ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಎಂ ರಾಜೀನಾಮೆ ಹೇಳಿಕೆ ಬಗ್ಗೆ ಸಚಿವ ಯುಟಿ ಖಾದರ್ ಕೊಟ್ಟ ಪ್ರತಿಕ್ರಿಯೆ

|
Google Oneindia Kannada News

ಮಂಗಳೂರು, ಜನವರಿ 28: ಸಿಎಂ, ಡಿಸಿಎಂ, ಸಿದ್ದರಾಮಯ್ಯ ನಾವೆಲ್ಲಾ ಒಂದು ಟೀಮ್ ಆಗಿ ಕೆಲಸ ಮಾಡುತ್ತಿದ್ದೇವೆ. ಕಾಂಗ್ರೆಸ್ - ಜೆಡಿಎಸ್ ಮಧ್ಯೆ ಬಿರುಕು ಮೂಡಿಸಲು ಸಾಧ್ಯವಿಲ್ಲ ಎಂದು ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ಯುಟಿ ಖಾದರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಸಿಎಂ ಎಚ್ ಡಿ ಕುಮಾರಸ್ವಾಮಿ ರಾಜೀನಾಮೆ ಹೇಳಿಕೆ ನನಗೆ ತಿಳಿದಿಲ್ಲ. ನಾನು ಪ್ರತಿಭಟನಾ ಪಾದಯಾತ್ರೆ ಯಲ್ಲಿ ಇದ್ದೇನೆ. ಆದರೆ ಕುಮಾರಸ್ವಾಮಿ ಖಂಡಿತವಾಗ್ಯೂ ಆ ರೀತಿ ಹೇಳಲು ಸಾಧ್ಯವಿಲ್ಲ. ಹಾಗೆ ಹೇಳಿದ್ದನ್ನು ನಾನು ಕಿವಿಯಲ್ಲಿ ಕೇಳಿಯೂ ಇಲ್ಲ, ನೋಡಿಯೂ ಇಲ್ಲ ಎಂದರು.

we are working as one team:U T Khader

ರಾಜೀನಾಮೆಗೆ ಸಿದ್ಧ: ಎಚ್ಡಿಕೆ ಶಾಕಿಂಗ್ ಹೇಳಿಕೆಗೆ ಕಾರಣವೇನು?ರಾಜೀನಾಮೆಗೆ ಸಿದ್ಧ: ಎಚ್ಡಿಕೆ ಶಾಕಿಂಗ್ ಹೇಳಿಕೆಗೆ ಕಾರಣವೇನು?

ಕುಮಾರಸ್ವಾಮಿ ಪ್ರಬುದ್ಧ ರಾಜಕಾರಣಿ. ಅವರು ಯಾವಾಗಲೂ ಯೋಚಿಸಿ ಮಾತನಾಡುತ್ತಾರೆ. ಅವರು ಈ ಹಿಂದೆ ಬಿಜೆಪಿ ಜೊತೆ ಹೋಗಿ ಕಿರುಕುಳ ಅನುಭವಿಸಿ ಬಂದಿದ್ದಾರೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಆರು ಜನ ಮಂತ್ರಿ ಸ್ಥಾನ ಬಿಟ್ಟು ಬಂದಿರುವ ಉದಾಹರಣೆಗಳಿವೆ . ಹೀಗಾಗಿ ಯಾರೂ ಕೂಡ ಬಿಜೆಪಿ ಜೊತೆ ಹೋಗುವುದಿಲ್ಲ. ಸುಮ್ಮನೆ ಹೋಗಿ ರಾಜಕೀಯ ಭವಿಷ್ಯ ಹಾಳು ಮಾಡ್ಕೋಬೇಡಿ ಅಂತ ಮನವಿ ಮಾಡ್ತೀನಿ ಎಂದು ಖಾದರ್ ಪ್ರತಿಕ್ರಿಯಿಸಿದ್ದಾರೆ.

English summary
Dakshina Kannada district incharge minister UT Khader reacted over CM Kumaraswamy statement. Khadar said we are working as one team. No problem in the coalition government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X