ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈನಲ್ಲಿ ಧರೆಗುರುಳಿದ 3 ಅಂತಸ್ತಿನ ಕಟ್ಟಡ

|
Google Oneindia Kannada News

ಮುಂಬೈ, ಆಗಸ್ಟ್, 07: ಮುಂಬೈನಲ್ಲಿ ಮತ್ತೊಂದು ಕಟ್ಟಡ ಧರೆಗೆ ಉರುಳಿದೆ. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು ಸುಮಾರು 9 ಮಂದಿ ಕಟ್ಟಡದ ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

ಮುಂಬೈನ ಭಿವಾಂಡಿಯಲ್ಲಿರುವ ಹನುಮಾನ್ ಟೆಕ್ರಿ ಪ್ರದೇಶದಲ್ಲಿ ಭಾನುವಾರ ಬೆಳಗ್ಗೆ 3 ಅಂತಸ್ತಿನ ಕಟ್ಟಡ ಕುಸಿದಿದೆ. ಈ ವೇಳೆ ಕಟ್ಟಡದಲ್ಲಿ 9 ಮಂದಿ ಇದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.[ಮುಂಬೈ: 3 ಅಂತಸ್ತಿನ ಕಟ್ಟಡ ಕುಸಿತ, 7ಕ್ಕೂ ಅಧಿಕ ಮಂದಿ ಸಾವು]

2 dead as building collapses in Bhiwandi; rescue operations underway

ಪ್ರಸ್ತುತ ಘಟನಾ ಪ್ರದೇಶಕ್ಕೆ ಎನ್ ಡಿಆರ್ ಎಫ್ ತಂಡ ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ರಕ್ಷಣಾ ಕಾರ್ಯ ಮುಂದುವರಿಸಿದ್ದಾರೆ. ಕಳೆದ ವಾರ ಇದೇ ಪ್ರದೇಶದಲ್ಲಿ ಬಹುಮಹಡಿ ಕಟ್ಟಡವೊಂದು ಕುಸಿದಿತ್ತು.

ಕುಸಿದಿರುವ ಕಟ್ಟಡವನವ್ನು ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ 3 ವರ್ಷಗಳ ಹಿಂದೆಯೇ ಅಪಾಯಕಾರಿ ಕಟ್ಟಡ ಎಂದು ಘೋಷಣೆ ಮಾಡಿತ್ತು. ಆದರೂ ಮುನ್ನೆಚ್ಚರಿಕೆ ತೆಗೆದುಕೊಳ್ಳದ ಕಟ್ಟಡ ಮಾಲೀಕರು ಜನರ ವಾಸಕ್ಕೆ ಅವಕಾಶ ಮಾಡಿಕೊಟ್ಟಿದ್ದರು. ಇದೀಗ ಅವಘಡ ಸಂಭವಿಸಿದ್ದು ಯಾರು ಹೊಣೆ ಎಂಬ ಪ್ರಶ್ನೆಯೂ ಎದುರಾಗಿದೆ.

English summary
A two-storey building collapsed in the powerloom town of Bhiwandi here today with rescue workers pulling out four persons from the debris while some persons are feared trapped, officials said. According to the latest reports, two people have been killed in the incident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X