• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮುಂಬೈ ವಲಸೆ ಕಾರ್ಮಿಕರಿಗೆ ಆಹಾರ ತಯಾರು ಮಾಡಿದ 99ರ ಅಜ್ಜಿ

|

ಮುಂಬೈ, ಮೇ 30: ಮುಂಬೈನಲ್ಲಿರುವ ವಲಸೆ ಕಾರ್ಮಿಕರು ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿ ಇದ್ದಾರೆ. ಇವರ ಕಷ್ಟಕ್ಕೆ ಸಾಕಷ್ಟು ಜನರು ಸ್ಪಂದಿಸಿದ್ದಾರೆ. ಆದರೆ, 99ರ ಅಜ್ಜಿಯೊಬ್ಬರು ಕೂಡ ತಮ್ಮ ಕೈಲಾದ ಸಹಾಯ ಮಾಡಿದ್ದಾರೆ.

ಮುಂಬೈನ ಅಜ್ಜಿಯೊಬ್ಬರು ತಮ್ಮ ಮನೆಯಲ್ಲಿ ವಲಸೆ ಕಾರ್ಮಿಕರಿಗೆ ಆಹಾರ ತಯಾರು ಮಾಡಿ ಪೊಟ್ಟಣ ಕಟ್ಟುತ್ತಿದ್ದಾರೆ. ಈ ವಿಡಿಯೋವನ್ನು ಕರಾಚಿ ಮೂಲದ ವಕೀಲ ಜಾಹಿದ್ ಎಂಬುವವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಭಪ್ಪರೆ ಮಗು.. ಕೊರೊನಾ ವೈರಸ್ ನ ಬಗ್ಗುಬಡಿದ 36 ದಿನದ ಹಸುಗೂಸು.!

''ನನ್ನ 99 ವರ್ಷದ ಫುಪ್ಪಿ ಬಾಂಬೆಯಲ್ಲಿ ವಲಸೆ ಕಾರ್ಮಿಕರಿಗೆ ಆಹಾರ ಪ್ಯಾಕೆಟ್‌ಗಳನ್ನು ಸಿದ್ಧಪಡಿಸುತ್ತಾಳೆ'' ಎಂದು ಟ್ವಿಟ್ಟರ್‌ನಲ್ಲಿ ಬರೆದು, ವಿಡಿಯೋ ಹಂಚಿಕೊಂಡಿದ್ದಾರೆ. ಜಾಹಿದ್‌ ಹಂಚಿಕೊಂಡಿರುವುದು ಅವರ ಅಜ್ಜಿಯ ವಿಡಿಯೋವಾಗಿದೆ.

ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್‌ ಆಗುತ್ತಿದ್ದಂತೆ ಜನರ ಮೆಚ್ಚುಗೆಗಳಿಸಿದೆ. ಸಾಕಷ್ಟು ಮಂದಿ ಅಜ್ಜಿಗೆ ಹ್ಯಾಟ್ಸ್ ಆಫ್ ಹೇಳಿದ್ದಾರೆ. ಅಜ್ಜಿಯ ಆರೋಗ್ಯಕ್ಕಾಗಿ ಅನೇಕರು ಪ್ರಾರ್ಥನೆ ಮಾಡಿದ್ದಾರೆ.

ಅನೇಕರು ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ರೀ ಟ್ವೀಟ್ ಮಾಡಿದ್ದು, ಅಜ್ಜಿಯ ಸಹಾಯ ಗುಣಕ್ಕೆ ಕೈ ಮುಗಿದಿದ್ದಾರೆ. ಈ ವಯಸ್ಸಿನಲ್ಲಿ ಅಜ್ಜಿ ಸಹಾಯ ಮಾಡಲು ಮುಂದೆ ಬಂದಿದ್ದು, ಸೆಲ್ಯೂಟ್ ಹೊಡೆದಿದ್ದಾರೆ.

English summary
99 year old woman prepares food packets for Mumbai migrant workers. The video has gone viral on the internet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X