• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಹಾರಾಷ್ಟ್ರದಲ್ಲಿ ಟ್ರಕ್ ಪಲ್ಟಿ; 16 ಕಾರ್ಮಿಕರ ದುರ್ಮರಣ

|

ಮುಂಬೈ, ಫೆಬ್ರುವರಿ 15: ಟ್ರಕ್ ಪಲ್ಟಿಯಾಗಿ ಹದಿನಾರು ಕಾರ್ಮಿಕರು ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದಲ್ಲಿ ಭಾನುವಾರ ಮಧ್ಯರಾತ್ರಿ ನಡೆದಿದೆ.

ಮಹಾರಾಷ್ಟ್ರದ ಜಲ್ಗಾನ್ ಜಿಲ್ಲೆಯಲ್ಲಿ ಕಿಂಗಾವ್ ಗ್ರಾಮದ ಸಮೀಪ ಕಾರ್ಮಿಕರು ಪ್ರಯಾಣಿಸುತ್ತಿದ್ದ ಟ್ರಕ್ ಉರುಳಿ ಬಿದ್ದು ಹದಿನಾರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉಳಿದ ಐವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ.

ಆಂಧ್ರ ಪ್ರದೇಶದಲ್ಲಿ ಭೀಕರ ಅಪಘಾತ; 13 ಜನರ ಸಾವು

ಮೃತಪಟ್ಟ ಕಾರ್ಮಿಕರೆಲ್ಲರೂ ಅಭೋದ, ಕೆರಾಲಾ ಹಾಗೂ ರಾವೇರ್ ಜಿಲ್ಲೆಯವರು ಎಂದು ಗುರುತಿಸಲಾಗಿದೆ. ಪಪ್ಪಾಯ ತುಂಬಿದ ಟ್ರಕ್ ನಲ್ಲಿ ಅವರೆಲ್ಲರೂ ತೆರಳುತ್ತಿದ್ದು, ಭಾನುವಾರ ಮಧ್ಯರಾತ್ರಿ ದೇವಸ್ಥಾನವೊಂದರ ಬಳಿ ಟ್ರಕ್ ಮಗುಚಿ ಬಿದ್ದಿದೆ.

ಪೊಲೀಸರು ಘಟನೆ ಕುರಿತು ತನಿಖೆ ಮುಂದುವರೆಸಿದ್ದಾರೆ. ಘಟನೆ ಕುರಿತು ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ.

English summary
16 people died and five labourers injured in a truck accident near Kingaon village in Jalgaon district of maharashtra,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X