ಬ್ಯಾಂಕ್ ಗಳ ಬಾಗಿಲಿಗೆ ಬಂದಿದ್ದು 1,39,667 ಖೋಟಾ ನೋಟುಗಳು!

By: ವಿಕಾಸ್ ನಂಜಪ್ಪ
Subscribe to Oneindia Kannada

ಮುಂಬೈ, ಡಿಸೆಂಬರ್ 3: ನವೆಂಬರ್ 10ರಿಂದ 27ರ ಮಧ್ಯೆ ಬ್ಯಾಂಕ್ ಗಳು ಅಧಿಕೃತವಾಗಿ ಪತ್ತೆ ಹಚ್ಚಿರುವ ಖೋಟಾ ನೋಟುಗಳ ಸಂಖ್ಯೆ 1,39,667. ಯಾವಾಗ 500, 1000ದ ನೋಟುಗಳನ್ನು ರದ್ದು ಮಾಡಿ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದರೋ ಅದಾದ ನಂತರ ತಮ್ಮ ನೋಟುಗಳನ್ನು ಬದಲಿಸಿಕೊಳ್ಳುವ ಸಲುವಾಗಿ ಆರಂಭವಾಯಿತು ನೋಡಿ, ಬ್ಯಾಂಕ್ ಗೆ ಜನ ಓಡೋಡಿ ಬರುವುದಕ್ಕೆ.

ಅದರೆ, ಏನು ಮಾಡ್ತೀರಾ ಆ ರೀತಿ ನೋಟುಗಳನ್ನು ತಂದವರ ಪೈಕಿ ಹಲವರ ಬಳಿ ಗೊತ್ತಿಲ್ಲದೆಯೋ ಗೊತ್ತಿದ್ದೋ ಖೋಟಾ ನೋಟುಗಳಿದ್ದವು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನೀಡಿದ ಅಂಕಿಗಳ ಪ್ರಕಾರ 1,39,667 ಖೋಟಾ ನೋಟುಗಳು ಪತ್ತೆಯಾಗಿವೆ. ಆ ಪೈಕಿ 86,621 ಐನೂರು ರುಪಾಯಿ, 53,046 ಸಾವಿರ ರುಪಾಯಿ ನೋಟು ಪತ್ತೆಹಚ್ಚಲಾಗಿದೆ.[ಬೆಂಗಳೂರು, ಮಡಿಕೇರಿ, ತುಮಕೂರಿನಲ್ಲಿ 74.50 ಲಕ್ಷ ವಶಕ್ಕೆ]

Fake currency

500, 1000ದ ನೋಟು ರದ್ದು ತೀರ್ಮಾನ ತೆಗೆದುಕೊಂಡಿದ್ದು ಕಪ್ಪು ಹಣದ ವಿರುದ್ಧ ಮಾತ್ರವಾಗಿರಲಿಲ್ಲ, ನಕಲಿ ನೋಟುಗಳ ಹಾವಳಿಯನ್ನು ಕೂಡ ತಪ್ಪಿಸುವುದಾಗಿತ್ತು. ನವೆಂಬರ್ 8ರಂದು ಆ ನೋಟುಗಳ ಅಧಿಕೃತ ಮಾನ್ಯತೆ ರದ್ದುಗೊಳಿಸಿದ ನಂತರ ನಕಲಿ ನೋಟು ಜಾಲದವರಿಗೆ ದೊಡ್ಡ ಮಟ್ಟದ ಹೊಡೆತ ಬಿದ್ದಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Banks have detected 1,39,667 pieces of fake currency between November 10 and 27. Two days after the decision to demonetise the Rs 500 and 1,000 notes were made, people made a beeline to the banks to exchange their old currency.
Please Wait while comments are loading...