• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊರೊನಾ ವೈರಸ್ ಹಾವಳಿ: ಚೀನಾ ಹಿಂದಿಕ್ಕಿದ ಮಹಾರಾಷ್ಟ್ರ

|
Google Oneindia Kannada News

ಮುಂಬೈ, ಜೂನ್ 9: ಭಾರತದ ಕೊರೊನಾ ಹಾಟ್‌ಸ್ಪಾಟ್‌ ಮಹಾರಾಷ್ಟ್ರದಲ್ಲಿ ಇಂದು 2553 ಜನರಿಗೆ ಕೊವಿಡ್ ಸೋಂಕು ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 88,528ಕ್ಕೆ ಏರಿಕೆಯಾಗಿದೆ.

ಇಲ್ಲಿ ಗಮನಿಸಬೇಕಾದ ವಿಚಾರ ಏನಪ್ಪಾ ಅಂದ್ರೆ, ವೈರಸ್ ಹುಟ್ಟಿಗೆ ಕಾರಣವಾಗಿ ವಿಶ್ವಕ್ಕೆ ಸೋಂಕು ಹರಡಿಸಿರುವ ಚೀನಾ ದೇಶವನ್ನು ಮಹಾರಾಷ್ಟ್ರ ಹಿಂದಿಕ್ಕಿದೆ. ವೈರಸ್ ಸೃಷ್ಟಿಸಿ ಆರಂಭದಲ್ಲಿ ಅತಿ ಹೆಚ್ಚು ಅಪಾಯವನ್ನು ಎದುರಿಸಿದ್ದ ಚೀನಾ ದೇಶವನ್ನು ಭಾರತದ ಒಂದು ರಾಜ್ಯ ಹಿಂದಿಕ್ಕಿದೆ.

ರಾಜ್ಯದಲ್ಲಿಂದೂ 'ಮಹಾ' ಕಂಟಕ, ಒಂದೇ ದಿನ 308 ಕೇಸ್ರಾಜ್ಯದಲ್ಲಿಂದೂ 'ಮಹಾ' ಕಂಟಕ, ಒಂದೇ ದಿನ 308 ಕೇಸ್

ವರದಿಗಳ ಪ್ರಕಾರ ಚೀನಾದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 83,040ಕ್ಕೆ ನಿಂತಿದೆ. ಅಲ್ಲೊಂದು ಇಲ್ಲೊಂದು ಹೊಸ ಕೇಸ್ ಮಾತ್ರ ದಾಖಲಾಗುತ್ತಿದೆ. ಆದರೆ, ಮಹಾರಾಷ್ಟ್ರದಲ್ಲಿ ಒಂದು ದಿನಕ್ಕೆ ಸರಾಸರಿ 2500 ಪ್ರಕರಣಗಳು ವರದಿಯಾಗುತ್ತಿದೆ. ಸದ್ಯ ಉದ್ಧವ್ ಠಾಕ್ರೆ ರಾಜ್ಯದಲ್ಲಿ ಒಟ್ಟು ಸೋಂಕಿನ ಸಂಖ್ಯೆ 88,528. ಚೀನಾ ದೇಶಕ್ಕಿಂತ 5 ಸಾವಿರ ಹೆಚ್ಚು ಕೇಸ್ ಹೊಂದಿದೆ.

ಹಾಗ್ನೋಡಿದ್ರೆ, ವಿಶ್ವದಲ್ಲಿ ಅತಿ ಹೆಚ್ಚು ಕೊರೊನಾ ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳ ಪೈಕಿ ಭಾರತ ಆರನೇ ಸ್ಥಾನಕ್ಕೇರಿದೆ. ಜೂನ್ 7ರ ಅಂತ್ಯಕ್ಕೆ ಭಾರತದಲ್ಲಿ 2,56,611 ಜನರಿಗೆ ಮಹಾಮಾರಿ ವಕ್ಕರಿಸಿದೆ.

ಮಹಾರಾಷ್ಟ್ರದಲ್ಲಿ ವರದಿಯಾಗಿರುವ ಒಟ್ಟು ಕೇಸ್‌ಗಳ ಪೈಕಿ ಮುಂಬೈ ನಗರದಲ್ಲಿ ಮಾತ್ರ ಶೇಕಡಾ 57-60ರಷ್ಟು ಪ್ರಕರಣಗಳು ಪತ್ತೆಯಾಗಿದೆ. ಮುಂಬೈ ನಗರದಲ್ಲಿ 50085 ಜನರಿಗೆ ಸೋಂಕು ಅಂಟಿಕೊಂಡಿದೆ.

ಮಹಾರಾಷ್ಟ್ರದಲ್ಲಿ ಮಾರ್ಚ್ 9 ರಂದು ಮೊದಲ ಕೊರೊನಾ ಕೇಸ್ ಪತ್ತೆಯಾಗಿತ್ತು. ಮೊದಲ 100 ಕೇಸ್ ಪತ್ತೆಯಾಗಲು ಎರಡು ವಾರ ಸಮಯ ತೆಗೆದುಕೊಂಡಿತ್ತು. ಮಾರ್ಚ್ 31ರ ವೊತ್ತಿಗೆ 302 ಕೇಸ್ ಮಹಾರಾಷ್ಟ್ರದಲ್ಲಿ ವರದಿಯಾಗಿತ್ತು. ಆಗ ಭಾರತದ ಒಟ್ಟು ಸೋಂಕು 1400 ಮಾತ್ರ.

ಅಲ್ಲಿಂದ ನೋಡು ನೋಡುತ್ತಿದ್ದಂತೆ ಹತ್ತು ಸಾವಿರ, ಇಪ್ಪತ್ತು ಸಾವಿರು, ಐವತ್ತು ಸಾವಿರ ಈಗ ಏಂಬತ್ತು ಸಾವಿರವರೆಗೂ ವರದಿಯಾಗಿದೆ. ಇಲ್ಲಿಯವರೆಗೂ ಸುಮಾರು 3000 ಜನರು ಸೋಂಕಿನಿಂದ ಚೇತರಿಸಿಕೊಳ್ಳಲು ಸಾಧ್ಯವಿಲ್ಲದೇ ಸಾವನ್ನಪ್ಪಿದ್ದಾರೆ.

English summary
2553 fresh cases of COVID19 & 109 deaths recorded in Maharashtra today, taking total number of cases to 88,528.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X