ಮುಂಬೈ: ಬಹುಮಹಡಿ ಕಟ್ಟಡದಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಕ್ಕೆ 6 ಬಲಿ
ಮುಂಬೈ, ಸೆಪ್ಟೆಂಬರ್ 7: ಮುಂಬೈಯ ವಿಲೇ ಪಾರ್ಲೆ ನಗರದಲ್ಲಿರುವ ನಿರ್ಮಾಣ ಹಂತದಲ್ಲಿದ್ದ ಬಹುಮಹಡಿ ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಓರ್ವ ಮಗು ಸೇರಿದಂತೆ ಆರು ಕಾರ್ಮಿಕರು ಸಾವಿಗೀಡಾದ ದುರ್ಘಟನೆ ಇಂದು(ಸೆ. 7) ಬೆಳಿಗ್ಗೆ ಸಂಭವಿಸಿದೆ.
ವಿಲೇ ಪಾರ್ಲೆ ನಗರದ ನಿರ್ಮಾಣ ಹಂತದ ಕಟ್ಟಡವೊಂದರ 13 ನೇ ಅಂತಸ್ತಿನಲ್ಲಿ ಮೂರು ಗ್ಯಾಸ್ ಸಿಲಿಂಡರ್ ಸ್ಫೋಟಿಸಿದ್ದೇ ಈ ದುರ್ಘಟನೆಗೆ ಕಾರಣ ಎಂದು ಮೂಲಗಳು ತಿಳಿಸಿವೆ.

ಘಟನೆಯಲ್ಲಿ 11 ಕ್ಕೂ ಹೆಚ್ಚು ಜನರಿಗೆ ಗಾಯವಾಗಿದ್ದು, ದೇಹದ ಶೇ.90 ರಷ್ಟು ಭಾಗ ಸುಟ್ಟಿರುವ ಮೂವರ ಸ್ಥಿತಿ ಚಿಂತಾಜನಕವಾಗಿದೆ. ಸಾವಿಗೀಡಾದ ಕಾರ್ಮಿಕರೆಲ್ಲರೂ ಪಶ್ಚಿಮ ಬಂಗಾಳ ಮೂಲದವರೆಂದು ತಿಳಿದುಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.












Click it and Unblock the Notifications