ನಟ ಇಂದರ್ ಕುಮಾರ್ ಹೃದಯಾಘಾತದಿಂದ ಸಾವು

Posted By:
Subscribe to Oneindia Kannada

ಮುಂಬೈ, ಜುಲೈ 28: ಬಣ್ಣದ ಲೋಕ ಬಾಲಿವುಡ್ ನಲ್ಲಿ ಖ್ಯಾತಿ- ಅಪಖ್ಯಾತಿ ಎರಡನ್ನು ಹೊಂದಿದ್ದ ನಟ ಇಂದರ್ ಕುಮಾರ್ ಅವರು ಗುರುವಾರ ತಡರಾತ್ರಿ 2 ಗಂಟೆ ವೇಳೆಗೆ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ.

ಬಾಲಿವುಡ್ ನ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಇಂದರ್ ಕುಮಾರ್ ಸರಫ್ ಅವರು ಸಲ್ಮಾನ್ ಚಿತ್ರಗಳು ಸೇರಿದಂತೆ ಕೆಲ ಚಿತ್ರಗಳಲ್ಲಿ ಸಹನಟನಾಗಿ ಹೆಸರುವಾಸಿಯಾಗಿದ್ದರು. ಏಕ್ತಾ ಕಪೂರ್ ಅವರ ಬಹು ಜನಪ್ರಿಯ ಧಾರಾವಾಹಿ' ಕ್ಯೂಂಕಿ ಸಾಸ್ ಭಿ ಕಭಿ ಬಹೂ ಥಿ' ಯಲ್ಲಿ ಮಿಹಿರ್ ಪಾತ್ರಧಾರಿಯಾಗಿ ಇಂದರ್ ಜನಪ್ರಿಯತೆ ಗಳಿಸಿದ್ದರು.

Actor Inder Kumar passes away

43 ವರ್ಷದ ಇಂದರ್ ಕುಮಾರ್ ಅವರು ಮುಂಜಾನೆ 2 ಗಂಟೆ ವೇಳೆಗೆ ಅಂಧೇರಿಯ ತಮ್ಮ ನಿವಾಸದಲ್ಲಿ ಹೃದಯಾಘಾತಕ್ಕೊಳಗಾದವರು ಚೇತರಿಕೆ ಕಾಣದೆ ಸಾವನ್ನಪ್ಪಿದ್ದಾರೆ.

ಮಾಸೂಮ್, ಕಿಲಾಡಿಯೋಂಕಾ ಕಿಲಾಡಿ, ಕಹಿ ಪ್ಯಾರ್ ನ ಹೋ ಜಾಯೆ, ಗಜ ಗಾಮಿನಿ ಅಲ್ಲದೆ ಸಲ್ಮಾನ್ ಖಾನ್ ಅವರ ವಾಂಟೆಂಡ್ ಚಿತ್ರದಲ್ಲಿ ನಟಿಸಿದ್ದ ಇಂದರ್ ಅವರಿಗೆ ಮದುವೆ ಆಗಿದ್ದು, ಪತ್ನಿ ಪಲ್ಲವಿ ಜತೆ ವೈಮನಸ್ಯ ಮುಂದುವರೆದಿದ್ದು, ಇಬ್ಬರು ಪ್ರತ್ಯೇಕ ಫ್ಲಾಟಿನಲ್ಲಿ ವಾಸಿಸುತ್ತಿದ್ದರು.

ನನ್ನ ಪತಿ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಪಲ್ಲವಿ ಅವರು ವಾರ್ಸೋವಾ ಪೊಲೀಸರಿಗೆ ದೂರು ನೀಡಿದ್ದರು. ಇದರ ಬೆನ್ನಲ್ಲೇ 2014ರಲ್ಲಿ ರೂಪದರ್ಶಿಯೊಬ್ಬಳಿಗೆ ಸಿನಿಮಾದಲ್ಲಿ ನಟಿಸುವ ಅವಕಾಶ ನೀಡುವುದಾಗಿ ಆಮಿಷವೊಡ್ಡಿ, ಆಕೆ ಮೇಲೆ ಅತ್ಯಾಚಾರ ಎಸಗಿದ ಆರೋಪವನ್ನು ಇಂದರ್ ಹೊತ್ತುಕೊಂಡಿದ್ದರು.

ನಾನೇನು ಆಕೆಗೆ ಮೋಸ ಮಾಡಿಲ್ಲ. ಇಬ್ಬರ ನಡುವೆ ನಡೆದಿದ್ದು ಸಹಮತ ಸೆಕ್ಸ್. ನಾನೇನು ಆಕೆಗೆ ಮೋಸ ಮಾಡಿ ಲೈಂಗಿಕ ಸುಖ ಅನುಭವಿಸಿಲ್ಲ' ಎಂದು ಇಂದರ್ ಕುಮಾರ್ ಹೇಳಿದ್ದರು. ಮುಂಬೈನ ಯಾರಿ ರಸ್ತೆಯ ಸ್ಮಶಾನ ಭೂಮಿಯಲ್ಲಿ ಇಂದರ್ ಕುಮಾರ್ ಅಂತಿಮ ಸಂಸ್ಕಾರ ವಿಧಿ ವಿಧಾನ ನಡೆಯಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The actor Inder Kumar suffered a cardiac arrest and passed away in his sleep at 2 AM in Andheri, Mumbai on Friday.
Please Wait while comments are loading...