ಜಿಯಾ ಖಾನ್ ಆತ್ಮಹತ್ಯೆ ಮಾಡಿಕೊಂಡಿಲ್ಲ : ಬ್ರಿಟಿಷ್ ತಜ್ಞ

Posted By:
Subscribe to Oneindia Kannada

ಮುಂಬೈ, ಸೆ. 21: ಬಾಲಿವುಡ್ ನಟಿ ಜಿಯಾ ಖಾನ್ ಅವರ ಸಾವು ಆತ್ಮಹತ್ಯೆಯಿಂದ ಸಂಭವಿಸಿದ್ದು, ಕೊಲೆಯಾಗಿಲ್ಲ ಎಂದು ಸಿಬಿಐ ಹೇಳಿದೆ. ಆದರೆ, ಜಿಯಾ ಖಾನ್ ತಾಯಿ ರಬಿಯಾ ಆವರು ತಮ್ಮ ಮಗಳ ಸಾವಿನ ಬಗ್ಗೆ ಬ್ರಿಟಿಷ್ ವಿಧಿ ವಿಜ್ಞಾನ ಇಲಾಖೆ ತಜ್ಞರೊಬ್ಬರ ಅಭಿಪ್ರಾಯ ಕೇಳಿದ್ದು, ಜಿಯಾ ಖಾನ್ ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂದು ವರದಿ ನೀಡಿದ್ದಾರೆ.

ಜಿಯಾ ಖಾನ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವಂತೆ ಬಿಂಬಿಸಲಾಗಿದೆ. ಆಕೆ ಮುಖ ಹಾಗೂ ಕುತ್ತಿಗೆ ಮೇಲೆ ಆಗಿರುವ ಗುರುತುಗಳನ್ನು ಗಮನಿಸಿದರೆ ಆಕೆ ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂದು ದೃಢಪಡಿಸಬಹುದು ಎಂದು ಬ್ರಿಟಿಷ್ ವಿಧಿ ವಿಜ್ಞಾನ ಇಲಾಖೆ ತಜ್ಞ ಜಾಸನ್ ಪೇಯ್ನ್ ಜೇಮ್ಸ್ ಅವರು ವರದಿ ನೀಡಿದ್ದಾರೆ. ಈ ಮೂಲಕ ಮೂರು ವರ್ಷಗಳಿಂದ ನಿಗೂಢವಾಗಿ ಉಳಿದಿರುವ ಜಿಯಾ ಸಾವಿನ ಪ್ರಕರಣಕ್ಕೆ ಮತ್ತೊಮ್ಮೆ ತಿರುವು ಸಿಕ್ಕಿದೆ.[ನಟಿ ಜಿಯಾ ಆತ್ಮಹತ್ಯೆಯಿಂದ ಸತ್ತದ್ದು, ಕೊಲೆಯಲ್ಲ : ಸಿಬಿಐ]

Actor Jiah Khan's hanging was staged : British forensic expert

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಬಿಯಾ ಅವರು ಸಿಬಿಐ ನೀಡಿರುವ ವರದಿಗೆ ಪ್ರತಿಕ್ರಿಯಿಸಲು ಕಾಲಾವಕಾಶವನ್ನು ಜಸ್ಟೀಸ್ ನರೇಶ್ ಪಾಟೀಲ್ ನೀಡಿದ್ದರು. ಎಸ್ ಐಟಿ ತನಿಖೆ ಹಾಗೂ ಎಫ್ ಬಿಐ ನೆರವು ಏಕೆ ಬೇಕೆ ಎಂಬುದಕ್ಕೆ ಬಲವಾದ ಸಾಕ್ಷಿಯನ್ನು ರಬಿಯಾ ಒದಗಿಸಬೇತ್ತು. ಈಗ ಬಲವಾದ ಸಾಕ್ಷಿ ಸಿಕ್ಕಿದೆ. ಈ ಫೊರೆನ್ಸಿಕ್ ವರದಿ ಮಹತ್ವದ ಪಾತ್ರವಹಿಸಲಿದ್ದು, ಆತ್ಮಹತ್ಯೆಯಲ್ಲ ಎಂಬುದನ್ನು ಸಾಬೀತುಪಡಿಸಬಹುದಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Actor Jiah Khan's hanging was staged and the marks on her face and neck indicate it's not a simple case of suicide, a British forensic expert has concluded in a report, adding a fresh twist to the three-year-old case.
Please Wait while comments are loading...