ಕುಕ್ಕೆ ಸುಬ್ರಮಣ್ಯ ಭಕ್ತರ ಗಮನಕ್ಕೆ: ವಿವಿಧ ಸೇವೆಗಳು ವ್ಯತ್ಯಯ, ದಿನಾಂಕಗಳು
ಮಂಗಳೂರು, ನವೆಂಬರ್ 24: ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಕುಕ್ಕೆ ಸುಬ್ರಮಣ್ಯ ದೇವಾಲಯಕ್ಕೆ ಭೇಟಿ ನೀಡುವ ಭಕ್ತರಿಗೆ ಪ್ರಮುಖವಾದ ಮಾಹಿತಿಯೊಂದಿದೆ. ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಅಂಗವಾಗಿ ದೇವಾಲಯದ ವಿವಿಧ ಸೇವೆಗಳಲ್ಲಿ ವ್ಯತ್ಯಯ ಉಂಟಾಗಲಿದೆ. ವಿವಿಧ ಸೇವೆಗಳನ್ನು ಮಾಡಿಸಲು ದೇವಾಲಯಕ್ಕೆ ಭೇಟಿ ನೀಡುವ ಭಕ್ತರು ಈ ಕುರಿತು ಮಾಹಿತಿಯನ್ನು ಪಡೆದು ತಮ್ಮ ದೇವಾಲಯ ಭೇಟಿಯ ಯೋಜನೆ ರೂಪಿಸಬಹುದು.
ಚಂಪಾಷಷ್ಠಿ ಮಹೋತ್ಸವ-2024ರ ಅಂಗವಾಗಿ ನವೆಂಬರ್ 27 ರಿಂದ ಡಿಸೆಂಬರ್ 12ರ ತನಕ ಕುಕ್ಕೆ ಸುಬ್ರಮಣ್ಯ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. 7/12/2024ರ ಶನಿವಾರ ಚಂಪಾಷಷ್ಠಿ ಮಹಾರಥೋತ್ಸವ ನಡೆಯಲಿದೆ. ಈ ಹಿನ್ನಲೆಯಲ್ಲಿ ವಿವಿಧ ಸೇವೆಗಳಲ್ಲಿ ವ್ಯತ್ಯಯ ಉಂಟಾಗಲಿದೆ.

ಸೇವೆ ಲಭ್ಯವಿರದ ದಿನಾಂಕದ ವಿವರ: ಯಾವ ಯಾವ ದಿನಾಂಕಗಳಂದು ಸೇವೆಗಳು ಲಭ್ಯವಿರುವುದಿಲ್ಲ ಎಂದು ಕುಕ್ಕೆ ಸುಬ್ರಮಣ್ಯ ದೇವಾಲಯ ಭಕ್ತರ ಅನುಕೂಲಕ್ಕಾಗಿ ಮಾಹಿತಿಯನ್ನು ನೀಡಿದೆ. ದೇವಾಲಯದ ಪ್ರಮುಖ ಸೇವೆಗಳಲ್ಲಿ ಒಂದಾದ ಸರ್ಪ ಸಂಸ್ಕಾರ ನವೆಂಬರ್ 25 ರಿಂದ ಡಿಸೆಂಬರ್ 12ರ ತನಕ ಲಭ್ಯವಿರುವುದಿಲ್ಲ ಎಂದು ಮಾಹಿತಿಯನ್ನು ನೀಡಲಾಗಿದೆ.
ಆದರೆ ಇತರೆ ಸೇವೆಗಳು ಎಂದಿನಂತೆ ಲಭ್ಯ ವಿರುತ್ತದೆ. ಲಕ್ಷದೀಪೋತ್ಸವ, ಚೌತಿ, ಪಂಚಮಿ ಮತ್ತು ಷಷ್ಠಿ ದಿನ ಕೆಲವು ಸೇವೆಗಳು ಲಭ್ಯವಿರುವುದಿಲ್ಲ. ನವೆಂಬರ್ 26ರಂದು ವಾರ್ಷಿಕ ಚಂಪಾಷ್ಠಿ ಜಾತ್ರೆಯ ಅಂಗವಾಗಿ ಮೂಲಮೃತಿಕಾ ಪ್ರಸಾದ ತೆಗೆಯುವ ಕಾರ್ಯದ ಕಾರಣ ಬೆಳಗ್ಗೆಯಿಂದ ಮಧ್ಯಾಹ್ನ 2 ಗಂಟೆಯ ತನಕ ದೇವರ ದರ್ಶನ ಮತ್ತು ಸೇವೆಗಳು ಇರುವುದಿಲ್ಲ. 2 ಗಂಟೆ ಬಳಿಕ ದೇವರ ದರ್ಶನ, ಕೆಲವು ಸೇವೆಗಳು ಲಭ್ಯವಿದೆ.
ನವೆಂಬರ್ 30ರ ಲಕ್ಷದೀಪೋತ್ಸವ, ಡಿಸೆಂಬರ್ 5ರ ಚೌತಿ, ಡಿಸೆಂಬರ್ 6 ಪಂಚಮಿ ದಿನ ರಾತ್ರಿ ಹೊತ್ತಿನಲ್ಲಿ ಪ್ರಾರ್ಥನೆ ಇರುವುದಿಲ್ಲ. ಚಂಪಾಷಷ್ಠಿ ದಿನವಾದ ಡಿಸೆಂಬರ್ 7ರಂದು ಮಧ್ಯಾಹ್ನ ಪ್ರಾರ್ಥನೆ ಸೇವೆ ಇರುವುದಿಲ್ಲ. ಅಲ್ಲದೇ ಆಶ್ಲೇಷ ಬಲಿ, ನಾಗ ಪ್ರತಿಷ್ಠೆ ಸೇವೆಗಳು ಚಂಪಾಷಷ್ಠಿ ದಿನ ಲಭ್ಯವಿ ಇರುವುದಿಲ್ಲ ಎಂದು ದೇವಾಲಯದ ಪ್ರಕಟಣೆ ತಿಳಿಸಿದೆ.
ಅಲ್ಲದೇ ನವೆಂಬರ್ 30, ಡಿಸೆಂಬರ್ 5, ಡಿಸೆಂಬರ್ 6, ಡಿಸೆಂಬರ್ 7, ಡಿಸೆಂಬರ್ 12ರಂದು ಪಂಚಾಮೃತ ಮಹಾಭಿಷೇಕ ಸೇವೆ ಇರುವುದಿಲ್ಲ. ನವೆಂಬರ್ 27 ರಿಂದ ಡಿಸೆಂಬರ್ 12ರ ತನಕ ಆಶ್ಲೇಷ ಬಲಿ ಸೇವೆ ಇರುವುದಿಲ್ಲ.
ನವೆಂಬರ್ 27ರಂದು ರಾಮ ಲಕ್ಷ್ಮಣ ಎಂಬ ಜೋಡು ಕೊಪ್ಪರಿಗೆ ಏರುವ ಮೂಲ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಚಂಪಾ ಷಷ್ಠಿ ಜಾತ್ರಾ ಮಹೋತ್ಸವವು ಆರಂಭಗೊಳ್ಳಲಿದೆ. ಡಿಸೆಂಬರ್ 7ರ ಪ್ರಾತಃ ಕಾಲ ಚಂಪಾಷಷ್ಠಿ ಮಹಾರಥೋತ್ಸವ ನಡೆಯಲಿದೆ. ಡಿಸೆಂಬರ್ 12ರಂದು ಕೊಪ್ಪರಿಗೆ ಇಳಿದು ಶ್ರೀ ದೇವರಿಗೆ ನೀರ ಬಂಡಿ ಉತ್ಸವ ನಡೆದು ಶ್ರೀ ಕ್ಷೇತ್ರದ ದೈವಗಳಿಗೆ ನಡವಳಿ ನಡೆಯುವ ಮೂಲಕ ಮುಕ್ತಾಯವಾಗಲಿದೆ.
ದೇವಾಲಯದ ಎಲ್ಲಾ ಭಕ್ತರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಗಂಧ ಪ್ರಸಾದ ಸ್ವೀಕರಿಸಿ ಶ್ರೀ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಮನವಿ ಮಾಡಲಾಗಿದೆ. ಕುಕ್ಕೆ ಸುಬ್ರಮಣ್ಯ ದೇವಾಲಯಕ್ಕೆ ಭೇಟಿ ನೀಡುವ ಭಕ್ತರು, ಸೇವೆಗಳ ಕುರಿತು ಮಾಹಿತಿ ತಿಳಿದು ಪ್ರಯಾಣವನ್ನು ಕೈಗೊಳ್ಳಿ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಸುಬ್ರಮಣ್ಯ ದೇವಾಲಯಕ್ಕೆ ನಮ್ಮ ರಾಜ್ಯ ಮಾತ್ರವಲ್ಲ ಹೊರ ರಾಜ್ಯ, ಹೊರ ದೇಶಗಳಲ್ಲಿಯೂ ಭಕ್ತರಿದ್ದಾರೆ. ವಿವಿಧ ಸೇವೆಗಳನ್ನು ಮಾಡಿಸಲು ದೇವಾಲಯಕ್ಕೆ ಭೇಟಿ ನೀಡುತ್ತಾರೆ.
ಈ ವಾರ ಭಾರತೀಯ ಕ್ರಿಕೆಟ್ ತಂಡದ ಆಟಗಾರ ಸೂರ್ಯಕುಮಾರ್ ಯಾದವ್ ಅವರು ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಕುಟುಂಬ ಸಮೇತರಾಗಿ ಭೇಟಿ ಕೊಟ್ಟು ಸುಬ್ರಹ್ಮಣ್ಯ ದೇವರಿಗೆ ಮಹಾಭಿಷೇಕವನ್ನು ನೆರವೇರಿಸಿದ್ದಾರೆ.
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications