ಸಿದ್ಧಾರ್ಥ ನಾಪತ್ತೆ ಪ್ರಕರಣ: ನೇತ್ರಾವತಿ ಸೇತುವೆಗೆ ಶಾಸಕ ಯು.ಟಿ.ಖಾದರ್ ಭೇಟಿ
ಮಂಗಳೂರು, ಜುಲೈ 30: ಕೆಫೆ ಕಾಫಿ ಡೇ ಸ್ಥಾಪಕ, ಕರ್ನಾಟಕದ ಪ್ರಮುಖ ಉದ್ಯಮಿ ವಿ.ಜಿ ಸಿದ್ದಾರ್ಥ ಅವರು ಮಂಗಳೂರು-ಉಳ್ಳಾಲ ರಸ್ತೆ ನಾಪತ್ತೆಯಾಗಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಈ ಸಂದರ್ಭ ಶಾಸಕ ಯು.ಟಿ.ಖಾದರ್ ಅವರು, ಸಿದ್ಧಾರ್ಥ ಅವರು ನಾಪತ್ತೆಯಾದ ನೇತ್ರಾವತಿ ಸೇತುವೆ ಬಳಿ ತೆರಳಿದ್ದಾರೆ.
ಈ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, "ನಾನು ಎಸ್.ಎಂ.ಕೃಷ್ಣ ಹಾಗೂ ಹಲವು ಸ್ನೇಹಿತರು ಜೊತೆ ಮಾತನಾಡಿದ್ದೇನೆ. ಇದು ತುಂಬಾ ಬೇಸರದ ಸಂಗತಿ. ಆಗರ್ಭ ಶ್ರೀಮಂತ ಸಿದ್ದಾರ್ಥ ಅವರಿಗೆ ಇಂತಹ ಪರಿಸ್ಥಿತಿ ಬರಬಾರದಿತ್ತು. ಸಾವಿರಾರು ಜನರಿಗೆ ಅನ್ನ ಹಾಕುತ್ತಿದ್ದವರು ಅವರು" ಎಂದು ಬೇಸರ ವ್ಯಕ್ತಪಡಿಸಿದರು.

ಮಾಸ್ತಿಗುಡಿ ಸಿನಿಮಾ ದುರಂತದ ವೇಳೆ ಕಾರ್ಯಾಚರಣೆ ಮಾಡಿದ್ದ ಬೆಂಗ್ರೆ ಮುಳುಗುತಜ್ಞರಿಂದ ಶೋಧ ಕಾರ್ಯ ಮುಂದುವರೆದಿದೆ. ಎನ್ ಡಿಆರ್ ಎಫ್ ತಂಡದಿಂದಲೂ ಶೋಧಕಾರ್ಯ ನಡೆಯುತ್ತಿದೆ.












Click it and Unblock the Notifications