ಕಾರು ಅಪಘಾತದಲ್ಲಿ ಕಟೀಲಿನ ಯುವ ಯಕ್ಷ ಪ್ರತಿಭೆ ಶ್ರೀನಿಧಿ ಅಸ್ರಣ್ಣ ಸಾವು

ಮಂಗಳೂರು, ಜುಲೈ.25: ತುಮಕೂರು ಬಳಿ ಮಂಗಳವಾರ ರಾತ್ರಿ ನಡೆದ ಕಾರು ಅಪಘಾತದಲ್ಲಿ ಕಟೀಲು ಮೂಲದ ಯುವಕರಿಬ್ಬರು ಸಾವನ್ನಪ್ಪಿದ್ದಾರೆ. ಶ್ರೀನಿಧಿ ಅಸ್ರಣ್ಣ (21), ಪ್ರಜ್ವಲ್ (21) ಮೃತ ದುರ್ದೈವಿಗಳು.

ಶ್ರೀನಿಧಿ ದಕ್ಷಿಣಕನ್ನಡ ಜಿಲ್ಲೆಯ ಕಟೀಲು ದೇವಸ್ಥಾನದ ಅರ್ಚಕ ಹರಿನಾರಾಯಣದಾಸ ಅಸ್ರಣ್ಣರ ಮಗ. ನಿಟ್ಟೆ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಯಾಗಿದ್ದ ಅವರು ಮಕ್ಕಳ ಮೇಳದಲ್ಲಿ ತುಂಬಾ ಆಕ್ಟಿವ್ ಆಗಿದ್ದರು.

ಅಷ್ಟೇ ಅಲ್ಲ, ಯಕ್ಷಗಾನದ ಹಿಮ್ಮೇಳ ಹಾಗು ಮುಮ್ಮೇಳದಲ್ಲಿ ಪರಿಣಿತಿ ಪಡೆದಿದ್ದರು.

Young Yakshagana talent Srinidhi asranna died in a car accident

ಘಟನೆಯ ವಿವರ: ರಜೆ ಹಿನ್ನೆಲೆಯಲ್ಲಿ ಸೋಮವಾರ ಮುಂಜಾನೆ ಶ್ರೀನಿಧಿ ಹಾಗೂ ಗೆಳೆಯರಾದ ಶರತ್ ಉಡುಪ, ಶರತ್ ಭಂಡಾರಿ, ಶ್ರೀನಿಧಿ, ಪ್ರಜ್ವಲ್ , ಪ್ರತೀಕ್ ಬೆಂಗಳೂರಿಗೆ ತೆರಳಿದ್ದರು.
ಬೆಂಗಳೂರಿನಲ್ಲಿ ತಿರುಗಾಡಿ ತುಮಕೂರಿಗೆ ಪ್ರತೀಕ್ ನನ್ನು ಡ್ರಾಪ್ ಮಾಡಿ, ಬೆಂಗಳೂರಿಗೆ ಹಿಂದಿರುಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

Young Yakshagana talent Srinidhi asranna died in a car accident

ಹಳ್ಳದಲ್ಲಿ ಕೊಚ್ಚಿಹೋಗಿದ್ದ ರೈತ ಪತ್ತೆ

ಆಗುಂಬೆಯ ಕಾರ್ಯಕುಂಬ್ರಿ ಕಾಲುಕುಡಿಗೆ ಗ್ರಾಮದಲ್ಲಿ ಚಂದ್ರಶೇಖರ್ ಎಂಬುವವರು ಮಂಗಳವಾರ ರಾತ್ರಿ ತೋಟಕ್ಕೆ ಹೋಗಿದ್ದಾಗ ತುಂಬಿಹರಿಯುತ್ತಿರುವ ಹಳ್ಳದಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿದ್ದರು.

ಇದೀಗ ಅವರ ಶವ ಹಳ್ಳದಲ್ಲೇ ಪತ್ತೆಯಾಗಿದ್ದು, ಆಗುಂಬೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆ ಭಾಗದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಿರುವುದರಿಂದ ರಾತ್ರಿ ಅವರ ಶವ ಪರಿಶೀಲನೆಗೆ ಹೋಗಲು ಸಾಧ್ಯವಾಗಿರಲಿಲ್ಲ.

ಚಂದ್ರಶೇಖರ್ ಅವರಿಗೆ ಸುಮಾರು 58ವರ್ಷ ವಯಸ್ಸಾಗಿದ್ದು, ಇಬ್ಬರು ಮಕ್ಕಳಿದ್ದರು. ತೋಟಕ್ಕೆ ಹೋಗಿದ್ದಾಗ ಸಿಡಿಲು ಬಡಿದು ಘಟನೆ ಸಂಭವಿಸಿರಬಹುದೆಂಬ ಶಂಕೆ ಇದೆ. ತೀರ್ಥಹಳ್ಳಿಯಲ್ಲಿ ಸುರಿಯುತ್ತಿರುವ ಮಳೆಗೆ ಇದೀಗ ಎರಡನೇ ಜೀವ ಬಲಿಯಾದಂತಾಗಿದೆ. ಕೊಪ್ಪ ಮತ್ತು ಶೃಂಗೇರಿಯಲ್ಲಿ ಈವರೆಗೆ ಮೂವರು ಬಲಿಯಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+