Get Updates
Get notified of breaking news, exclusive insights, and must-see stories!

ಬಿಕೋ ಎನ್ನುತ್ತಿರುವ ಮಂಗಳೂರು ಮಾರ್ಕೆಟ್, ಸಮಯಕ್ಕೆ ಬಾರದ ತರಕಾರಿಗಳು

ಮಂಗಳೂರು, ಆಗಸ್ಟ್.20: ಮಂಗಳೂರು ಮಾರ್ಕೆಟ್ ಅಂದ್ರೆ ಜನಜಂಗುಳಿಯಿಂದ ತುಂಬಿ ತುಳುಕುತಿರುತಿತ್ತು. ಅದರಲ್ಲೂ ಸೆಂಟ್ರಲ್ ಮಾರ್ಕೆಟ್ ಅಂದ್ರೆ ತರಕಾರಿ, ಹಣ್ಣುಗಳಿಗೆ ಫೇಮಸ್. ಆದರೆ ಈ ಮಾರ್ಕೆಟ್ ನಲ್ಲಿ ಇದೀಗ ಬೆರಳೆಣಿಕೆಯಷ್ಟು ಮಾತ್ರ ತರಕಾರಿಗಳು ಕಾಣಸಿಗುತ್ತಿವೆ.

ಸಮಯಕ್ಕೆ ಸರಿಯಾಗಿ ತರಕಾರಿಗಳು ಮಾರ್ಕೆಟ್ ಗೆ ಸೇರದೇ, ಸಮಯ ಮೀರಿ ತರಕಾರಿಗಳು ಮಾರ್ಕೆಟ್ ಸೇರುತ್ತಿರುವುದರಿಂದ ತರಕಾರಿಗಳೆಲ್ಲ ಕೊಳೆತು ಹೋಗುತ್ತಿದ್ದು, ಇದರಿಂದಾಗಿ ವ್ಯಾಪಾರಸ್ಥರು ಕಂಗಾಲಾಗಿದ್ದಾರೆ.

ಕರಾವಳಿ, ಮಲೆನಾಡಿನಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಇಡೀ ಜನಜೀವನ ಅಸ್ತವ್ಯಸ್ತಗೊಂಡಿದೆ. ತಿನ್ನಲು ಅನ್ನ, ಆಹಾರ ಇಲ್ಲದೆ ಜನತೆ ಕಂಗಾಲಾಗಿ ಹೋಗಿದ್ದಾರೆ. ಮಳೆ ಅವಾಂತರಕ್ಕೆ ನಾನಾ ರೀತಿಯ ತೊಂದರೆಗಳು ಎದುರಾಗುತ್ತಿದ್ದಂತೆ ಇದೀಗ ಮಳೆಯ ಎಫೆಕ್ಟ್ ಮಂಗಳೂರು ಸೆಂಟ್ರಲ್ ಮಾರುಕಟ್ಟೆಗೂ ತಟ್ಟಿದೆ.

Vegetables are not coming to the Mangalore market on time

ಶಿರಾಡಿ ಘಾಟ್, ಚಾರ್ಮಾಡಿ ಘಾಟ್ ರಸ್ತೆ ಬಂದ್ ಆಗಿರುವುದರಿಂದ ತರಕಾರಿಗಳು ಜಿಲ್ಲೆಗೆ ಆಮದಾಗುತ್ತಿಲ್ಲ. ಮಾರುಕಟ್ಟೆಯಲ್ಲಿ ತರಕಾರಿ ಶೇಖರಣೆ ಕಡಿಮೆಯಾಗುತ್ತಿದ್ದು, ವ್ಯಾಪಾರಸ್ಥರು ಕಂಗಾಲಾಗಿದ್ದಾರೆ. ಸದ್ಯ ಮಂಗಳೂರು-ಬೆಂಗಳೂರು ನಡುವೆ ಯಾವುದೇ ರೀತಿಯ ಸಂಚಾರ ವ್ಯವಸ್ಥೆ ಇಲ್ಲದೆ ಇರುವುದು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿದೆ.

ಸಮಯಕ್ಕೆ ಸರಿಯಾಗಿ ತರಕಾರಿಗಳು ಮಾರ್ಕೆಟ್ ಗೆ ಬಾರದೆ ಮಾರುಕಟ್ಟೆ ಬಿಕೋ ಎನಿಸುತ್ತಿದೆ. ಸಮಯ ಮೀರಿ ಬಂದಂತಹ ತರಕಾರಿಗಳು ಹಾಳಾಗುತ್ತಿದೆ. ಹಾಗಾಗಿ ತರಕಾರಿ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ವ್ಯಾಪಾರಸ್ಥ ಬಶೀರ್.

Vegetables are not coming to the Mangalore market on time

ಒಟ್ಟಿನಲ್ಲಿ, ಭೀಕರ ವರುಣನ ಅಬ್ಬರಕ್ಕೆ ಜಿಲ್ಲೆಯ ಜನರು ಇತರೆ ಜಿಲ್ಲೆಯ ಸಂಪರ್ಕ ಕಳೆದುಕೊಂಡಿರುವುದು ಮಾತ್ರವಲ್ಲದೆ, ತರಕಾರಿ ಹಣ್ಣು ಹಂಪಲುಗಳಿಗಾಗಿ ಪರದಾಡುವಂತಾಗಿದೆ. ಸದ್ಯಕ್ಕೆ ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಜಿಲ್ಲೆಯಲ್ಲಿ ತರಕಾರಿ ಬೆಲೆ ಗಗನಕ್ಕೇರುವ ಸಾಧ್ಯತೆ ಇದ್ದು, ಜನಜೀವನ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+