'ನಾನು ಸೈನಿಕನಾಗಿದ್ದರೆ ನೂರು ಭಯೋತ್ಪಾದಕರನ್ನು ಕೊಲ್ಲುತ್ತಿದ್ದೆ'

ಮಂಗಳೂರು, ಫೆಬ್ರವರಿ 18: ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಸಿಆರ್ ಪಿ ಎಫ್ ಯೋಧರ ಮೇಲೆ ಉಗ್ರರು ನಡೆಸಿದ ದಾಳಿ ಬಗ್ಗೆ ದೇಶದೆಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದ್ದು, ಪ್ರತೀಕಾರಕ್ಕೆ ಒತ್ತಾಡ ಹೆಚ್ಚಾಗುತ್ತಿದೆ.

ಉಗ್ರರ ಈ ಪೈಶಾಚಿಕ ಕೃತ್ಯದ ವಿರುದ್ಧ ಜನಸಾಮಾನ್ಯರು ಮಾತ್ರವಲ್ಲದೇ, ಸಂತರು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಉಗ್ರರ ಈ ಹೇಯಕೃತ್ಯದ ವಿರುದ್ಧ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಕಿಡಿಕಾರಿದ್ದಾರೆ.

ಪುತ್ತೂರಿನಲ್ಲಿ ಭಾನುವಾರ ಸಂಜೆ (ಫೆ.17) ಆಯೋಜಿಸಲಾಗಿದ್ದ ಹಿಂದೂ ಚೈತನ್ಯ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾನೊಬ್ಬ ಸಂತ , ಒಂದು ವೇಳೆ ಸೈನಿಕನಾಗಿರುತ್ತಿದ್ದರೆ ಒಂದಲ್ಲ, ಎರಡಲ್ಲ ನೂರು ಭಯೋತ್ಪಾದಕರನ್ನು ಕೊಲ್ಲುತ್ತಿದ್ದೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Vajra Dehi Swamiji condemned terror attack

ಈ ದೇಶದಲ್ಲಿ ನಡೆಯುತ್ತಿರುವಂತಹ ದೇಶದ್ರೋಹಿ ಚಟುವಟಿಕೆಗಳನ್ನು ಒದ್ದೋಡಿಸುವ ಸಲುವಾಗಿ ಪುತ್ತೂರಿನ ಒಡೆಯ ಮಹಾಲಿಂಗೇಶ್ವರ ನಮ್ಮ ಸೈನಿಕರಿಗೆ ಆಶಿರ್ವಾದಿಸಲಿ ಎಂದು ಪ್ರಾರ್ಥಿಸಿದರು. ಮೂರು ದಿನದ ಮೊದಲು ಈ ದೇಶದಲ್ಲಿ ಮಹಾ ದುರ್ಘಟನೆ ನಡೆದಿದೆ. ಇದರಲ್ಲಿ ನಮ್ಮ ವೀರಯೋಧರನ್ನು ಕಳೆದುಕೊಂಡಿದ್ದೇವೆ.

ಈ ದುರ್ಘಟನೆಗೆ ಕಾರಣವಾದ ಪಾಪಿ ಪಾಕಿಸ್ತಾನವನ್ನು ವಿಶ್ವದ ಭೂಪಟದಿಂದಲೇ ತೆಗೆದು ಹಾಕುವಂತೆ ಮಾಡಲು 56 ಇಂಚಿನ ಎದೆಯುಳ್ಳ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯವರ ಬೆನ್ನ ಹಿಂದೆ ನಿಂತು ಬೆಂಬಲಿಸಬೇಕಾಗಿದೆ. ಭಯೋತ್ಪಾದಕರು ಎಲ್ಲಿದ್ದಾರೆ? ನಮ್ಮ ದೇಶದ ಒಳಗೇ ಇದ್ದಾರೆ. ಪಾಪಿ ಪಾಕಿಸ್ತಾನದಿಂದ ತರಬೇತಿ ಪಡೆದು ಬರುವ ಉಗ್ರರಿಗೆ ಬೆಂಬಲ ನೀಡಿ ವಿವಾದ ಹುಟ್ಟು ಹಾಕುವ ಬುದ್ಧಿ ಜೀವಿಗಳು ನಮ್ಮ ಮಧ್ಯೆ ಇದ್ದಾರೆ ಎಂದರು.

ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿದ್ದು ವಿರುದ್ಧ ಕಿಡಿಕಾರಿದ ಅವರು, ನಾವು ನವಜೋತ್ ಸಿಂಗ್ ಸಿದ್ದು ಅವರನ್ನು ರಾಜಕಾರಣಿಯಾಗಿ ಬೆಳೆಸಿದೆವು. ಆದರೆ ಆತ ಪಾಕಿಸ್ತಾನಕ್ಕೆ ಬಹು ಪರಾಕ್ ಎಂದ. ಸಿದ್ದು ಅಂತವರನ್ನು ಪಾಕಿಸ್ತಾನಕ್ಕೆ ಓಡಿಸಬೇಕು ಎಂದು ಕಿಡಿಕಾರಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+