ಹೆಡ್ಲಿ ಹೇಳಿದ ಡೆಡ್ಲಿ ಸತ್ಯ: ಮಿಲಿಟರಿ ಸ್ಪೈ ಆಗಲು ಹೇಳಿದ್ರು
ಮುಂಬೈ, ಫೆ. 09: ಮುಂಬೈ ಮೇಲೆ ಉಗ್ರರ ದಾಳಿ ನಡೆಸಲು ಸಂಚು ರೂಪಿಸಿದ್ದ ಡೇವಿಡ್ ಹೆಡ್ಲಿ ಸುದೀರ್ಘ ವಿಚಾರಣೆ ಎರಡನೇ ದಿನಕ್ಕೆ ಕಾಲಿಟ್ಟಿದೆ. ಶಿಕಾಗೋ ಜೈಲಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಮುಂಬೈನ ಸೆಷನ್ಸ್ ಕೋರ್ಟಿನ ವಿಚಾರಣೆ ಎದುರಿಸುತ್ತಿದ್ದಾನೆ. ಎರಡನೇ ದಿನದ ವಿಚಾರಣೆಯ ಲೈವ್ ಅಪ್ಡೇಟ್ ಇಲ್ಲಿ ಸಿಗಲಿದೆ...
ಮೊದಲ ದಿನದಂದು ಜಿಹಾದಿ, ಲಷ್ಕರ್, ಹಫೀಜ್ ಸಯೀದ್ ಸೇರಿದಂತೆ ಅನೇಕ ರಹಸ್ಯಗಳನ್ನು ಹೊರ ಹಾಕಿದ್ದ ಹೆಡ್ಲಿ ಎರಡನೇ ದಿನ ಭಾರತೀಯ ಸೇನೆಯ ರಹಸ್ಯ ಮಾಹಿತಿ ಕದಿಯುವ ಸ್ಪೈ ಆಗಲು ಸಂಚು ರೂಪಿಸಿದ್ದರ ಬಗ್ಗೆ ಮಾತನಾಡಿದ್ದಾನೆ. [ಉಗ್ರ ಹೆಡ್ಲಿ ತಪ್ಪೊಪ್ಪಿಗೆ, ರೋಚಕ ಸತ್ಯಗಳು ಭಾಗ -1]
ಡೇವಿಡ್ ಹೆಡ್ಲಿ ಪರ ವಕೀಲರಾದ ಮಹೇಶ್ ಜೇಠ್ಮಲಾನಿ, ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ (ಎಸ್‌ಪಿಪಿ) ಉಜ್ವಲ್ ನಿಕ್ಕಮ್ ಸೇರಿದಂತೆ ಅಮೆರಿಕ ರಾಯಭಾರ ಕಚೇರಿಯ ಕೆಲವು ಅಧಿಕಾರಿಗಳು ವಿಡಿಯೋ ಕಾನ್ಫರೆನ್ಸ್‌ನಲ್ಲಿ ಪಾಲ್ಗೊಂಡಿದ್ದಾರೆ.ಮೊದಲ ದಿನ ಸುಮಾರು 40 ಪ್ರಶ್ನೆಗಳಿಗೆ ಹೆಡ್ಲಿ ಉತ್ತರಿಸಿದ್ದ. ಎರಡನೇ ದಿನದ ಮುಖ್ಯಾಂಶಗಳು ಹೀಗಿದೆ:

* ನಾನು ತಾಜ್ ಹೋಟೆಲ್ ವಿಡಿಯೋ ಹಾಗೂ ಫೋಟೊಗಳನ್ನು ಮೇಜರ್ ಇಕ್ಬಾಲ್ ಹಾಗೂ ಸಾಜಿದ್ ಮೀರ್ ಗೆ ನೀಡಿದೆ. ಇಬ್ಬರಿಂದಲೂ ಈ ಬಗ್ಗೆ ಪ್ರಶಂಸೆಯ ಮಾತುಗಳು ಕೇಳಿ ಬಂದಿತು.
* ತಾಜ್ ಗೆ ನಾನು ನನ್ನ ಪತ್ನಿ ಫೈಜಾ ಜೊತೆ ಹೋಗಿ ಎರಡನೇ ಮಹಡಿಯಲ್ಲಿ ತಂಗಿದ್ದೆ. ನನ್ನ ವೀಕ್ಷಣೆಗೆ ಲಭ್ಯವಾದ ಎಲ್ಲಾ ಮಾಹಿತಿಯನ್ನು ಕಾಲಕಾಲಕ್ಕೆ ಮೀರ್ ಗೆ ರವಾನಿಸುತ್ತಿದ್ದೆ.
* ಸೆಪ್ಟೆಂಬರ್ 14 ರಿಂದ 28ರಿಂದ 2006 ರ ತನಕ ನಾನು ತಾಜ್ ನಲ್ಲಿ ಉಳಿದು ಕೊಂಡಿದ್ದೆ. ಲಷ್ಕರ್ ಇ ಯೋಯ್ಬಾ ಸಂಘಟನೆ ಮುಂಬೈಯನ್ನು ಟಾರ್ಗೆಟ್ ಮಾಡಿಕೊಂಡಿರುವುದರ ಬಗ್ಗೆ ನನಗೆ ಆಗ ಸುಳಿವಿರಲಿಲ್ಲ.
* ರಾಣಾನ ಸ್ನೇಹಿತನಾದ ಬಷೀರ್ ನನ್ನು ಮೊದಲ ಬಾರಿಗೆ ಭೇಟಿ ಮಾಡಿದೆ. ಮುಂಬೈನಲ್ಲಿ ನನ್ನ ಸಕಲ ವ್ಯವಸ್ಥೆಯನ್ನು ಆತ ನೋಡಿಕೊಂಡ.
* ಮುಂಬೈಗಿಂತ ಮೋದಲು ದೆಹಲಿ, ಬೆಂಗಳೂರು ಕೂಡಾ ಲಷ್ಕರ್ ನ ಟಾರ್ಗೆಟ್ ಆಗಿತ್ತು.
ಮುಂದುವರೆಯಲಿದೆ...












Click it and Unblock the Notifications