ತಾಯಿಯ ಸಾವಿನ ಪ್ರಕರಣದಲ್ಲಿ 23 ವರ್ಷದ ಮಾಡೆಲ್ ಬಂಧನ

ಮುಂಬೈ, ಅಕ್ಟೋಬರ್ 7: ತನ್ನ ತಾಯಿಯ ಕೊಲೆ ಮಾಡಿದ ಆರೋಪದ ಮೇಲೆ ಇಪ್ಪತ್ಮೂರು ವರ್ಷದ ಮಾಡೆಲ್ ಲಕ್ಷಯ ಸಿಂಗ್ ರನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ. ಸುನೀತಾ ಸಿಂಗ್ ಮೃತಪಟ್ಟವರು. ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಲಕ್ಷಯ ಸಿಂಗ್ ರನ್ನು ಅಕ್ಟೋಬರ್ ಒಂಬತ್ತನೇ ತಾರೀಕಿನ ತನಕ ಪೊಲೀಸ್ ವಶದಲ್ಲಿ ಇರಿಸಿಕೊಳ್ಳಲಾಗಿದೆ.

ಆರೋಪಿಯು ಕೃತ್ಯ ಎಸಗಿದ ಸಂದರ್ಭದಲ್ಲಿ ಮಾದಕ ವಸ್ತುಗಳ ಸೇವನೆ ಮಾಡಿದ್ದರು ಎಂಬ ಅನುಮಾನ ಪೊಲೀಸರಿಗೆ ಇದ್ದು, ವೈದ್ಯಕೀಯ ವರದಿ ಬರುವುದಕ್ಕಾಗಿ ಕಾಯುತ್ತಿದ್ದಾರೆ.

ಘಟನೆ ನಡೆಯುವ ವೇಳೆ ಮನೆಯಲ್ಲಿ ಐವರಿದ್ದರು. ಸುನೀತಾ, ಲಕ್ಷಯ, ಆಕೆಯ ಭಾವಿ ಪತ್ನಿ ಅಶ್ಪ್ರಿಯ ಬ್ಯಾನರ್ಜಿ, ಲಕ್ಷಯ ಗೆಳೆಯರ ಪೈಕಿ ಒಬ್ಬ ಹಾಗೂ ಒಬ್ಬರು ಕೆಲಸದವರು ಮನೆಯಲ್ಲಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

23 year old Mumbai model arrested for killing mother during fight

ಆ ಘಟನೆ ನಡೆದ ವೇಳೆ ಲಕ್ಷಯ ಸಿಂಗ್ ಮಾದಕ ವಸ್ತು ಸೇವನೆ ಮಾಡಿದ್ದ ಸಾಧ್ಯತೆ ಇದೆ. ಜತೆಗೆ ಆತನ ತಾಯಿ ಮಾತನಾಡುವುದನ್ನು ನಿಲ್ಲಿಸದಿದ್ದಾಗ ಸಿಟ್ಟಿನಿಂದ ಈ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಹೇಳಿದ್ದಾರೆ.

ಗುರುವಾರದಂದು ತಾಯಿ-ಮಗನ ನಡುವೆ ಜಗಳ ಆಗಿದೆ. ಆಗ ಸುನೀತಾರನ್ನು ಲಕ್ಷಯ ದೂಡಿದ್ದಾನೆ. ಆ ವೇಳೆ ಬಚ್ಚಲು ಮನೆಯ ವಾಷ್ ಬೇಸಿನ್ ಗೆ ಆಕೆಯ ತಲೆ ತಗುಲಿ ಸಾವನ್ನಪ್ಪಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+