ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್‌ನಿಂದ ಮುಂಬೈ ಪೊಲೀಸರಿಗೆ 26/11ರ ಮಾದರಿ ದಾಳಿ ಸಂದೇಶ

|
Google Oneindia Kannada News

ಮುಂಬೈ, ಆಗಸ್ಟ್‌ 20: ಮುಂಬೈ ಪೊಲೀಸ್ ಟ್ರಾಫಿಕ್ ಕಂಟ್ರೋಲ್‌ನ ವಾಟ್ಸಾಪ್ ಸಂಖ್ಯೆಗೆ ಪಾಕಿಸ್ತಾನ ಮೂಲದ ಸಂಖ್ಯೆಯಿಂದ ಬಂದಿರುವ "26/11" ದಾಳಿ ಮಾದರಿಯ ಭಯೋತ್ಪಾದಕ ದಾಳಿಯ ಎಚ್ಚರಿಕೆಯ ವಾಟ್ಸಾಪ್ ಸಂದೇಶ ಬಂದಿದ್ದು, ಮುಂಬೈ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ಶನಿವಾರ ತಿಳಿಸಿವೆ.

ಭಾರತದಲ್ಲಿ ಆರು ಮಂದಿ ದಾಳಿ ನಡೆಸಲಿದ್ದಾರೆ ಎಂದು ಸಂದೇಶದಲ್ಲಿ ಹೇಳಲಾಗಿದೆ. ಈ ಬಗ್ಗೆ ಮುಂಬೈ ಪೊಲೀಸರು ತಕ್ಷಣದ ಆಧಾರದ ಮೇಲೆ ತನಿಖೆಯನ್ನು ಪ್ರಾರಂಭಿಸಿದ್ದಾರೆ ಎಂದು ಮೂಲಗಳು ತಿಳಿಸಿದ್ದು, ಭದ್ರತಾ ಏಜೆನ್ಸಿಗಳು ಅಲರ್ಟ್ ಆಗಿವೆ. ವಾಟ್ಸಾಪ್ ಸಂದೇಶವು ನವೆಂಬರ್ 26, 2008 ರಂದು ಪಾಕಿಸ್ತಾನದ ಭಯೋತ್ಪಾದಕ ಗುಂಪು ಲಷ್ಕರ್-ಎ-ತೊಯ್ಬಾ ಮುಂಬೈನಾದ್ಯಂತ ದಾಳಿಗಳನ್ನು ನಡೆಸಿದ ದಾಳಿಯ ನೆನಪುಗಳನ್ನು ಉಲ್ಲೇಖಿಸಿದೆ.

26/11ರ ಮುಂಬೈ ದಾಳಿ: ಸಾಜಿದ್ ಮಜೀದ್ ಮಿರ್‌ಗೆ 15 ವರ್ಷ ಜೈಲು26/11ರ ಮುಂಬೈ ದಾಳಿ: ಸಾಜಿದ್ ಮಜೀದ್ ಮಿರ್‌ಗೆ 15 ವರ್ಷ ಜೈಲು

ಏತನ್ಮಧ್ಯೆ, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ವಿರೋಧ ಪಕ್ಷದ ನಾಯಕ ಅಜಿತ್ ಪವಾರ್ ಅವರು ಈ ಬೆದರಿಕೆ ಸಂದೇಶವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಮತ್ತು ಪ್ರಕರಣವನ್ನು ಶೀಘ್ರವಾಗಿ ತನಿಖೆ ಮಾಡಬೇಕು ಎಂದು ಹೇಳಿದ್ದಾರೆ.

26/11 model attack message from Pakistan to Mumbai police

ರಾಜ್ಯದ ರಾಯಗಢ ಜಿಲ್ಲೆಯ ಹರಿಹರೇಶ್ವರ ಕಡಲತೀರದಲ್ಲಿ ಎಕೆ 47, ರೈಫಲ್‌ಗಳು, ಬಂದೂಕುಗಳು ಮತ್ತು ಮದ್ದುಗುಂಡುಗಳನ್ನು ಹೊತ್ತ ದೋಣಿಯೊಂದು ಗುರುವಾರ ಪತ್ತೆಯಾದಾಗ ಭದ್ರತಾ ಭೀತಿಯ ನಂತರ ಈ ಬೆಳವಣಿಗೆ ನಡೆದಿದೆ. ದೋಣಿಯು ಪತ್ತೆಯಾದ ನಂತರ ಮಹಾರಾಷ್ಟ್ರ ಪೊಲೀಸರಿಗೆ ಜಾಗರೂಕರಾಗಿರಲು ತಿಳಿಸಲಾಗಿದೆ.

26/11 ಮುಂಬೈ ದಾಳಿ ರೂವಾರಿ ಹಫೀಜ್ ಸಯೀದ್ ಗೆ 5 ವರ್ಷ ಜೈಲು26/11 ಮುಂಬೈ ದಾಳಿ ರೂವಾರಿ ಹಫೀಜ್ ಸಯೀದ್ ಗೆ 5 ವರ್ಷ ಜೈಲು

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಹೇಳುವಂತೆ, ದೋಣಿ ಆಸ್ಟ್ರೇಲಿಯಾದ ಪ್ರಜೆಗೆ ಸೇರಿದ್ದು, ಸಮುದ್ರದಲ್ಲಿ ಬೋಟ್ ಇಂಜಿನ್ ಒಡೆದಿದೆ. ಕೊರಿಯನ್ ಬೋಟ್ ಮೂಲಕ ಜನರನ್ನು ರಕ್ಷಿಸಲಾಗಿದೆ. ಅದು ಇದೀಗ ಹರಿಹರೇಶ್ವರ ಬೀಚ್ ತಲುಪಿದೆ. ಹೀಗಾಗಿ ಮುಂಬರುವ ಹಬ್ಬ ಹರಿದಿನಗಳನ್ನು ಗಮನದಲ್ಲಿಟ್ಟುಕೊಂಡು ಪೊಲೀಸರು ಮತ್ತು ಆಡಳಿತಕ್ಕೆ ಸನ್ನದ್ಧರಾಗಲು ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.

26/11 model attack message from Pakistan to Mumbai police

ನವೆಂಬರ್ 26, 2008ರಂದು, ಪಾಕಿಸ್ತಾನದಿಂದ 10 ಲಷ್ಕರ್-ಎ-ತೊಯ್ಬಾ ಭಯೋತ್ಪಾದಕರು ಸಮುದ್ರ ಮಾರ್ಗವಾಗಿ ಆಗಮಿಸಿ ಗುಂಡಿನ ದಾಳಿ ನಡೆಸಿದ್ದರು. ಘಟನೆಯಲ್ಲಿ18 ಭದ್ರತಾ ಸಿಬ್ಬಂದಿ ಸೇರಿದಂತೆ ನೂರಾರು ಜನರನ್ನು ಕೊಂದರು ಮತ್ತು ಮುಂಬೈನಲ್ಲಿ ಹಲವರು ಗಾಯಗೊಂಡರು. ನಂತರ ದೇಶದ ಕಮಾಂಡೋ ಪಡೆಗಳಾದ ಎನ್‌ಎಸ್‌ಜಿ ಒಂಬತ್ತು ಭಯೋತ್ಪಾದಕರನ್ನು ಹತ್ಯೆಗೈದವು. ಅಜ್ಮಲ್ ಕಸಬ್ ಮಾತ್ರ ಜೀವಂತವಾಗಿ ಸೆರೆ ಸಿಕ್ಕ ಭಯೋತ್ಪಾದಕ. ಅವರನ್ನು ನಾಲ್ಕು ವರ್ಷಗಳ ನಂತರ ನವೆಂಬರ್ 21, 2012 ರಂದು ಗಲ್ಲಿಗೇರಿಸಲಾಯಿತು.

English summary
Police sources said on Saturday that the WhatsApp number of the Mumbai Police Traffic Control received a WhatsApp message warning of a "26/11" attack pattern terrorist attack from a number originating in Pakistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X