ಮಾನಸಿಕ ಖಿನ್ನತೆಗೊಳಗಾಗಿ ರೂಪದರ್ಶಿ ನೇಣಿಗೆ ಶರಣು

Posted By:
Subscribe to Oneindia Kannada

ಮುಂಬೈ, ಜುಲೈ 15: ವೃತ್ತಿ ಬದುಕಿನ ಹೆಚ್ಚಿನ ಅವಕಾಶಗಳು ಸಿಗದ ಕಾರಣ ಮಾನಸಿಕ ಖಿನ್ನತೆಗೆ ಒಳಗಾಗಿ 27 ವರ್ಷ ವಯಸ್ಸಿನ ರೂಪದರ್ಶಿಯೊಬ್ಬರು ಗುರುವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ರೂಪದರ್ಶಿಯಾಗಿದ್ದ ಯುವತಿಯನ್ನು ಕಮರ್ ಜೀತ್ ಕೌರ್ ಅಲಿಯಾಸ್ ನೇಹಾ ಎಂದು ಗುರುತಿಸಲಾಗಿದೆ. ಅಂಧೇರಿಯ ಅಪಾರ್ಟ್ಮೆಂಟ್ ವೊಂದರಲ್ಲಿ ವಾಸವಾಗಿದ್ದರು. ಗುರುವಾರದಂದು ತನ್ನ ನಿವಾಸದಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಖಿನ್ನತೆಗೆ ಏನು ಕಾರಣ: ವೃತ್ತಿ ಬದುಕು ಹಾಗೂ ವೈಯಕ್ತಿಕ ಬದುಕಿನಲ್ಲಿ ಯಶಸ್ಸು ಕಾಣಲು ಸಾಧ್ಯವಾಗದ ಕಾರಣ ನೇಹಾ ಈ ರೀತಿ ಆತುರದ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಕೆಲ ವರ್ಷಗಳಿಂದ ತನ್ನ ಬಾಯ್ ಫ್ರೆಂಡ್ ಜೊತೆಗೆ ಲಿವ್ ಇನ್ ಸಂಬಂಧದಲ್ಲಿದ್ದರು.

27-Year-Old Model Allegedly Commits Suicide In Mumbai

ಈದ್ ಉಲ್ ಫಿತ್ರ್ ಗಾಗಿ ದೆಹಲಿಯಿಂದ ಮುಂಬೈಗೆ ಮತ್ತೆ ಬಂದಿದ್ದರು. ಆಕೆಯ ಗೆಳೆಯ ದೇವರಾಜ್ ಮನೆಯಲ್ಲಿರಲಿಲ್ಲ. ಮನೆಯಿಂದ ಹೊರಗೆ ಹೋಗಿದ್ದ ದೇವರಾಜ್ ಗುರುವಾರ ಮಧ್ಯರಾತ್ರಿ 12.30 ನಂತರ ಅಪಾರ್ಟ್ ಮೆಂಟ್ ಗೆ ಬಂದು ನೋಡಿದಾಗ ನೇಹಾ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ.

ವೃತ್ತಿಯ ಜೊತೆಗೆ ವೈಯಕ್ತಿಕ ಜೀವನದಲ್ಲೂ ಜಿಗುಪ್ಸೆ ಹೊಂದಿದ್ದ ನೇಹಾ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ. ವಿಚಾರಣೆ ಜಾರಿಯಲ್ಲಿದೆ ಎಂದು ಅಂಧೇರಿ ಪೊಲೀಸರು ಹೇಳಿದ್ದಾರೆ. (ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
A 27-year-old model allegedly committed suicide on Thursday by hanging herself from the ceiling of her residence in Andheri, where she was staying with her boyfriend, police said.
Please Wait while comments are loading...