ಶ್ರೀದೇವಿಯನ್ನು ಬೀಳ್ಕೊಡಲು ಸಾಲುಸಾಲಾಗಿ ಬಂದ ತಾರಾ ಬಳಗ

Recommended Video

      ನಟಿ ಶ್ರೀದೇವಿ ನಿಧನ : ಅಂತಿಮ ವಿದಾಯ ಹೇಳಲು ಬಂದ ಬಾಲಿವುಡ್ ತಾರಾ ಬಳಗ | Oneindia Kannada

      ಲಕ್ಷಾಂತರ, ಕೋಟ್ಯಂತರ ಮಂದಿ ಕಣ್ಣಿಗೆ ಬೆರಗಿನಂತಿದ್ದ ಶ್ರೀದೇವಿ ಎಂಬ ಚೆಲುವೆ ತನ್ನ ನೆನಪನ್ನು ಉಳಿಸಿ ಹೊರಟಿದ್ದಾರೆ. ಮಿನುಗುತ್ತಿದ್ದ ತಾರೆಯೊಂದು ಕಳಾಹೀನವಾಗಿದೆ. ಆ ಕಣ್ಣುಗಳಲ್ಲಿ ತುಳುಕಿಸುತ್ತಿದ್ದ ಭಾವನೆಗಳು, ಅದ್ಭುತವಾದ ನಟನೆ, ಜೇನು ತುಂಬಿಕೊಂಡಂತೆ ಭಾಸವಾಗುತ್ತಿದ್ದ ಧ್ವನಿ ಇವೆಲ್ಲ ಇನ್ನು ಮುಂದೆ ಸಿನಿಮಾಗಳಲ್ಲಿ ಮಾತ್ರ ಕಾಣಲು ಸಿಗುತ್ತದೆ.

      ಮುಭೈನಲ್ಲಿ ಬುಧವಾರ ಶ್ರೀದೇವಿಯ ಅಂತ್ಯಸಂಸ್ಕಾರ. ಬದುಕಿರುವಾಗ ಅಯಸ್ಕಾಂತದಂತೆ ಸೆಳೆಯುತ್ತಿದ್ದ ಆಕೆಯ ಅಂತಿಮ ದರ್ಶನ ಪಡೆಯುವ ಸಲುವಾಗಿ ಸಾಗರವನು ಅರಸಿ ಸಾಗುವ ನದಿಗಳಂತೆ ಅದೆಷ್ಟೋ ಮಂದಿ ಬರುತ್ತಿದ್ದಾರೆ. ಜತೆಗೆ ಹಿಂದಿ ಚಿತ್ರರಂಗವೂ ಸೇರಿದಂತೆ ವಿವಿಧ ಭಾಷೆಯ ನಟ-ನಟಿಯರು ಸಹ ಧಾವಿಸುತ್ತಿದ್ದಾರೆ.

      ದುಬೈನ ಹೋಟೆಲ್ ವೊಂದರಲ್ಲಿ ತಂಗಿದ್ದಾಗ ಮೃತಪಟ್ಟ ಐವತ್ನಾಲ್ಕು ವರ್ಷದ ಬಹುಭಾಷಾ ನಟಿಯ ಪಾರ್ಥಿವ ಶರೀರ ಮಂಗಳವಾರ ರಾತ್ರಿ ಮುಂಬೈ ತಲುಪಿತು. ಆ ನಂತರ ಆಸ್ಪತ್ರೆಯಲ್ಲಿ ಇಟ್ಟಿದ್ದ ದೇಹವನ್ನು ಮರು ದಿನ ಅಂದರೆ ಬುಧವಾರ ಸಾರ್ವಜನಿಕ ದರ್ಶನಕ್ಕೆ ಇಡಲಾಗಿದೆ. ಮಹಾನ್ ನಟಿಗೆ ಅಂತಿಮ ವಿದಾಯ ಹೇಳಲು ಯಾರು ಬಂದಿದ್ದರು ಎಂಬುದರ ಫೋಟೋ ಸಹಿತ ಲೇಖನ ಇಲ್ಲಿದೆ.

      ಅತ್ತೆ-ಸೊಸೆ ಅಂತಿಮ ವಿದಾಯ

      ಅತ್ತೆ-ಸೊಸೆ ಅಂತಿಮ ವಿದಾಯ

      ಹಿರಿಯ ನಟಿ ಜಯಾ ಬಚ್ಚನ್ ಹಾಗೂ ಅವರ ಸೊಸೆ ಐಶ್ವರ್ಯಾ ರೈ ಬಚ್ಚನ್ ಶ್ರೀದೇವಿಗೆ ಅಂತಿಮ ವಿದಾಯ ಹೇಳಲು ಬಂದ ಕ್ಷಣದ ಚಿತ್ರ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದ್ದು ಹೀಗೆ.

      ಕುಮಾರ ಮಂಗಲಂ ಬಿರ್ಲಾ

      ಕುಮಾರ ಮಂಗಲಂ ಬಿರ್ಲಾ

      ಆದಿತ್ಯಾ ಬಿರ್ಲಾ ಗ್ರೂಪ್ ನ ಅಧ್ಯಕ್ಷ, ಉದ್ಯಮಿ ಕುಮಾರ ಮಂಗಲಂ ಬಿರ್ಲಾ ತಮ್ಮ ಮಗಳ ಜತೆಗೆ ಬಂದು ಸಂತಾಪ ಸೂಚಿಸಿದರು.

      ನಟಿ ಟಬು

      ನಟಿ ಟಬು

      ಹಿರಿಯ ನಟಿ ಸುಲ್ಭಾ ಆರ್ಯಾ ಜತೆಗೆ ಬಂದು ಕೊನೆಯದಾಗಿ ಶ್ರೀದೇವಿ ದರ್ಶನ ಪಡೆದ ನಟಿ ಟಬು.

      ತನಿಷಾ ಮುಖರ್ಜಿ

      ತನಿಷಾ ಮುಖರ್ಜಿ

      ನಟಿ ತನಿಷಾ ಮುಖರ್ಜಿ ಮತ್ತು ಆಕೆಯ ತಾಯಿ ತನುಜಾ ಸಂತಾಪ ಸೂಚಿಸುವ ಸಲುವಾಗ ಬಂದ ಕ್ಷಣ.

      ಜಾಕ್ವೆಲಿನ್ ಫರ್ನಾಂಡಿಸ್

      ಜಾಕ್ವೆಲಿನ್ ಫರ್ನಾಂಡಿಸ್

      ಕೊನೆಯ ಬಾರಿಗೆ ಶ್ರೀದೇವಿ ಅವರಿಗೆ ಗೌರವ ಸೂಚಿಸಲು ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಬಂದಿದ್ದು ಹೀಗೆ.

      ಸುಭಾಷ್ ಘಾಯ್

      ಸುಭಾಷ್ ಘಾಯ್

      ಸಿನಿಮಾ ನಿರ್ದೇಶಕ ಸುಭಾಷ್ ಘಾಯ್ ತಮ್ಮ ದುಃಖವನ್ನು ಸೂಚಿಸಲು ಬಂ ಕ್ಷಣ ಕ್ಯಾಮೆರಾಗೆ ಸೆರೆ ಸಿಕ್ಕಿದ್ದು ಈ ಭಂಗಿಯಲ್ಲಿ.

      ಅಜಯ್ ದೇವಗನ್ ಹಾಗೂ ಕಾಜೋಲ್

      ಅಜಯ್ ದೇವಗನ್ ಹಾಗೂ ಕಾಜೋಲ್

      ಶ್ರೀದೇವಿ ಅಂತಿಮ ದರ್ಶನಕ್ಕಾಗಿ ಬಂದಿದ್ದ ತಾರಾ ದಂಪತಿ ಅಜಯ್ ದೇವಗನ್ ಹಾಗೂ ಕಾಜೋಲ್.

      ಸುಷ್ಮಿತಾ ಸೇನ್

      ಸುಷ್ಮಿತಾ ಸೇನ್

      ಬಹುಭಾಷಾ ಸುಷ್ಮಿತಾ ಸೇನ್ ಅವರು ಶ್ರೀದೇವಿ ಪಾರ್ಥಿವ ಶರೀರದ ದರ್ಶನಕ್ಕಾಗಿ ಬಂದಿದ್ದು ಹೀಗೆ.

      ಮಾಧುರಿ ದೀಕ್ಷಿತ್ ದಂಪತಿ

      ಮಾಧುರಿ ದೀಕ್ಷಿತ್ ದಂಪತಿ

      ನಟಿ ಮಾಧುರಿ ದೀಕ್ಷಿತ್ ಹಾಗೂ ಆಕೆಯ ಪತಿ ಶ್ರೀರಾಮ್ ಮಾಧವ್ ನೆನೆ ಅಂತಿಮ ದರ್ಶನಕ್ಕಾಗಿ ಬಂದ ಕ್ಷಣ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+