ಮುಂಬೈನಲ್ಲಿ 72 ವರ್ಷದ ಆರ್​ಟಿಐ ಕಾರ್ಯಕರ್ತ ಕೊಲೆ

Posted By:
Subscribe to Oneindia Kannada

ಮುಂಬೈ, ಅಕ್ಟೋಬರ್ 17: ಇಲ್ಲಿನ ಸಾಂತಾಕ್ರೂಜ್ ಉಪನಗರದಲ್ಲಿ 72 ವರ್ಷದ ಆರ್​ಟಿಐ ಕಾರ್ಯಕರ್ತರೊಬ್ಬರನ್ನು ಅಪರಿಚಿತ ದುಷ್ಕರ್ವಿುಗಳ ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದಾರೆ. ಶನಿವಾರ ರಾತ್ರಿ ಹತ್ಯೆಗೀಡಾದ ಹಿರಿಯ ನಾಗರಿಕರನ್ನು ಭುಪೇಂದ್ರ ವಿರಾ ಎಂದು ಗುರುತಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸೋಮವಾರದಂದು ಇಬ್ಬರನ್ನು ಬಂಧಿಸಿದ್ದಾರೆ.

ಭೂ ಮಾಫಿಯಾ ವಿರುದ್ಧ ಕಳೆದ ಕೆಲ ವರ್ಷಗಳಿಂದ ಭುಪೇಂದ್ರ ವಿರಾ ಅವರು ಹೋರಾಟ ನಡೆಸುತ್ತಿದ್ದರು. ಶನಿವಾರ ರಾತ್ರಿ ಸುಮಾರು 9 ಗಂಟೆ ಸಮಯದಲ್ಲಿ ಭುಪೇಂದ್ರ ಅವರ ಮನೆಗೆ ನುಗ್ಗಿದ ದುಷ್ಕರ್ವಿುಗಳು, ಏಕಾಏಕಿ ಗುಂಡು ಹಾರಿಸಿ ಕೊಂದಿದ್ದಾರೆ.

ವಕೋಲಾ ಪೊಲೀಸ್ ಠಾಣೆ ಅಧಿಕಾರಿಗಳು ತನಿಖೆ ಕೈಗೆತ್ತಿಕೊಂಡಿದ್ದು ಸೋಮವಾರದಂದು 53 ವರ್ಷ ವಯಸ್ಸಿನ ಅಮ್ಜದ್ ಖಾನ್, 78 ವರ್ಷ ವಯಸ್ಸಿನ ರಝಾಕ್ ಖಾನ್ ಎಂಬುವವರನ್ನು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ.

ಈ ಪೈಕಿ ರಝಾಕ್ ಅವರು ಬೃಹನ್ ಮುಂಬೈ ಕಾರ್ಪೊರೇಷನ್ ನ ಮಾಜಿ ಕಾರ್ಪೊರೇಟರ್ ಆಗಿದ್ದರು ಎಂದು ತಿಳಿದು ಬಂದಿದೆ. ಮೇಲ್ನೋಟಕ್ಕೆ ಇದು ಭೂ ವಿವಾದದ ಕಾರಣಕ್ಕೆ ನಡೆದ ಹತ್ಯೆ ಎಂದು ಕಂಡು ಬರುತ್ತದೆ ಎಂದು ಮುಂಬೈನ ಡಿಸಿಪಿ ಅಶೋಕ್ ದುಧೆ ಅವರು ಹೇಳಿದ್ದಾರೆ.(ಪಿಟಿಐ)

ಮುಂಬೈನ ಮಾಜಿ ಕಾರ್ಪೊರೇಟರ್ ಬಂಧನ

ಮುಂಬೈನ ಮಾಜಿ ಕಾರ್ಪೊರೇಟರ್ ಬಂಧನ

ಸಾಂತಾಕ್ರೂಜ್ ನ ಕಾಂಗ್ರೆಸ್ ಕಾರ್ಪೊರೇಟರ್ ಆಗಿದ್ದ ರಾಝಾಕ್ ಅವರ ಭೂ ಅವ್ಯವಹಾರದ ವಿರುದ್ಧ ಕೂಡಾ ವೀರಾ ಅವರು ಹೋರಾಟ ಮಾಡಿದ್ದರು. ಸಾಂತಾಕ್ರೂಜ್ ಉಪನಗರದಲ್ಲಿನ ಅನಧಿಕೃತ ಕಟ್ಟಡಗಳು, ಭೂ ಒತ್ತುವರಿ, ಅವ್ಯವಹಾರಗಳನ್ನು ಬಯಲಿಗೆಳೆದಿದ್ದರು.

ಭೂ ಮಾಫಿಯಾಕ್ಕೆ ಬಲಿ

ಭೂ ಮಾಫಿಯಾಕ್ಕೆ ಬಲಿ

ಭೂ ಮಾಫಿಯಾಕ್ಕೆ ಬಲಿ: ಭುಪೇಂದ್ರ ಅವರ ಹತ್ಯೆಯನ್ನು ಖಂಡಿಸಿರುವ ಎಎಪಿ ನಾಯಕಿ, ಸಾಮಾಜಿಕ ಕಾರ್ಯಕರ್ತೆ ಅಂಜಲಿ ದಮಾನಿಯಾ ಅವರು ಪ್ರತಿಕ್ರಿಯಿಸಿ, ಇದು ಭೂಮಾಫಿಯಾದಲ್ಲಿ ತೊಡಗಿರುವವರ ಕೃತ್ಯವೇ ಆಗಿದ್ದು, ಹಂತಕರನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ

ವೃತ್ತಿಪರ ಹಂತಕರಿಂದಲೆ ಹತ್ಯೆ ಶಂಕೆ

ಸೈಲೆಂಸರ್ ಬಳಸಿದ ಗನ್ ಮೂಲಕ ಗುಂಡು ಹಾರಿಸಿ ವೀರಾ ಅವರನ್ನು ಹತ್ಯೆ ಮಾಡಲಾಗಿದೆ. ಇದು ವೃತ್ತಿಪರ ಹಂತಕರ ಕೃತ್ಯ.

ಮಾಜಿ ಕಾರ್ಪೊರೇಟರ್ ವಿರುದ್ಧ ಎಫ್ಐಆರ್

ವೀರಾ ಅವರ ಹತ್ಯೆಗೆ ಸಂಬಂಧಿಸಿದಂತೆ ಮಾಜಿ ಕಾರ್ಪೊರೇಟರ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ ಅಂಜಲಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Two persons, including a former corporator, were arrested on Monday morning by Mumbai Police in connection with the murder of a 72-year-old RTI activist Bhupendra Vira.
Please Wait while comments are loading...