ಮುಂಬೈ ಕಟ್ಟಡ ಕುಸಿತ ದುರಂತ: ಸಾವಿನ ಸಂಖ್ಯೆ 14 ಕ್ಕೆ ಏರಿಕೆ
ಮುಂಬೈ, ಜುಲೈ 26: ಮುಂಬೈಯಲ್ಲಿ ನಿನ್ನೆ(ಜುಲೈ 25) ಸಂಭವಿಸಿದ ಕಟ್ಟಡ ಕುಸಿತದ ದುರಂತದಲ್ಲಿ ಸಾವಿಗೀಡಾದವರ ಸಂಖ್ಯೆ 14 ಕ್ಕೇರಿದೆ. ನಿನ್ನೆ ಬೆಳಿಗ್ಗೆ 10: 45 ರ ಸಮಯದಲ್ಲಿ ಮುಂಬೈನ ಲಾಲ್ ಬಹದ್ದೂರ್ ಶಾಸ್ತ್ರೀ ಮಾರ್ಗದಲ್ಲಿರುವ ದಾಮೋದರ್ ಪಾರ್ಕ್ ಬಳಿಯ ನಾಲ್ಕು ಅಂತಸ್ತಿನ ಎರಡು ಕಟ್ಟಡಗಳು ಕುಸಿದಿದ್ದವು.
ದುರಂತದಲ್ಲಿ ಮಡಿದವರ ಸಂಖ್ಯೆ 14 ಕ್ಕೇರಿದ್ದು, ಇತ್ತೀಚೆಗೆ ಸಂಭವಿಸಿದ ಭೀಕರ ದುರಂತ ಇದಾಗಿದೆ. ಈಗಾಗಲೇ 30 ಜನರನ್ನು ರಕ್ಷಿಸಲಾಗಿದ್ದು. ಇಂದೂ(ಜುಲೈ 26) ಸಹ ರಕ್ಷಣಾ ಕಾರ್ಯ ಮುಂದುವರಿದಿದೆ.

ಕಟ್ಟಡದ ಗ್ರೌಂಡ್ ಫ್ಲೋರಿನಲ್ಲಿ ನಡೆಯುತ್ತಿದ್ದ ನವೀಕರಣ ಕೆಲಸವೇ ಕಟ್ಟಡ ಕುಸಿಯಲು ಕಾರಣವಾಗಿದೆ ಎಂಬ ಮಾಹಿತಿ ದೊರಕಿದೆ. ಈ ಕಟ್ಟಡ ಶಿವಸೇನಾ ಮುಖ್ಯಸ್ಥ ಸುನಿಲ್ ಶಿತಪ್ ಎನ್ನುವವರದ್ದು ಎನ್ನಲಾಗಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.












Click it and Unblock the Notifications