Get Updates
Get notified of breaking news, exclusive insights, and must-see stories!

ಗುದ್ದೋಡು ಪ್ರಕರಣ: ಸಲ್ಮಾನ್ ಗೆ ಏ.20 'ಡಿ' ಡೇ

ಮುಂಬೈ, ಏ.18: ಸುಮಾರು 13 ವರ್ಷಗಳ ನಂತರ ಸಲ್ಮಾನ್ ಖಾನ್ ಆರೋಪಿಯಾಗಿರುವ ಹಿಟ್ ಅಂಡ್ ರನ್ ಕೇಸಿನ ಅಂತಿಮ ತೀರ್ಪು ನೀಡುವ ದಿನವನ್ನು ಏ.20ರಂದು ನಿರ್ಧರಿಸಲಾಗುತ್ತದೆ. ಅನೇಕ ಬಾರಿ ತಿರುವು ಪಡೆದ ಈ ಪ್ರಕರಣದಲ್ಲಿ ಇನ್ನೂ ಹೆಚ್ಚಿನ ವಿಚಾರಣೆ ನಡೆಸಬೇಕು ಎಂದು ಖಾನ್ ಪರ ವಕೀಲರು ಮಾಡಿದ ಮನವಿಯನ್ನು ತಿರಸ್ಕರಿಸಲಾಗಿದೆ.

2002ರ ಹಿಟ್ ಅಂಡ್ ರನ್ ಕೇಸಿಗೆ ಸಂಬಂಧಿಸಿದಂತೆ ವಾದ ಪ್ರತಿವಾದ ಆಲಿಸಿದ ಜಡ್ಜ್ ಡಿಡಬ್ಲ್ಯೂ ದೇಶಪಾಂಡೆ ಅವರು ಏ.20ರಂದು ತೀರ್ಪು ನೀಡುವ ದಿನಾಂಕವನ್ನು ಪ್ರಕಟಿಸಲಾಗುವುದು. ಈ ಕೇಸಿಗೆ ಸಂಬಂಧಿಸಿದಂತೆ ಆರೋಪಿ ಪರ ವಕೀಲ ಶ್ರೀಕಾಂತ್ ಶಿವಾಡೆ ಮಾಡಿರುವ ಮನವಿಯನ್ನು ಪುರಸ್ಕರಿಸಲಾಗುವುದಿಲ್ಲ ಎಂದಿದ್ದಾರೆ. [ಸಲ್ಲೂ ಪರ ಸಾಕ್ಷಿ ಹೇಳಿದ ಡ್ರೈವರ್]

ಸಲ್ಮಾನ್ ಖಾನ್ ಅವರ ಕಾರು ಚಾಲಕ ಅಶೋಕ್ ಸಿಂಗ್ ಸೇರಿದಂತೆ ಸುಮಾರು 27 ಜನ ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಿ ಹೇಳಿಕೆ ಪಡೆಯಲಾಗಿದೆ. ಈ ಕೇಸಿಗೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆ ಏನೇ ಇದ್ದರೂ ಏ.20ರಂದು ಮುಕ್ತಾಯಗೊಳಿಸಬೇಕು ಎಂದು ಕೋರ್ಟ್ ಸೂಚಿಸಿದೆ.

2002 hit-and-run case: Date of verdict in Salman Khan's case to be fixed on April 20
ಪ್ರಕರಣದಲ್ಲಿ ತಿರುವುಗಳು: 2002ರ ಹಿಟ್ ಅಂಡ್ ರನ್ ಕೇಸಿಗೆ ಸಂಬಂಧಿಸಿದಂತೆ ಕಾರು ಚಾಲನೆ ಮಾಡಿದ ವೇಳೆ ಸಲ್ಮಾನ್ ಅವರು ಕುಡಿದಿರಲಿಲ್ಲ. ಘಟನೆ ನಂತರ ನಾನು ಅವರನ್ನು ಭೇಟಿ ಮಾಡಿದ್ದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ನ್ಯಾಯಾಲಯಕ್ಕೆ ತಿಳಿಸಿದ್ದರಿಂದ ಪ್ರಕರಣಕ್ಕೆ ತಿರುವು ಸಿಕ್ಕಿತ್ತು. ನಂತರ ಕಾರು ಚಾಲಕ ಅಶೋಕ್ ಸಿಂಗ್ ಹೇಳಿಕೆ ಸಲ್ಮಾನ್ ಪರ ಬಂದಿತ್ತು.

ಟೊಯೊಟಾ ಲ್ಯಾಂಡ್‌ ಕ್ರೂಸರ್‌ ವಾಹನದ ಟೈರ್‌ ಸಿಡಿದು ನಿಯಂತ್ರಣ ತಪ್ಪಿತು, ಅಮೆರಿಕನ್ ಎಕ್ಸ್ ಪ್ರೆಸ್ ಬೇಕರಿ ಮುಂದಿನ ಫುಟ್ ಪಾತ್ ಮೇಲೆ ಸಾಗಿತು ಎಂದು ಸಲ್ಮಾನ್ ಖಾನ್ ಹೇಳಿಕೆ ನೀಡಿದ್ದರು. [ಸಲ್ಮಾನ್ ಖಾನ್ ಗೆ ಮತ್ತೆ ಹಿನ್ನಡೆ]

ಅದರೆ, ಕಾರು ಚಾಲಕ ಸೇರಿ ನಾಲ್ವರು ಪ್ರತ್ಯಕ್ಷ ದರ್ಶಿಗಳು ಈ ಮೊದಲು ಸಲ್ಮಾನ್ ವಿರುದ್ಧ ಸಾಕ್ಷಿ ಹೇಳಿದ್ದರು. 13 ವರ್ಷಗಳ ಕಾಲದ ಈ ಪ್ರಕರಣ ಇನ್ನೇನು ಮುಕ್ತಾಯದ ಘಟ್ಟ ತಲುಪಿದ್ದಂತೆ ಸಾಕ್ಷಿಗಳು ಉಲ್ಟಾ ಹೇಳಿಕೆ ನೀಡುತ್ತಿರುವುದೇಕೆ ಎಂದು ಸರ್ಕಾರಿ ಅಭಿಯೋಜಕ ಪ್ರದೀಪ್ ಪ್ರಶ್ನಿಸಿದ್ದಾರೆ.

ಏ.6ರಂದು ಸಲ್ಮಾನ್ ಪರ್ ವಕೀಲರು ವಾದ ಮಂಡನೆ, ಮಾಡಿ ಕಾರಿಗೆ ಸಿಲುಕಿ ಯಾರು ಸಾಯಲಿಲ್ಲ. ಕಾರು ಪಲ್ಟಿ ಹೊಡೆದು ಬಿದ್ದಿತ್ತು. ಅದರ ಕೆಳಗೆ ಜನ ಸಿಲುಕಿಕೊಂಡಿದ್ದರು. ಪೊಲೀಸರು ಕ್ರೇನ್ ತರಿಸಿ ಮೇಲಕ್ಕೆತ್ತಲು ದಡವಾಗಿದ್ದರಿಂದ ಓರ್ವ ವ್ಯಕ್ತಿ ಸಾವನ್ನಪ್ಪಿದ್ದರು ಎಂದು ಕೋರ್ಟ್ ಮುಂದೆ ವಾದ ಮಂಡಿಸಿದರು. ಒಟ್ಟಾರೆ, ಏ.20ರೊಳಗೆ ವಾದ ಪ್ರತಿವಾದ ಮುಕ್ತಾಯಗೊಳಿಸಬೇಕಿದ್ದು, ಅಂತಿಮ ತೀರ್ಪು ಹೊರ ಬೀಳುವ ದಿನಾಂಕ ತಿಳಿಯಲಿದೆ.(ಒನ್ ಇಂಡಿಯಾ ಸುದ್ದಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+