ರಾಹುಲ್ ಗಾಂಧಿ ಆದರೂ ಸರಿ, ಉಳ್ಳಾಲದಲ್ಲಿ ಹಿಂದೂ ಶಾಸಕನಾಗಲಿ; ವಿಎಚ್‌ಪಿ ಅಭಿಯಾನ
ಮಂಗಳೂರು, ಏಪ್ರಿಲ್ 29: ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲೇ ಕರಾವಳಿಯಲ್ಲಿ ಮತ್ತೊಂದು ಧರ್ಮ ದಂಗಲ್ ಶುರುವಾಗಿದೆ. ಆದರೆ ಈ ಬಾರಿ 'ಹಿಂದೂ ಶಾಸಕ'ನ ಆಯ್ಕೆಗಾಗಿ ಹಿಂದೂ ಸಂಘಟನೆಗಳು ಅಭಿಯಾನ ಆರಂಭಿಸಿದ್ದು, ವಿಪಕ್ಷ ಉಪನಾಯಕ ಯು.ಟಿ. ಖಾದರ್ ಕ್ಚೇತ್ರದಲ್ಲೇ ವಿಎಚ್‌ಪಿ-ಬಜರಂಗದಳ ಫೀಲ್ಡ್‌ಗಿಳಿದಿದೆ.
'ಹಿಂದೂ ಶಾಸಕ' ಅಭಿಯಾನಕ್ಕೆ ವಿಎಚ್‌ಪಿ ವಿಭಾಗ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಕರೆ ನೀಡಿದ್ದು, "ಮಾಜಿ ಸಚಿವ ಯು.ಟಿ. ಖಾದರ್ ಬದಲಾವಣೆಗೆ ವಿಎಚ್‌ಪಿ ಅಭಿಯಾನ ನಡೆಸುತ್ತಿದೆ. 'ಉಳ್ಳಾಲದಲ್ಲಿ ಹಿಂದೂಗಳ ಪರ ಧ್ವನಿ ಎತ್ತಲು ಹಿಂದೂ ಶಾಸಕ ಇರಲಿ, ಮುಂದಿನ ಚುನಾವಣೆಯಲ್ಲಿ ಉಳ್ಳಾಲದಲ್ಲಿ ಹಿಂದೂ ಶಾಸಕನ ಗೆಲ್ಲಿಸಲು ವಿಎಚ್‌ಪಿ ಈ ಅಭಿಯಾನ ನಡೆಸ್ತಿದೆ," ಅಂತ ವಿಎಚ್‌ಪಿ ಮುಖಂಡ ಶರಣ್ ಪಂಪ್‌ವೆಲ್ ಹೇಳಿದ್ದಾರೆ.
ಬಿಜೆಪಿ, ಕಾಂಗ್ರೆಸ್ ಯಾವುದೇ ಪಕ್ಷದಲ್ಲಿ ಹಿಂದೂ ಶಾಸಕ ಬರಲಿ. ಉಳ್ಳಾಲದಲ್ಲಿ ರಾಹುಲ್ ಗಾಂಧಿಯೇ ನಿಲ್ಲಲಿ, ಕಾಂಗ್ರೆಸ್ ಹಿಂದೂವನ್ನು ನಿಲ್ಲಿಸಿ ಗೆಲ್ಲಿಸಲಿ. ಉಳ್ಳಾಲದಲ್ಲಿ ಹಲವು ವರ್ಷಗಳಿಂದ ಒಂದೇ ಕುಟುಂಬದ ಮುಸ್ಲಿಂ ಶಾಸಕರಿದ್ದಾರೆ. ಉಳ್ಳಾಲ ಕಾಂಗ್ರೆಸ್‌ನಲ್ಲಿ ಸಾಕಷ್ಟು ಹಿಂದೂಗಳಿದ್ದು, ಅವರಿಗೆ ಅವಕಾಶ ಕೊಡಿ. ಉಳ್ಳಾಲದಲ್ಲಿ 50% ಮುಸಲ್ಮಾನರಿದ್ದು, ಹಿಂದೂಗಳಿಗೆ ಬದುಕಲು ಕಷ್ಟ ಇದೆ. ಕಾಂಗ್ರೆಸ್ ಹಿಂದೂವಿಗೆ ಟಿಕೆಟ್ ಕೊಟ್ಟು ಗೆಲ್ಲಿಸಿದರೂ ವಿಎಚ್‌ಪಿ ಸ್ವಾಗತ ಅಂತ ಯು.ಟಿ. ಖಾದರ್ ತವರು ಕ್ಷೇತ್ರದಲ್ಲೇ ವಿಎಚ್‌ಪಿ ಧರ್ಮ ದಂಗಲ್ ಬೆಂಕಿ ಹೊತ್ತಿಸಿದೆ.

1978ರಿಂದ ಅತೀ ಹೆಚ್ಚಿನ ಅವಧಿಗೆ ಮುಸ್ಲಿಂ ಶಾಸಕರೇ ಆಯ್ಕೆ
ಇನ್ನು 1978ರಿಂದ ಅತೀ ಹೆಚ್ಚಿನ ಅವಧಿಗೆ ಮುಸ್ಲಿಂ ಶಾಸಕರೇ ಆಯ್ಕೆಯಾದ ಕ್ಷೇತ್ರ ಉಳ್ಳಾಲವಾಗಿದ್ದು, ಸದ್ಯ ಮಂಗಳೂರು ವಿಧಾನಸಭಾ ಕ್ಷೇತ್ರವಾಗಿ ಬದಲಾಗಿದೆ. 1978ರಲ್ಲಿ ಯು.ಟಿ. ಖಾದರ್ ತಂದೆ ಯು.ಟಿ. ಫರೀದ್ ಶಾಸಕರಾಗಿ ಆಯ್ಕೆಯಾದರೆ, 1983 ಸಿಪಿಐ(ಎಂ) ರಾಮಚಂದ್ರ ರಾವ್, 1985-1989 ಕಾಂಗ್ರೆಸ್‌ನಿಂದ ಬಿ.ಎಂ. ಇದ್ದಿನಬ್ಬ ಆಯ್ಕೆಯಾಗಿದ್ದರು.
1994-99ರವರೆಗೆ ಬಿಜೆಪಿಯ ಏಕೈಕ ಅಭ್ಯರ್ಥಿ ಜಯರಾಮ್ ಶೆಟ್ಟಿ ಶಾಸಕರಾಗಿದ್ದರು.1999 ರಿಂದ 2004 ರವರೆಗೆ ಮತ್ತೆ ಯು.ಟಿ. ಫರೀದ್ ಶಾಸಕರಾಗಿದ್ದು, 2007ರಿಂದ ಈವರೆಗೆ ಯು.ಟಿ. ಖಾದರ್ ಶಾಸಕರಾಗಿ ಅಧಿಕಾರದಲ್ಲಿದ್ದಾರೆ. 1999ರಿಂದ ಉಳ್ಳಾಲದ ಶಾಸಕ ಸ್ಥಾನ ಖಾದರ್ ಕುಟುಂಬದ ಕೈ ತಪ್ಪಿಲ್ಲ ಎನ್ನುವುದು ವಿಶೇಷ.
ಖಾದರ್ ಕ್ಷೇತ್ರದಲ್ಲಿ ಹಿಂದೂ ಶಾಸಕನ ಆಯ್ಕೆಗಾಗಿ ಹಿಂದೂ ಸಂಘಟನೆಗಳ ಅಭಿಯಾನ ವಿಚಾರ ವಿಪಕ್ಷ ಉಪನಾಯಕ ಯು.ಟಿ. ಖಾದರ್ ಪ್ರತಿಕ್ರಿಯೆ ನೀಡಿದ್ದು, ಕೋಮುವಾದಿಗಳಿಗೆ ಉಳ್ಳಾಲದ ಮಣ್ಣಿನಲ್ಲಿ ಅವಕಾಶ ಕೊಡಲ್ಲ. ಉಳ್ಳಾಲದ ಶಾಸಕ ಯಾರಾಗಬೇಕು ಅಂತ ಸರ್ವ ಧರ್ಮದ ಮತದಾರರು ತೀರ್ಮಾನಿಸುತ್ತಾರೆ. ಹೊರಗಿನವರು ಬಂದು ಮಾತನಾಡಿದರೆ ಏನೂ ಪ್ರಯೋಜನ ಇಲ್ಲ ಎಂದು ಹೇಳಿದ್ದಾರೆ.

ಎಲ್ಲಾ ಜಾತಿ-ಧರ್ಮದ ಜೊತೆ ಇದ್ದುಕೊಂಡೇ ನಾನು ರಾಜಕೀಯ ಮಾಡಿದ್ದೇನೆ. ತಂದೆ ಶಾಸಕರಾಗಿದ್ದರೂ ನಾನು ಜನಾರ್ದನ ಪೂಜಾರಿ ತತ್ವ ಆದರ್ಶದಿಂದ ಬೆಳೆದವನು. ನನ್ನ ಮನೆ, ಕಚೇರಿಗೆ ಬಂದವರಿಗೆ ಯಾವ ಜಾತಿ-ಧರ್ಮ ಅಂತ ಕೇಳಿದವನಲ್ಲ. ಕ್ಷೇತ್ರ ವ್ಯಾಪ್ತಿಯ ದೇವಸ್ಥಾನ, ಮಸೀದಿ, ಚರ್ಚ್‌ಗಳಿಗೆ ರಸ್ತೆ ಮತ್ತು ಮೂಲಭೂತ ಸೌಕರ್ಯ ಮಾಡಿದ್ದೇನೆ. ಪಕ್ಷದ ಎಲ್ಲಾ ಧರ್ಮದ ಕಾರ್ಯಕರ್ತರು, ಮುಖಂಡರು, ಮತದಾರರು ಸೌಹಾರ್ದತೆಯಿಂದ ಇದ್ದಾರೆ ಎಂದರು.
ರಾಜಕೀಯಕ್ಕೋಸ್ಕರ ಜನರನ್ನು ವಿಭಾಗ ಮಾಡಲು ಹೋಗಬೇಡಿ
ಕೋಮುವಾದಿಗಳಿಗೆ ಉಳ್ಳಾಲದ ಮಣ್ಣಿನಲ್ಲಿ ಅವಕಾಶ ಕೊಡಲ್ಲ. ಚುನಾವಣೆ ಬಂದಾಗ ಒಂದೊಂದು ಅಭಿಯಾನ, ವಿಚಾರ ತರುತ್ತಾರೆ. ಹಿಂದೆಯೂ ಆಂತರಿಕವಾಗಿ ಮಾಡಿದ್ದರು, ಈ ಬಾರಿ ಬಹಿರಂಗವಾಗಿ ಮಾಡಿದ್ದಾರೆ. ನನ್ನ ಕ್ಷೇತ್ರ ಸೌಹಾರ್ದತೆಯ ಸರ್ವಧರ್ಮೀಯರು ಪ್ರೀತಿಸುವ ಕ್ಷೇತ್ರ. ಅಲ್ಲಿ ಎಲ್ಲ ಜಾತಿ-ಧರ್ಮವನ್ನು ಪ್ರೀತಿಸುವರನ್ನು ಶಾಸಕರನ್ನಾಗಿ ಜನ ಗೆಲ್ಲಿಸುತ್ತಾರೆ. ರಾಜಕೀಯಕ್ಕೋಸ್ಕರ ಜನರನ್ನು ವಿಭಾಗ ಮಾಡಲು ಹೋಗಬೇಡಿ. ಜನರ ಸೌಹಾರ್ದತೆ ಹಾಳು ಮಾಡುವುದು ದೇಶದ್ರೋಹಿಗಳ ಕೆಲಸ. ಕಾಂಗ್ರೆಸ್ ಮುಂದೆ ನನ್ನನ್ನೇ ನಿಲ್ಲಿಸುತ್ತದೆ ಅಂತ ಹೇಳಲು ಆಗಲ್ಲ ಎಂದು ಯು.ಟಿ. ಖಾದರ್ ಹೇಳಿದ್ದಾರೆ.

ಕಾಂಗ್ರೆಸ್ ಅಲ್ಲಿ ಯಾರಿಗೂ ಮುಂದೆ ಟಿಕೆಟ್ ಕೊಡಬಹುದು. ಮಹಿಳೆಯರು ಅಥವಾ ಯಾರಿಗೂ ಪಕ್ಷ ಮುಂದೆ ಟಿಕೆಟ್ ಕೊಡಬಹುದು. ಆದರೆ ಕಾಂಗ್ರೆಸ್ ಯಾರನ್ನೇ ನಿಲ್ಲಿಸಿದ್ರೂ ಆ ಕ್ಷೇತ್ರದ ಜನ ಗೆಲ್ಲಿಸ್ತಾರೆ. ಪಕ್ಷ ಮುಂದೆ ಅಲ್ಲಿ ಬದಲಾಯಿಸಲೂಬಹುದು, ಏನೇ ಮಾಡಿದರೂ ಸಂತೋಷ. ವಿಎಚ್‌ಪಿ ಒಂದು ಬಿಜೆಪಿಯ ಅಂಗಸಂಸ್ಥೆ. ಅದರಲ್ಲಿ 80% ಹಿಂದೂ ಸಹೋದರರು ಇಲ್ಲ, ಕೇವಲ 20% ಇದ್ದು, ಉಳಿದ ಎಲ್ಲರೂ ಪ್ರೀತಿ ವಿಶ್ವಾಸದಿಂದ ಜೊತೆ ಇದ್ದಾರೆ. ರಾಜಕೀಯಕ್ಕಾಗಿ ಇಬ್ಭಾಗ ಮಾಡಬೇಡಿ, ಅಲ್ಲಿ ರಕ್ತ ಚೆಲ್ಲಬೇಡಿ. ಜನರ ಶಾಂತಿ ನೆಮ್ಮದಿಗಾಗಿ ಬೇಕಾದರೆ ನಾನು ದೂರ ನಿಲ್ಲಲು ಸಿದ್ಧ ಎಂದು ತಿರುಗೇಟು ನೀಡಿದ್ದಾರೆ.
1994ರಲ್ಲಿ ಬಿಜೆಪಿಯಿಂದ ಜಯರಾಮ್ ಶೆಟ್ಟಿ ಮಾತ್ರ ಜಯ
ಮುಸ್ಲಿಂ ಜನಸಂಖ್ಯೆಯೇ ಅಧಿಕವಾಗಿರುವ ಉಳ್ಳಾಲ ವಿಧಾನಸಭಾ ಕ್ಷೇತ್ರದಲ್ಲಿ ಶೇ.58ರಷ್ಟು ಮುಸ್ಲಿಂ ಜನಸಂಖ್ಯೆ ಇದೆ. ಹಿಂದೂಗಳು 34% ಕ್ರಿಶ್ಚಿಯನ್ 7% ರಷ್ಟಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 19,739 ಮತಗಳ ಅಂತರದಿಂದ ಸೋಲು ಕಂಡಿತ್ತು. ಲೋಕಸಭಾ ಚುನಾವಣೆಯಲ್ಲೂ 11 ಸಾವಿರ ಮತಗಳ ಹಿನ್ನಡೆಯನ್ನು ಕಂಡಿತ್ತು. ಉಳ್ಳಾಲ ವಿಧಾನಸಭಾ ಕ್ಷೇತ್ರದಿಂದ ಈವೆರೆಗೆ ಕೇವಲ ಇಬ್ಬರು ಹಿಂದೂ ಅಭ್ಯರ್ಥಿಗಳು ಮಾತ್ರ ಜಯ ಕಂಡಿದ್ದರು. 1983ರಲ್ಲಿ ಸಿಪಿಐಎಂನಿಂದ ರಾಮಚಂದ್ರರಾವ್ 1994ರಲ್ಲಿ ಬಿಜೆಪಿಯಿಂದ ಜಯರಾಮ್ ಶೆಟ್ಟಿ ಮಾತ್ರ ಜಯ ಕಂಡಿದ್ದರು. ಆ ಬಳಿಕ ಎಲ್ಲಾ ಅವಧಿಯಲ್ಲೂ ಮುಸ್ಲಿಂ ಶಾಸಕರು ಜಯಭೇರಿ ಗಳಿಸಿದ್ದಾರೆ.
ಯು.ಟಿ. ಖಾದರ್ ತಂದೆ ಯು.ಟಿ. ಫರೀದ್ ಜಯ ಮೂರು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದಾರೆ. 2007ರಿಂದ ನಿರಂತರವಾಗಿ ಯು.ಟಿ. ಖಾದರ್ ಜಯಗಳಿಸಿದ್ದಾರೆ.
ಯು.ಟಿ. ಖಾದರ್ ಮಣಿಸಲು ಬಿಜೆಪಿಗೆ ಅಸಾಧ್ಯ ಎಂಬ ಮಾತು ಸದ್ಯ ಉಳ್ಳಾಲದಲ್ಲಿ ಪ್ರಚಲಿತದಲ್ಲಿದೆ. ಈ ಹಿನ್ನಲೆಯಲ್ಲಿ ಕಾಂಗ್ರೆಸ್‌ನಿಂದಾದರೂ ಸರಿ ಹಿಂದೂ ಅಭ್ಯರ್ಥಿ ಗೆಲ್ಲಲಿ ಅನ್ನುವುದು ವಿಎಚ್‌ಪಿ ಅಭಿಯಾನಯಾಗಿದೆ. ಉಳ್ಳಾಲ ಕ್ಷೇತ್ರದಲ್ಲಿ ಹಿಂದೂಗಳಿಗೆ ಧ್ವನಿ ಇಲ್ಲ ಎಂಬುದು ಹಿಂದೂ ಸಂಘಟನೆಗಳ ವಾದವಾಗಿದೆ. ಆದರೆ ಖಾದರ್ ವರ್ಚಸ್ಸಿನ ಬಗ್ಗೆ ಕ್ಷೇತ್ರದ ಹಿಂದೂಗಳಿಂದಲೇ ಮೆಚ್ಚುಗೆ ವ್ಯಕ್ತವಾಗಿದೆ. ದೇವಸ್ಥಾನ, ದೈವಸ್ಥಾನ ಸೇರಿದಂತೆ ಪ್ರತೀ ಹಿಂದೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಖಾದರ್, ಹಿಂದೂ ವಿರೋಧಿ ಶಾಸಕ ಅನ್ನಿಸಲು ಯಾವುದೇ ಕಾರಣ ಸದ್ಯಕ್ಕೆ ಇಲ್ಲ ಅನ್ನೋದು ಗಮನಾರ್ಹ.
-
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video












Click it and Unblock the Notifications