರ್ಣಗೊಂಡ ನಂತರವೇ ಬಿಡುಗಡೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ. ಅರ್ಜಿಯ ವಿಚಾರಣೆ ಇಂದು ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+