Get Updates
Get notified of breaking news, exclusive insights, and must-see stories!

ಕಟೀಲು ಯಕ್ಷಗಾನ ಕಾಲಮಿತಿಗೆ ಪ್ರೇಕ್ಷಕರ ಆಕ್ರೋಶ: ನ.6 ರಂದು ಪಾದಯಾತ್ರೆ

ಮಂಗಳೂರು, ನವೆಂಬರ್ 5: ಇತ್ತಿಚೇಗಷ್ಟೆ ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕ ಬಳಕೆ ಸಂಬಂಧಿಸಿ ಗದ್ದಲ ಭುಗಿಲೆದ್ದು ಸರಕಾರ ಧ್ವನಿವರ್ಧಕ ಬಳಕೆಗೆ ಮಾರ್ಗಸೂಚಿ ಹೊರಡಿಸಿರುವುದು ಎಲ್ಲರಿಗೂ ಗೊತ್ತೆ ಇದೆ. ಇದೀಗ ಈ ಆದೇಶವನ್ನು ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಯಕ್ಷಗಾನ ಮೇಳಗಳಿಗೆ ಅನ್ವಯಿಸಲು ಹೊರಟಿರುವುದು ವಿವಾದಕ್ಕೆ ಕಾರಣವಾಗಿದೆ. ರಾತ್ರಿಯಿಂದ ಬೆಳಗ್ಗಿನವರೆಗೆ ನಡೆಯುತ್ತಿದ್ದ ದೇವರ ಸೇವೆಯನ್ನು ರಾತ್ರಿ ಹತ್ತರ ಒಳಗೆ ಮುಗಿಸುವ ಆಡಳಿತ ಮಂಡಳಿಯ ನಿರ್ಧಾರಕ್ಕೆ ದೇವಿ ಭಕ್ತರಿಂದ ವಿರೋಧ ವ್ಯಕ್ತವಾಗಿದೆ.

ದಕ್ಷಿಣಕನ್ನಡ ಜಿಲ್ಲೆಯ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆರು ಯಕ್ಷಗಾನ ಮೇಳಗಳಿಂದ ಯಕ್ಷಗಾನ ಪ್ರದರ್ಶನ ನಡೆಯುತ್ತದೆ. ಕಷ್ಟ ಕಾರ್ಪಣ್ಯಗಳ ನಿವಾರಿಸಿದ ಸಲುವಾಗಿ ದೇವಿಗೆ ಹರಕೆಯಾಗಿ ಈ ಯಕ್ಷಗಾನ ಪ್ರದರ್ಶನವನ್ನು ಭಕ್ತರು ದೇವಸ್ಥಾನ ಅಥವಾ ತಮ್ಮ ಪರಿಸರದಲ್ಲಿ ಹಮ್ಮಿಕೊಳ್ಳುತ್ತಾರೆ. ರಾತ್ರಿ ಆರಂಭವಾಗುವ ಯಕ್ಷಗಾನ ಸೇವೆ ಬೆಳಗ್ಗಿನವರೆಗೂ ನಡೆಯುತಿತ್ತು.

ಆದರೆ ಅಜಾನ್ ವಿವಾದ ಶುರುವಾದ ಬಳಿಕ ಸರಕಾರ ರಾತ್ರಿ 10:30ರ ನಂತರ 50 ಡೆಸಿಬಲ್‌ಗಿಂತ ಹೆಚ್ಚಿನ ಧ್ವನಿವರ್ಧಕ ಬಳಸದಂತೆ ಆದೇಶ ಹೊರಡಿಸಿತ್ತು. ಈ ಆದೇಶದನ್ವಯ ರಾತ್ರಿಯಿಡಿ ನಡೆಯುತ್ತಿದ್ದ ಯಕ್ಷಗಾನವನ್ನು ಸಂಜೆ ಐದು ಗಂಟೆಗೆ ಆರಂಭಿಸಿ ರಾತ್ರಿ 10ರ ಒಳಗೆ ಮುಗಿಸುವುದಕ್ಕೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ ನಿರ್ಧರಿಸಿದೆ. ದೇವಿಯ ಮುಂದೆ ಕಾಲಮಿತಿ ಯಕ್ಷಗಾನ ನಡೆಸುವ ಬಗ್ಗೆ ಹೂಪ್ರಶ್ನೆ ಇಟ್ಟಾಗ ದೇವಿಯು ಈ ನಿರ್ಧಾರಕ್ಕೆ ಒಪ್ಪಿಗೆ ನೀಡಿದೆ ಎನ್ನುವುದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಅರ್ಚಕರಾದ ಹರಿ‌ನಾರಾಯಣ ಅಸ್ರಣ್ಣರ ವಾದವಾಗಿದೆ.

 ಕಾಲಮಿತಿಗೆ ಭಕ್ತರ ಖಂಡನೆ

ಕಾಲಮಿತಿಗೆ ಭಕ್ತರ ಖಂಡನೆ

ಆಡಳಿತ ಮಂಡಳಿಯ ಈ ನಿರ್ಧಾರವನ್ನು ಕಟೀಲು ಯಕ್ಷಸೇವಾ ಸಮನ್ವಯ ಸಮಿತಿ ಸೇರಿದಂತೆ ಯಕ್ಷಗಾನ ಸೇವೆ ನಡೆಸುವ ಕೆಲ ಭಕ್ತರು ಖಂಡಿಸಿದ್ದಾರೆ. ಕಟೀಲು ತಾಯಿ ರಾತ್ರಿಯ ಪೂಜೆಯ ನಂತರ ಕಟೀಲು ಮೇಳದ ಯಕ್ಷಗಾನ ವೀಕ್ಷಿಸಲು ತೆರಳುತ್ತಾಳೆ ಎಂಬುದು ಸಾರ್ವತ್ರಿಕ ನಂಬಿಕೆ. ಹೀಗಾಗಿ ಕಾಲಮಿತಿ ಯಕ್ಷಗಾನ ನಿರ್ಧಾರದಿಂದ ಮೂಲ ಆಶಯ ಸೊರಗಿ ಜನರ ಧಾರ್ಮಿಕ ನಂಬಿಕೆಗೆ ಘಾಸಿಯಾಗಿದೆ ಎಂದಿ ಶ್ರೀ ಕಟೀಲು ಯಕ್ಷಸೇವಾ ಸಮನ್ವಯ ಸಮಿತಿ ಮುಖಂಡರಾದ ಸುಧಾಕರ್ ಕಾಮತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ನವೆಂಬರ್ 6ಕ್ಕೆ ಕಟೀಲಿಗೆ ಪಾದಯಾತ್ರೆ

ನವೆಂಬರ್ 6ಕ್ಕೆ ಕಟೀಲಿಗೆ ಪಾದಯಾತ್ರೆ

ಈ ನಿರ್ಧಾರವನ್ನು ಖಂಡಿಸಿ ಇದೇ 6 ತಾರೀಖಿನಂದು ನಗರ ಹೊರವಲಯದ ಬಜಪೆಯಿಂದ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ದೇವಿಯ ಮುಂದೆ ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಿ ಈ ನಿರ್ಧಾರವನ್ನು ವಾಪಾಸು ತೆಗೆದುಕೊಳ್ಳುವಂತೆ ಸರಕಾರವನ್ನು ಸಹ ಒತ್ತಾಯ ಮಾಡಲಿದ್ದಾರೆ.

 ಯಕ್ಷಗಾನದಿಂದ ವಾರ್ಷಿಕ ಕೋಟ್ಯಂತರ ಆದಾಯ

ಯಕ್ಷಗಾನದಿಂದ ವಾರ್ಷಿಕ ಕೋಟ್ಯಂತರ ಆದಾಯ

ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶವತಾರ ಯಕ್ಷಗಾನ ಮಂಡಳಿ ಆರು ಮೇಳಗಳನ್ನು ಹೊಂದಿದ್ದು, ಮುಂದಿನ 20 ವರ್ಷಗಳ‌ಕಾಲ ಎಲ್ಲಾ ಮೇಳಗಳು ಮುಂಗಡ ಬುಕ್ ಆಗಿದೆ. ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಸೇವೆಯ ಯಕ್ಷಗಾನಕ್ಕೆ 65 ಸಾವಿರ ರೂಪಾಯಿ ದರವಾಗಿದ್ದು, ಪ್ರಸಂಗ ಅನುಸಾರವಾಗಿ ದರವಿದೆ. ವಾರ್ಷಿಕ ಕೋಟ್ಯಾಂತರ ರೂಪಾಯಿ ಆದಾಯ ಯಕ್ಷಗಾನದಿಂದ ಹರಿದು ಬರುತ್ತದೆ.

 ಕಾಲಮಿತಿ ನಿರ್ಧಾರದಿಂದ ಹಿಂದೆ ಸರಿಯೋದು ಬೇಡ

ಕಾಲಮಿತಿ ನಿರ್ಧಾರದಿಂದ ಹಿಂದೆ ಸರಿಯೋದು ಬೇಡ

ಕಟೀಲು ಮೇಳದ ಕಲಾವಿದರಿಂದ ಕಾಲಮಿತಿಗೆ ಒಪ್ಪಿಗೆ ಸಿಕ್ಕಿದ್ದು,ಈ ಬಗ್ಗೆ ಮೇಳದ ಕಲಾವಿದ ತಾರನಾಥ ವರ್ಕಾಡಿ ಮೇಳದ ಮುಖ್ಯಸ್ಥರಿಗೆ ಪತ್ರ ಬರೆದಿದ್ದಾರೆ. ಕಾಲಮಿತಿಯಿಂದ ಕಲಾವಿದರ ಆರೋಗ್ಯವೂ ಸುಧಾರಣೆಯಾಗುತ್ತದೆ. ಬೆಳಗ್ಗೆ ಬೇರೆ ಕೆಲಸಕ್ಕೆ ಹೋಗಿ ಸಂಜೆ ಯಕ್ಷಗಾನ ಸೇವೆ ಮಾಡುವವರಿಗೂ ಉಪಕಾರ ಆಗುತ್ತದೆ. ದೇವಸ್ಥಾನದ ಆಡಳಿತ ಮಂಡಳಿ ಕಾಲಮಿತಿ ನಿರ್ಧಾರದಿಂದ ಹಿಂದೆ ಸರಿಯೋದು ಬೇಡ ಎನ್ನುವುದು ಕಟೀಲು ಮೇಳದ ಆಡಳಿತ ಮಂಡಳಿಗೆ ಕಟೀಲು ಯಕ್ಷಗಾನ ಕಲಾವಿದ ತಾರನಾಥ ವರ್ಕಾಡಿ ಪತ್ರದಲ್ಲಿ ಉಲ್ಲೇಖವಾಗಿದೆ.

ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಗೆ ಸುಮಾರು ಎರಡು ಶತಮಾನಗಳ ಇತಿಹಾಸವಿದ್ದು, ಒಟ್ಟು ಆರು ಮೇಳಗಳು ಇದೆ. ಈ ಬಾರಿಯ ತಿರುಗಾಟ ಕೆಲ ದಿನಗಳಲ್ಲಿ ಆರಂಭವಾಗಲಿದ್ದು ಭಕ್ತರ ಅಭಿಪ್ರಾಯಕ್ಕೆ ಆಡಳಿತ ಮಂಡಳಿ ಮನ್ನಣೆ ನೀಡುತ್ತಾ ಎಂದು ಕಾದುನೋಡಬೇಕಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+